ಕಡಿಮೆ ಕಲಿತರೂ ಇಲ್ಲಿದೆ ಕೆಲಸ, ಪುನರ್ವಸತಿ ಕಾರ್ಯಕರ್ತರ ನೇಮಕಾತಿ, ಆಸಕ್ತಿ ಇದ್ಯಾ, ಈಗಲೇ ಅರ್ಜಿ ಹಾಕಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಂಟಿಯಾಗಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನಿಸಿವೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯ ಕಚೇರಿ–01 ಮತ್ತು ವಲಯ ಕಚೇರಿ–07ರಲ್ಲಿ ಖಾಲಿ ಇರುವ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಯೋಜನೆಯ ಮುಖ್ಯ ಉದ್ದೇಶ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಪಿಂಚಣಿ, UDID ಕಾರ್ಡ್, ತರಬೇತಿ, ಉದ್ಯೋಗ ಸೌಲಭ್ಯಗಳು ಹಾಗೂ ಆರೋಗ್ಯ ಸೇವೆಗಳಂತಹ […]
ಮಂಗಳೂರಿನಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಾವಕಾಶ: NMPAಯಲ್ಲಿ12 ಮ್ಯಾನೇಜರ್ ಹುದ್ದೆಗಳ ನೇಮಕಾತಿ, ಸಂಬಳ ಎಷ್ಟು? ಏನು ಅರ್ಹತೆ !

ಮಂಗಳೂರು: New Mangalore Port Authority ಅಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಕೇಂದ್ರ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಎನ್‌ಎಂಪಿಎ ಇದೀಗ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 12 ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಮಂಗಳೂರಿನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ಚೀಫ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಹಾಗೂ […]
ನೀವಿನ್ನು ಮನೆಗೆ ಬೀಗ ಹಾಕಿ ಹಲವು ದಿನಗಳ ಕಾಲ ಹೊರಹೋಗಬೇಕಾದರೆ ಚಿಂತಿಸಬೇಕಿಲ್ಲ: ಇಲ್ಲಿದೆ ಒಂದು ಪ್ಲಾನ್

ಉಡುಪಿ: ಇಲ್ಲಿನ ಜಿಲ್ಲಾ ಪೊಲೀಸರು ಬೀಗ ಹಾಕಿದ ಮನೆಗಳ ಸುರಕ್ಷತೆಗೆ “ಲಾಕ್ಡ್ ಹೌಸ್ ಬೀಟ್ ಸಿಸ್ಟಮ್” (LHBS) ಎಂಬ ವಿನೂತನ ಯೋಜನೆ ಆರಂಭಿಸಿದ್ದಾರೆ. ಕೆಲಸ, ಪ್ರವಾಸ ಅಥವಾ ಇತರ ಕಾರಣಗಳಿಂದ ಮನೆಗೆ ಬೀಗ ಹಾಕಿ ಹೊರಡುವ ನಿವಾಸಿಗಳ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ಇಡಲಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಹಗಲು ಹಾಗೂ ರಾತ್ರಿ ವೇಳೆ ಮನೆಗಳಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಲಿದ್ದಾರೆ. ಪ್ರಯಾಣಕ್ಕೆ ತೆರಳುವವರು ಜಿಲ್ಲಾ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆ 0820-2526709 […]
ಕೃಷಿ ಭೂಮಿಯಲ್ಲಿ ಮನೆ ಕಟ್ಟೋ ಪ್ಲಾನ್ ನಿಮಗಿದ್ಯಾ? ಹಾಗಾದ್ರೆ ಈ ನಿಯಮ ನಿಮಗೆ ತಿಳಿದಿರ್ಲೇಬೇಕು

ಒಂದು ಸಣ್ಣದಾದರೂ ತೋಟ, ಜಮೀನು ಖರೀದಿಸುವುದು, ಅಲ್ಲೊಂದು ಪುಟ್ಟದಾದರೂ ಮನೆ ಕಟ್ಟಿ ನೆಮ್ಮದಿಯಿಂದ ಜೀವನ ನಡೆಸೋದು ಪ್ರತಿಯೊಬ್ಬರ ಕನಸು. ಭೂಮಿ ಖರೀದಿ ಅಥವಾ ಮನೆ ನಿರ್ಮಾಣ ಮಾಡುವ ಮುನ್ನ ಬಹುತೇಕ ಜನರಿಗೆ ಎದುರಾಗುವ ಸಾಮಾನ್ಯ ಪ್ರಶ್ನೆಗಳಲ್ಲಿಕೃಷಿ ಭೂಮಿಯಲ್ಲಿ ಮನೆ ಕಟ್ಟಬಹುದೇ? ಎಂಬುದೂ ಒಂದು. ಇದರ ಉತ್ತರ ಸರಳವಾಗಿಲ್ಲ. ಕೆಲವು ಕಾನೂನು ಕ್ರಮಗಳನ್ನು ಪಾಲಿಸಿದರೆ ಮಾತ್ರ ಮನೆ ನಿರ್ಮಾಣ ಸಾಧ್ಯ. ಕೃಷಿ ಭೂಮಿ ಎಂದರೇನು? ಕೃಷಿ ಭೂಮಿ ಎಂದರೆ ಬೆಳೆ ಬೆಳೆಸಲು, ಹಣ್ಣು-ತರಕಾರಿಗಳು ಬೆಳೆಯಲು, ಹೈನುಗಾರಿಕೆ ಅಥವಾ ಕೋಳಿ […]
ಮಹಿಳೆಯರಿಗೆ ಡಬಲ್ ಧಮಾಕ! ಫ್ರೀ ಬಸ್ ಜೊತೆಗೆ ಸ್ಮಾರ್ಟ್ ಕಾರ್ಡ್ ಬೆನಿಫಿಟ್

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸೌಲಭ್ಯ ಘೋಷಿಸಲಾಗಿದೆ. ಉಚಿತ ಬಸ್ ಪ್ರಯಾಣದ ಜೊತೆಗೆ ಇದೀಗ ಮಹಿಳೆಯರಿಗೆ ವಿಶೇಷ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ನಿರ್ಧರಿಸಿದೆ. ಜೂನ್ ತಿಂಗಳಿನಿಂದ ಈ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಾರಂಭವಾಗಲಿದ್ದು, ಮಹಿಳೆಯರಿಗೆ ಬಸ್ ಮತ್ತು ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಲಭ ಹಾಗೂ ಡಿಜಿಟಲ್ ರೀತಿಯಲ್ಲಿ ಮಾಡಲು ಸಹಾಯವಾಗಲಿದೆ. ಸ್ಮಾರ್ಟ್ ಕಾರ್ಡ್ ಪ್ರಯೋಜನಗಳೇನು? ಸ್ಮಾರ್ಟ್ ಕಾರ್ಡ್ ವಿತರಣೆ ಮೊದಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ಪ್ರಾರಂಭವಾಗಲಿದೆ. ಬಳಿಕ […]