ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡಬೇಡಿ ಸದೆಬಡಿಯಿರಿ: ಪ್ರಧಾನಿ ಮೋದಿ

ನವದೆಹಲಿ: ಕೇಂದ್ರೀಯ ತನಿಖಾ ದಳದ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕೆ ಭ್ರಷ್ಟಾಚಾರ ಅತಿ ದೊಡ್ಡ ತಡೆಗೋಡೆಯಾಗಿದ್ದು, ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಸುಮ್ಮನೆ ಬಿಡಬೇಡಿ ಸದೆಬಡಿಯಿರಿ ಎಂದು ಹೇಳಿದರು. ಭ್ರಷ್ಟರ ಅಧಿಕಾರ ಹಾಗೂ ಅವರ ವಾತಾವರಣಗಳನ್ನು ಕಂಡು ತನಿಖಾ ಸಂಸ್ಥೆಗಳು ಹಿಂಜರಿಯಬೇಕಾಗಿಲ್ಲ. ಭ್ರಷ್ಟಾಚಾರ ನಡೆಸುವ ವ್ಯಕ್ತಿಯನ್ನು ಸುಮ್ಮನೆ ಬಿಡಬಾರದು ಎನ್ನುವುದು ದೇಶದ ಜನರ ಹೆಬ್ಬಯಕೆ ಕೂಡ ಹೌದು. ನಿಮ್ಮ ಪ್ರಯತ್ನದಲ್ಲಿ ಯಾವುದೇ ಕೊರತೆ ಇರಬಾರದು. ಯಾವುದೇ ಭ್ರಷ್ಟಾಚಾರಿಯನ್ನು ಸುಮ್ಮನೆ […]

ಮುಂದಿನ ಎರಡು ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ 

ಬೆಂಗಳೂರು:ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗುತ್ತಿದ್ದು, ನಿನ್ನೆ ಸಾಕಷ್ಟು ಕಡೆ ಧಾರಾಕಾರ ಮಳೆಯಾಗಿದೆ. ರಾಜ್ಯದಲ್ಲಿ ಎರಡು ದಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬುಧವಾರದವರೆಗೆ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ತುಮಕೂರಿನಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದ್ದು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣದ ಕೆಲವು ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು […]

ಹಿರಿಯಡಕ ಕೊಂಡಾಡಿಯ ಕಾಡಿನಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ ಶೌರ್ಯ ವಿಪತ್ತು‌ ತಂಡ

ಹಿರಿಯಡಕ ಕೊಂಡಾಡಿಯಲ್ಲಿ ಅರಣ್ಯ ಇಲಾಖೆಯ ಕಾಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಹಲವು ಅಕೇಶಿಯಾ ಮರಗಳು ಬೆಂಕಿಗೆ ಆಹುತಿಯಾಗಿದೆ. ಕಾಡಿನ ಸಮೀಪ ಬೆಳೆದಿರುವ ಹುಲ್ಲಿಗೆ ಬಿದ್ದ ಬೆಂಕಿ ಕಿಡಿಯೂ ನೋಡು ನೋಡುತ್ತಿದ್ದಂತೆ ಇಡೀ ಕಾಡಿಗೆ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವು ಮರ ಗಿಡಗಳು ಸುಟ್ಟು ಹೋಗಿವೆ. ಸ್ಥಳೀಯರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ‌ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅಗ್ನಿಶಾಮಕ ದಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಹಿರಿಯಡಕ […]

ಯುರೋಫಿನ್ಸ್ ಸಹಯೋಗದೊಂದಿಗೆ ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯದಲ್ಲಿ ಸುಧಾರಿತ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಪ್ರಯೋಗಾಲಯ ಸ್ಥಾಪನೆ

ಬೆಂಗಳೂರು: ಸುಧಾರಿತ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಪ್ರಯೋಗಾಲಯವನ್ನು ಸ್ಥಾಪಿಸಲು ಭಾರತದ ಯುರೋಫಿನ್ಸ್ ಗ್ರೂಪ್ ಆಫ್ ಕಂಪನಿಯು ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಪ್ರಯೋಗಾಲಯವು ಇತ್ತೀಚಿನ ಉಪಕರಣಗಳನ್ನು ಹೊಂದಿದ್ದು, ರಸಾಯನಶಾಸ್ತ್ರ ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ನೀಡುತ್ತದೆ. ಯುರೋಫಿನ್ಸ್ ಅಡ್ವಿನಸ್, ಯೂರೋಫಿನ್ಸ್ ಅನಾಲಿಟಿಕಲ್ ಸರ್ವಿಸಸ್ ಮತ್ತು ಯೂರೋಫಿನ್ಸ್ ಅಮರ್ ಇಮ್ಯುನೊಡಯಾಗ್ನೋಸ್ಟಿಕ್ಸ್ನ ಸಿಎಸ್‌ಆರ್ ಕಾರ್ಯಕ್ರಮದ ಅಡಿಯಲ್ಲಿ ಈ ಉಪಕ್ರಮವು ಮಾನವ ಬಂಡವಾಳವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದ ಆತ್ಮನಿರ್ಭರ ಕಾರ್ಯಕ್ರಮವನ್ನು ಬೆಂಬಲಿಸುವ ಯುರೋಫಿನ್ಸ್ ಸಂಸ್ಥೆಯ ಬದ್ಧತೆಯ ಒಂದು ಭಾಗವಾಗಿದೆ. […]

ಮಂಗಳೂರು: 22 ಯಾರ್ಡ್ಸ್ ಸ್ಕೂಲ್ ಆಫ್ ಕ್ರಿಕೆಟ್ ನಲ್ಲಿ ಬೇಸಿಗೆ ಕ್ರಿಕೆಟ್ ಶಿಬಿರ ಆರಂಭ

ನಾವು ಮಂಗಳೂರು ನಗರದಲ್ಲಿ ಹೊರಾಂಗಣ ಮತ್ತು ಒಳಾಂಗಣ ಎರಡರಲ್ಲೂ ಬೆಳೆಯುತ್ತಿರುವ ಕ್ರಿಕೆಟ್ ಕೋಚಿಂಗ್ ಫೆಸಿಲಿಟಿಗಳಲ್ಲಿ ಒಂದಾಗಿ ನಮ್ಮನ್ನು ಪರಿಚಯಿಸಿಕೊಳ್ಳುತ್ತೇವೆ. ನಮ್ಮ ವೃತ್ತಿಪರ ತರಬೇತುದಾರರ ಪರಿಣತಿ ಮತ್ತು ಅನುಭವದೊಂದಿಗೆ ಕ್ರಿಕೆಟ್ ಉತ್ಸಾಹಿ ಹುಡುಗರು ಮತ್ತು ಹುಡುಗಿಯರಿಗೆ 360 ಡಿಗ್ರಿ ಕ್ರಿಕೆಟ್ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯನ್ನು ಒದಗಿಸುತ್ತೇವೆ. ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಬೋರ್ಡ್ ಆಫ್ ಕ್ರಿಕೆಟ್ ಕಂಟ್ರೋಲ್ ಇನ್ ಇಂಡಿಯಾ ಇದರ ಅರ್ಹ ತರಬೇತುದಾರ ಸ್ಯಾಮ್ಯುಯೆಲ್ ಜಯರಾಜ್ ಮುತ್ತು ಮತ್ತು ದೇವದಾಸ್ ನಾಯಕ್, ಪ್ರಸ್ತುತ 22 […]