ಮಲೇಷ್ಯಾದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ನಿಯಮ ಮೀರಿದರೆ 23 ಕೋಟಿ ದಂಡ!

ಕೌಲಾಲಂಪುರ್: ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಷಿಯಲ್ ಮೀಡಿಯಾ ವ್ಯಸನವನ್ನು ತಡೆಗಟ್ಟಲು Malaysia ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಖಾತೆ ತೆರೆಯುವುದನ್ನು ನಿಷೇಧಿಸಿದೆ. ಹೊಸ ನಿಯಮದ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು Facebook, Instagram, TikTok ಹಾಗೂ YouTube ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಲು ಅವಕಾಶ ಇರುವುದಿಲ್ಲ. ಇದರೊಂದಿಗೆ, ಬಳಕೆದಾರರ ವಯಸ್ಸು ಪರಿಶೀಲಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸರ್ಕಾರ ಸಾಮಾಜಿಕ ಮಾಧ್ಯಮ […]
ಚೀನಾದ ಜನರು ಜಿರಳೆಗಳನ್ನು ತಿನ್ನೋದೇಕೆ? ಇಲ್ಲಿದೆ ಅಚ್ಚರಿಯ ಕಾರಣ!

ಸಾಮಾನ್ಯವಾಗಿ ಜಿರಳೆಗಳನ್ನು ಕಂಡರೆ ಜನರು ಅಸಹ್ಯಪಟ್ಟು ದೂರ ಓಡುತ್ತಾರೆ. ಆದರೆ ಚೀನಾದ ಕೆಲವು ಭಾಗಗಳಲ್ಲಿ ಇದೇ ಜಿರಳೆಗಳನ್ನು ಆಹಾರವಾಗಿ ಸೇವಿಸಲಾಗುತ್ತದೆ. ಕೇಳಲು ವಿಚಿತ್ರವಾಗಿದ್ದರೂ, ಇದರ ಹಿಂದೆ ಕೆಲ ಪ್ರಮುಖ ಕಾರಣಗಳಿವೆ. ಜಿರಳೆಗಳನ್ನು ಪ್ರೋಟೀನ್ ಮೂಲವೆಂದು ಪರಿಗಣಿಸಲಾಗುತ್ತದೆ ಚೀನಾದಲ್ಲಿ ಜಿರಳೆ ಸೇರಿದಂತೆ ಹಲವು ಕೀಟಗಳನ್ನು ಅಗ್ಗದ ಮತ್ತು ಉತ್ತಮ ಪ್ರೋಟೀನ್ ಮೂಲವೆಂದು ಪರಿಗಣಿಸಲಾಗುತ್ತದೆ. ಜಿರಳೆಗಳಲ್ಲಿ ಪ್ರೋಟೀನ್, ಕೊಬ್ಬು, ಕಬ್ಬಿಣ, ಸತು ಸೇರಿದಂತೆ ಹಲವು ಪೋಷಕಾಂಶಗಳಿವೆ. ಹೀಗಾಗಿ ಕೆಲವು ಪ್ರದೇಶಗಳಲ್ಲಿ ಅವುಗಳನ್ನು ಸಾಕಿ ಆಹಾರ ತಯಾರಿಸಲಾಗುತ್ತದೆ. ದೊಡ್ಡ ಮಟ್ಟದಲ್ಲಿ ಜಿರಳೆ […]
ಪ್ರಪಂಚದ ಮೂಲೆ ಮೂಲೆಗೂ ವಿಮಾನ ಸೌಲಭ್ಯ ಹೊಂದಿರುವ ಭಾರತದ ಏಕೈಕ ಏರ್‌ಪೋರ್ಟ್ ಇದು!

ಭಾರತದ ವಾಯುಯಾನ ಕ್ಷೇತ್ರ ಕಳೆದ ಕೆಲವು ವರ್ಷಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅದರ ಪ್ರತಿಬಿಂಬ ದೇಶದ ಆಧುನಿಕ ವಿಮಾನ ನಿಲ್ದಾಣಗಳಲ್ಲೂ ಕಾಣಿಸುತ್ತಿದೆ. ಒಂದು ಕಾಲದಲ್ಲಿ ಕೆಲವೇ ಮಹಾನಗರಗಳಿಗೆ ಸೀಮಿತವಾಗಿದ್ದ ವಿಮಾನ ಸೇವೆಗಳು, ಇದೀಗ ಸಣ್ಣ ನಗರಗಳಿಗೂ ವಿಸ್ತರಿಸುತ್ತಿವೆ. ಸರ್ಕಾರದ ಉಡಾನ್ ಯೋಜನೆ, ಹೊಸ ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಿಂದ ಭಾರತ ಇಂದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಬೆಳವಣಿಗೆಯ ನಡುವೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ Indira Gandhi International […]
ಲಂಡನ್ ನಲ್ಲಿ 10 ನಿಮಿಷದಲ್ಲಿ 1200 ರೂ ಗಳಿಸಿದ ಭಾರತದ ಯುವಕ: ವೈರಲ್ ವೀಡಿಯೋ ಇಲ್ಲಿದೆ

ಲಂಡನ್: ರಸ್ತೆಬದಿಯಲ್ಲಿ ಪ್ರವಾಸಿಗರ ಫೋಟೋಗಳನ್ನು ಕ್ಲಿಕ್ಕಿಸಿ ಮಾರಾಟ ಮಾಡುವ ಮೂಲಕ ಹಣ ಗಳಿಸಲು ಮಲಯಾಳಿ ಯುವಕನೊಬ್ಬ ನಡೆಸಿದ ವಿಶಿಷ್ಟ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಷ್ಣು ವಿಜಯಾಧರನ್ ಎಂಬ ಯುವಕ ಸೆಂಟ್ರಲ್ ಲಂಡನ್‌ನಲ್ಲಿ ಪ್ರವಾಸಿಗರ ಹಾಗೂ ಸ್ಥಳೀಯರ ಫೋಟೋಗಳನ್ನು ತೆಗೆದು ಪ್ರತಿ ಫೋಟೋಗೆ 5 ಪೌಂಡ್ (ಸುಮಾರು ₹540) ದರ ನಿಗದಿಪಡಿಸಿ ಮಾರಾಟ ಮಾಡಲು ಮುಂದಾಗಿದ್ದರು. ಈ ಪ್ರಯೋಗದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಲ್ಪ ಸಮಯದಲ್ಲಿ ಎಷ್ಟು ಹಣ ಗಳಿಸಬಹುದು ಎಂಬ ಸವಾಲನ್ನೂ ಮುಂದಿಟ್ಟಿದ್ದರು. ಈ […]
ಬೈಜುಸ್ ಸಂಸ್ಥಾಪಕ ರವೀಂದ್ರನ್ ಗೆ ಆರು ತಿಂಗಳು ಜೈಲು,ನ್ಯಾಯಾಲಯ ನಿಂದನೆ ಆರೋಪದಡಿ ಬಂಧನ

ಸಿಂಗಾಪುರ: ಒಂದು ಕಾಲದಲ್ಲಿ ಭಾರತದ ಅತ್ಯಂತ ಮೌಲ್ಯಯುತ ಎಡ್ಟೆಕ್ ಸಂಸ್ಥೆಗಳಲ್ಲೊಂದಾಗಿದ್ದ BYJU’S ಸಂಸ್ಥೆಯ ಸ್ಥಾಪಕ ರವೀಂದ್ರನ್ Byju Raveendran ಅವರಿಗೆ ಸಿಂಗಾಪುರ ನ್ಯಾಯಾಲಯದಿಂದ ಭಾರೀ ಹಿನ್ನಡೆ ಎದುರಾಗಿದೆ. ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಅವರನ್ನು ನ್ಯಾಯಾಲಯ ನಿಂದನೆ ಆರೋಪದಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಿಂಗಾಪುರ ನ್ಯಾಯಾಲಯದ ಪ್ರಕಾರ, ಏಪ್ರಿಲ್ 2024ರಿಂದ ತಮ್ಮ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ಹಲವು ಆದೇಶಗಳನ್ನು ಬೈಜು ರವೀಂದ್ರನ್ ಉದ್ದೇಶಪೂರ್ವಕವಾಗಿ ಪಾಲಿಸಿಲ್ಲ. ನ್ಯಾಯಾಲಯದ ಸೂಚನೆಗಳಿಗೆ ಸ್ಪಂದಿಸಲು ವಿಫಲವಾದ ಹಿನ್ನೆಲೆಯಲ್ಲಿ […]