ಗಂಗೊಳ್ಳಿ: ಚಲಿಸುತ್ತಿದ್ದ ಲಾರಿಯ ಚಕ್ರದಡಿಗೆ ಸಿಲುಕಿ ಎರಡು ದನಗಳು ಸಾವು

ಗಂಗೊಳ್ಳಿ: ರಸ್ತೆಗೆ ಅಡ್ಡ ಬಂದ ದನಗಳನ್ನು ರಕ್ಷಿಸಲು ಹೋಗಿ ಲಾರಿಯೊಂದು ಹೆದ್ದಾರಿ ಮಧ್ಯದ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಳ್ಳಿಕಟ್ಟೆ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ್ದು, ಘಟನೆಯಲ್ಲಿ ಲಾರಿಯ ಚಕ್ರದಡಿಗೆ ಸಿಲುಕಿ ಎರಡು ದನಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಲಾರಿ ಚಾಲಕ ಹಾಗೂ ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಕುಂದಾಪುರದಿಂದ ಬೈಂದೂರು ಕಡೆ ತೆರಳುತಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಅಣ್ಣಪ್ಪ ಪೂಜಾರಿ ದೆಂದೂರು ಅವರಿಗೆ ಆದಿಗ್ರಾಮೋತ್ಸವ ಯುವ ಸಿರಿ ಗೌರವ

ಕಾರ್ಕಳ: ಇಲ್ಲಿನ ಕಡ್ತಲ ಸಿರಿಬೈಲು ಬರ್ಭರೇಶ್ವರ ದುರ್ಗಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ಮೂರನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ ನಾಡು-ನುಡಿಯ ಅನನ್ಯ ಸಾಧನೆಗಾಗಿ ಅಣ್ಣಪ್ಪ ಪೂಜಾರಿ ದೆಂದೂರು ಅವರಿಗೆ (ಸಂಘಟನೆ-ಸೇವೆ) ‘ಆದಿಗ್ರಾಮೋತ್ಸವ ಯುವ ಸಿರಿ ಗೌರವ’ ನೀಡಿ ಅಭಿನಂದಿಸಲಾಯಿತು. ತ್ರಿಭಾಷಾ ಸಾಹಿತಿ ಮೌರಿಸ್ ತಾವ್ರೊ, ಅಜೆಕಾರು, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ನಿವೃತ್ತ ಶಿಕ್ಷಣ ಇಲಾಖೆಯ ಪರಿವೀಕ್ಷಕ ಕರುಣಾಕರ್ ಹೆಗ್ಡೆ , ಅಂತರರಾಷ್ಟ್ರೀಯ ಯೋಗ ಸಾಧಕ ಶೇಖರ್ ಕಡ್ತಲ, ಅಖಿಲ ಕರ್ನಾಟಕ […]

ಕಾರ್ಕಳ: ಮೂರನೇ ಆದಿಗ್ರಾಮೋತ್ಸವ; ಗ್ರಾಮ ಸಾಹಿತ್ಯ ಸಮ್ಮೇಳನ

ಕಾರ್ಕಳ: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಮಿತಿ, ಕರ್ನಾಟಕ ಸಾಹಿತ್ಯ ಪರಿಷತ್ತು ಅಜೆಕಾರು ಹೋಬಳಿ, ಲಯನ್ಸ್ ಕ್ಲಬ್ ಮುನಿಯಾಲು, ದುರ್ಗಾಪರಮೇಶ್ವರಿ ಭಜನಾಮಂಡಳಿ ಸಿರಿಬೈಲು ಇದರ ಸಹಯೋಗದೊಂದಿಗೆ ಮೂರನೇ ಆದಿಗ್ರಾಮೋತ್ಸವ; ಗ್ರಾಮ ಸಾಹಿತ್ಯ ಸಮ್ಮೇಳನ ಕಡ್ತಲ ಸಿರಿಬೈಲಿನ ಬರ್ಬರೇಶ್ವರ ದುರ್ಗಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಇಂದು ನಡೆಯಿತು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಮ್ಮೇಳನವನ್ನು ಉದ್ಘಾಟಿಸಿದರು. ಸಾಹಿತಿ ಮೌರಿಸ್ ತಾವ್ರೊ ಅಜೆಕಾರು ಸಮ್ಮೇಳನದ ಅಧ್ಯಕ್ಷತೆ ವಹಿಸಿ‌ ಮಾತನಾಡಿ, ಆಂಗ್ಲ ಮಾಧ್ಯಮದ ಮಕ್ಕಳು ಕನ್ನಡ ಮಾಧ್ಯಮದ ಮಕ್ಕಳೊಂದಿಗೆ ಅಂತರ […]

ಕರಕುಶಲ ವಸ್ತುಗಳ ಜತೆ ಮಣ್ಣಿನ ಉತ್ಪನ್ನಗಳಿಗೆ ರಾಷ್ಟ್ರಮಟ್ಟದಲ್ಲಿ ಮಾರುಕಟ್ಟೆ ಒದಗಿಸಲಾಗುವುದು-ಬೇಳೂರು ರಾಘವೇಂದ್ರ ಶೆಟ್ಟಿ

ಉಡುಪಿ: ರಾಜ್ಯದ ಕರಕುಶಲ ವಸ್ತುಗಳು ಮತ್ತು ಗುಡಿಕೈಗಾರಿಕೆಗಳಿಗೆ ಉತ್ತೇಜನ ನೀಡಿ, ಕರಕುಶಲಕರ್ಮಿಗಳಿಗೆ ಸ್ವಾವಲಂಬಿ ಬದುಕು ರೂಪಿಸಲು ಕ್ರಮಕೈಗೊಳ್ಳುವ ಜತೆಗೆ ಮಣ್ಣಿನ ಉತ್ಪನ್ನಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾರುಕಟ್ಟೆ ದೊರಕಿಸಿ ಕೊಡಲಾಗುವುದು ಎಂದು ರಾಜ್ಯ ಕರಕುಶಲ ನಿಗಮದ ಅಧ್ಯಕ್ಷರಾದ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಭರವಸೆ ನೀಡಿದ್ದಾರೆ. ಕುಂದಾಪುರ ತಾಲ್ಲೂಕಿನ ಆಲೂರು ಗ್ರಾಮದ ಗುರುವಂದನಾ ಪಾಟರಿ ಪ್ರೊಡಕ್ಟ್ ಸಂಸ್ಥೆಗೆ ಶನಿವಾರ ಭೇಟಿಕೊಟ್ಟು ಅಲ್ಲಿನ ಮಡಕೆ ತಯಾರಿಕೆ ಮತ್ತು ಮಣ್ಣಿನ ಉತ್ಪನ್ನಗಳ ಕುರಿತು ಮಾಹಿತಿ ಪಡೆದ ಅವರು, ಅಲ್ಲಿನ ಕರಕುಶಲ […]

ಉಡುಪಿ: ಕಡಲಿನಲ್ಲಿ ಪದ್ಮಾಸನ ಭಂಗಿಯಲ್ಲಿ 1.4 ಕಿ.ಮೀ ಈಜು; ಗಂಗಾಧರ್ ಕಡೆಕಾರ್ ಹೊಸ ದಾಖಲೆ

ಉಡುಪಿ: ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿಕೊಂಡು ಪದ್ಮಾಸನ ಭಂಗಿಯಲ್ಲಿ ದೈತ್ಯಾಕಾರದ ಅಲೆಗಳಿಗೆ ಎದೆವೊಡ್ಡಿ ಕಡಲಿನಲ್ಲಿ 1.4 ಕಿ.ಮೀ. ದೂರ ಈಜುವ ಮೂಲಕ 65ರ ಹರೆಯದ ಹಿರಿಯ ಈಜುಪಟು ಗಂಗಾಧರ್ ಜಿ. ಕಡೆಕಾರ್ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಗಂಗಾಧರ್ ಅವರು 1.400 ಕಿ.ಮೀ ದೂರವನ್ನು 1.13.03 ಗಂಟೆಯಲ್ಲಿ ತಲುಪುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದು ಇಂಡಿಯನ್ ಬುಕ್ ಆಫ್ ರೆಕಾರ್ಡ್ ‌ನಲ್ಲಿ ದಾಖಲಾದ ಪ್ರಥಮ ದಾಖಲೆಯಾಗಿದೆ. ಗಂಗಾಧರ್ ಪಡುಕರೆಯ […]