ಶ್ರೀ ಕೃಷ್ಣ ಜನ್ಮಾಷ್ಟಮಿ: ಉಡುಪಿ ಕೃಷ್ಣ ಮಠದಲ್ಲಿ ಭಕ್ತರಿಗೆ ಹಂಚಲು ರೆಡಿಯಾಗ್ತಿದೆ ಲಡ್ಡು, ಚಕ್ಕುಲಿ

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದಲ್ಲಿ ಉಂಡೆ, ಚಕ್ಕುಲಿಗಳ ತಯಾರಿ ಭರದಿಂದ ಸಾಗಿದೆ. ಇಲ್ಲಿದೆ ನೋಡಿ ಅಷ್ಟಮಿಯಂದು ಭಕ್ತರಿಗೆ ಸೇರಲು ಸಿದ್ಧಗೊಂಡಿರುವ ಲಡ್ಡು, ಚಕ್ಕುಲಿ ತಯಾರಿಯ ವಿವಿಧ ಚಿತ್ರಗಳು
ನೀಲಾವರ: ಮರ ಬಿದ್ದು ರಸ್ತೆ ಸಂಚಾರ ಸ್ಥಗಿತ

ನೀಲಾವರ: ನೀಲಾವರ ಕ್ರಾಸ್ ಹೆಬ್ಬಲಸಿನ ಕಟ್ಟೆ ಹತ್ತಿರ ವಿದ್ಯುತ್ ಕಂಬಗಳ ಮೇಲೆ ಬೃಹತ್ ಮರವೊಂದು ಉರುಳಿಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು, ಇದರಿಂದ ಇಂದು (ಆ.28) ಹಾಗೂ ನಾಳೆ (ಆ.29) ಮಧ್ಯಾಹ್ನದವರೆಗೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬದಲಿ ಮಾರ್ಗವಾಗಿ ನೀರಾವರ ಗುಡ್ಡೆಯಿಂದ ಗ್ರಾಮಪಂಚಾಯತ್ ಸಮೀಪದ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶವಿರುತ್ತದೆ. ಗ್ರಾಮಸ್ಥರು ಸಹಕರಿಸಬೇಕಾಗಿ ಗ್ರಾಪಂ ವಿನಂತಿಸಿಕೊಂಡಿದೆ.
ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ

ಉಡುಪಿ: ಜಗತ್ತಿನ ಅತಿ ದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ರಿಟೇಲ್ ಮಾರಾಟದ ಸಂಸ್ಥೆಯಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಅಪ್ಪಟ ಭಾರತೀಯ ಸಂಸ್ಕೃತಿಯ ಸಾಂಪ್ರದಾಯಿಕ ಒಡವೆಗಳ ಅನಾವರಣ ಕಾರ್ಯಕ್ರಮವು ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಉಡುಪಿ ಮಳಿಗೆಯಲ್ಲಿ ರೂಪದರ್ಶಿಗಳಾದ ಮಿಸ್ಟರ್ ಅಂಡ್ ಮಿಸ್ ಟೀನ್ ಇಂಡಿಯಾ ಶಿರಿಯನ್ ನಿಖಿತಾ ಜೋಸೆಫ್,ಟೀಮ್ ಕರ್ನಾಟಕ 2021 ಕುಮಾರಿ ದಿಶಾಲಿ, ಭರತ ನಾಟ್ಯ ವಿದ್ವಾತ್ ಕುಮಾರಿ ಸಂಸ್ಕೃತಿ, ಟಾಪ್ ಮಾಡೆಲ್ ಆಫ್ ಇಂಡಿಯಾ ಸ್ಪರ್ಧಿ ಕುಮಾರಿ ಲಿಖಿತ ಇವರು ಬ್ರೈಡ್ಸ್ […]
ಶ್ರೀರಾಮಸೇನೆಗೆ ಜಯರಾಂ ಅಂಬೆಕಲ್ಲು ರಾಜೀನಾಮೆ

ಉಡುಪಿ: ಶ್ರೀರಾಮಸೇನೆಯ ರಾಜ್ಯ ನಾಯಕನ ಕಾರ್ಯವೈಖರಿ ಬಗ್ಗೆ ಬೇಸತ್ತು ಸಂಘಟನೆಗೆ ಜಯರಾಂ ಅಂಬೆಕಲ್ಲು ರಾಜೀನಾಮೆ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಶ್ರೀರಾಮಸೇನೆಯ ಸ್ಥಾಪಕ ನಗರ ಉಪಾಧ್ಯಕ್ಷಾಗಿದ್ದ ಜಯರಾಂರವರು ತದ ನಂತರ ವಿವಿಧ ಜವಾಬ್ದಾರಿ ನಿರ್ವಹಿಸಿ, ಜಿಲ್ಲಾಧ್ಯಕ್ಷರಾಗಿ ಎಲ್ಲಾ ಜನರನ್ನು ಸಮಾನವಾಗಿ ಕೊಂಡೊಯ್ದು ಸಂಘಟನೆಯನ್ನು ರಾಜ್ಯ ಮಟ್ಟದಲ್ಲೇ ಗುರುತಿಸಲು ಕಾರಣೀಭೂತರಾದವರು. ಈಗ ರಾಜ್ಯ ಪ್ರಧಾನ ಕಾರ್ಯದರ್ಶಿಯವರ ಬೇಜವ್ದಾರಿತನದಿಂದ ಶ್ರೀ ರಾಮಸೇನೆಗೆ ರಾಜೀನಾಮೆಯನ್ನು ನೀಡಿದ್ದಾರೆ ಎಂಬುದು ವಿಪರ್ಯಾಸ. ಹಿಂದುತ್ವ ಮತ್ತು ಸಿದ್ದಾಂತ ದಲ್ಲಿ ರಾಜಿ ಮಾಡಿಕೊಳ್ಳದ ಜಯರಾಂ ಅಂಬೆಕಲ್ಲು ರವರು ತಮ್ಮ […]
ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಗೆ ರಾಜ್ಯ ಸರಕಾರದ ದಿಟ್ಟ ಕ್ರಮ ಅಭಿನಂದನೀಯ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಗೋಹತ್ಯೆ ನಿಷೇಧ ಕಾನೂನಿಗೆ ಪೂರಕವಾಗಿ ಪ್ರತೀ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಗೆ ಒತ್ತು ನೀಡಿ ಅನುದಾನವನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ದಿಟ್ಟ ಕ್ರಮ ಅಭಿನಂದನೀಯ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪಿಸಲು ಅಕ್ಟೋಬರ್ 2, 2021ರ ಗಡುವನ್ನು ವಿಧಿಸಿರುವ ರಾಜ್ಯ ಸರಕಾರ ಪ್ರತೀ ಜಿಲ್ಲೆಗೆ ರೂ.24 ಲಕ್ಷಗಳ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ […]