ಹಿರಿಯಡಕ ಕೊಂಡಾಡಿಯಲ್ಲಿ ಅರಣ್ಯ ಇಲಾಖೆಯ ಕಾಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಹಲವು ಅಕೇಶಿಯಾ ಮರಗಳು ಬೆಂಕಿಗೆ ಆಹುತಿಯಾಗಿದೆ.
ಕಾಡಿನ ಸಮೀಪ ಬೆಳೆದಿರುವ ಹುಲ್ಲಿಗೆ ಬಿದ್ದ ಬೆಂಕಿ ಕಿಡಿಯೂ ನೋಡು ನೋಡುತ್ತಿದ್ದಂತೆ ಇಡೀ ಕಾಡಿಗೆ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವು ಮರ ಗಿಡಗಳು ಸುಟ್ಟು ಹೋಗಿವೆ.
ಸ್ಥಳೀಯರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅಗ್ನಿಶಾಮಕ ದಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಹಿರಿಯಡಕ ವಲಯದ ಸದಸ್ಯರಾದ ನಿಖಿಲ್ ರಾಜ್, ಸುರೇಶ್, ಶಿವಾನಂದ, ಸುಮಂತ್ ಹಾಗೂ ಗ್ರಾಮಸ್ಥರು ಅಗ್ನಿಶಾಮಕ ಇಲಾಖೆಗೆ ಸಹಕರಿಸಿದರು.