ಮಂಗಳೂರು: ಮಂಗಳೂರಿನ ರಥಬೀದಿಯ ವೆಂಕಟರಮಣ ದೇವಾಲಯದ ಬಳಿಯ ಬೃಹತ್ ಅಶ್ವಥ ಮರವೊಂದು ಇಂದು ಬೆಳಿಗ್ಗೆ ಧರೆಗುರುಳಿಬಿದ್ದ ಪರಿಣಾಮ ಜೆಸಿಬಿ, ಕಾರು ಹಾಗೂ ನೀರಿನ ಟ್ಯಾಂಕರ್ ಜಖಂಗೊಂಡಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸುಮಾರು ಇನ್ನೂರು ವರ್ಷಕ್ಕಿಂತಲೂ ಹಳೆಯ ಅಶ್ವತ್ಥ ಮರ ಇದಾಗಿದ್ದು, ಬುಡದಿಂದ ಮುರಿದು ಬಿದ್ದಿದೆ. ಮಂಗಳೂರಿನ ರಥಬೀದಿಯ ಪ್ರಮುಖ ಆಕರ್ಷಣೆ ಹಾಗೂ ಜನರ ಪೂಜ್ಯ ಭಾವನೆಯ ಕೇಂದ್ರವಾಗಿತ್ತು.