ಮಣ್ಣು ಮತ್ತು ರಾಸಾಯನಿಕದ ಹಂಗಿಲ್ಲದೆ ತನ್ನ 3 ಅಂತಸ್ತಿನ ಮನೆಯಲ್ಲಿ ತರಕಾರಿ ಬೆಳೆದು 70 ಲಕ್ಷ ಗಳಿಸುವ ಮಾಜಿ ಪತ್ರಕರ್ತ!

ಬೆಂಡೆಕಾಯಿ, ಮೆಣಸಿನಕಾಯಿ, ಕ್ಯಾಪ್ಸಿಕಂ, ಸೋರೆಕಾಯಿ, ಟೊಮೆಟೊ, ಹೂಕೋಸು, ಪಾಲಕ್, ಎಲೆಕೋಸು, ಸ್ಟ್ರಾಬೆರಿ, ಮೆಂತ್ಯ ಮತ್ತು ಹಸಿರು ಬಟಾಣಿ….ಒಂದಲ್ಲ ಎರಡಲ್ಲ ಹತ್ತು ಹಲವು ಬಗೆಯ ತರಕಾರಿಗಳು ಈ ವ್ಯಕ್ತಿಯ ಮನೆಯಲ್ಲಿ ಬೆಳೆಯುತ್ತದೆ! ಮಣ್ಣಿಲ್ಲ, ರಾಸಾಯನಿಕಗಳ ಹಾವಳಿ ಇಲ್ಲ. ಮನೆಯ ಬಾಲ್ಕನಿ, ಕಿಟಕಿ , ತಾರಸಿ, ಎಲ್ಲಿ ನೋಡಿದರಲ್ಲಿ ಹಸಿ ಹಸಿ ತಾಜಾ ತಾಜಾ ತರಕಾರಿ. 3 ಅಂತಸ್ತಿನ ಮನೆಯಲ್ಲಿ ತರಕಾರಿ ಬೆಳೆಯುವ ಇವರ ವಾರ್ಷಿಕ ಆದಾಯ ಬರೋಬ್ಬರಿ 70 ಲಕ್ಷ ರೂ! ಇದು ಉತ್ತರ ಪ್ರದೇಶದ ಬರೇಲಿ ನಿವಾಸಿ […]
ಕರಾವಳಿಯಿಂದ ಕ್ಯಾಲಿಫೋರ್ನಿಯಾದವರೆಗೆ ಕಾಂತಾರ ಕಂಪು: ಸೀಮೆಸುಣ್ಣ ಕಲೆಯಲ್ಲಿ ಮೂಡಿಬಂತು ಪಂಜುರ್ಲಿ ದೈವ

ಕರಾವಳಿಯ ದೈವಾರಾಧನೆಯ ಕಂಪು ದೂರದ ಕ್ಯಾಲಿಫೋರ್ನಿಯಾದಲ್ಲೂ ಪಸರಿಸಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಲಭ್ಯವಾಗಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ನಲ್ಲಿ ಸೀಮೆಸುಣ್ಣ(ಚಾಕ್)ದಲ್ಲಿ ಕಾಂತಾರಾ ಪಂಜುರ್ಲಿ ದೈವದ ಚಿತ್ರವು ಕಲಾವಿದೆಯ ಕೈಚಳಕದಲ್ಲಿ ಮೂಡಿಬಂದಿದೆ. ಈ ಪ್ರತಿಭಾವಂತ ಕಲಾವಿದೆಯ ಹೆಸರು ಶಿಲ್ಪಾ ಎಂದಾಗಿದ್ದು, ಅಮೇರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ನಲ್ಲಿ ವಾಸಿಸುತ್ತಿದ್ದಾರೆ. ಈ ಚಿತ್ರವನ್ನು ಪ್ರದೀಪ್ ಗೌಡ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಅಮೇರಿಕಾ ಇಂಗ್ಲೆಂಡ್ ಗಳಿಗಿಂತಲೂ ದುಪ್ಪಟ್ಟು ಮಹಿಳಾ ವಾಣಿಜ್ಯ ಪೈಲಟ್ ಗಳನ್ನು ಹೊಂದಿರುವ ದೇಶ ಭಾರತ!

ಭಾರತವು ಜಾಗತಿಕವಾಗಿ ಅತಿ ಹೆಚ್ಚು ಶೇಕಡಾವಾರು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ವುಮೆನ್ ಏರ್‌ಲೈನ್ ಪೈಲಟ್‌ಗಳ ಅಂದಾಜಿನ ಪ್ರಕಾರ ವಿಶ್ವದ ಮಹಿಳಾ ಪೈಲಟ್‌ಗಳ ಒಟ್ಟು ಸಂಖ್ಯೆಯಲ್ಲಿ ಸುಮಾರು 12.4% ಭಾರತದ ಮಹಿಳಾ ಪೈಲಟ್ ಗಳಿದ್ದಾರೆ. ವಿಶ್ವದ ಅತಿದೊಡ್ಡ ವಾಯುಯಾನ ಮಾರುಕಟ್ಟೆಯಾದ ಅಮೇರಿಕಾ ಸಂಯುಕ್ತ ಸಂಸ್ಥಾನದ 5.5% ಮತ್ತು ಯುನೈಟೆಡ್ ಕಿಂಗ್ಡಮ್ ನ 4.7% ರೊಂದಿಗೆ ಹೋಲಿಸಿದರೆ ಈ ಎರಡೂ ದೇಶಗಳಿಗಿಂತ ದ್ವಿಗುಣ ಪಾಲು ಭಾರತದ ಮಹಿಳಾ ವಾಣಿಜ್ಯ ಪೈಲಟ್ ಗಳು ಪಡೆದಿದ್ದಾರೆ. 2021ರ […]
ನ.06: ಶ್ರೀ ಯಕ್ಷನಿಧಿ ಮೂಡುಬಿದಿರೆ ಸಪ್ತಮ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಶ್ರೀ ಯಕ್ಷನಿಧಿ ಮೂಡುಬಿದಿರೆ ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳ ಇದರ ಸಪ್ತಮ ವಾರ್ಷಿಕೋತ್ಸವ ಮತ್ತು ಶ್ರೀ ಯಕ್ಷ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭವು ನ. 06 ರವಿವಾರ ಬೆಳಿಗ್ಗೆ 8.00ರಿಂದ ರಾತ್ರಿ 12:30 ರವರೆಗೆ ಮೂಡಬಿದಿರೆ ಸಮಾಜ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ವಿವರ: ಬೆಳಿಗ್ಗೆ 8.00 ಗಂಟೆಗೆ ಚೌಕಿಪೂಜೆ ಬೆಳಿಗ್ಗೆ 8.15 ರಿಂದ 9.30 ರವರೆಗೆ ಪೂರ್ವರಂಗ (ನಮ್ಮ ಸಂಸ್ಥೆಯಲ್ಲಿ ಹಿಮ್ಮೇಳ ಕಲಿಯುತ್ತಿರುವ ಮಕ್ಕಳಿಂದ) ಬೆಳಿಗ್ಗೆ 9.30 ರಿಂದ 10.30 ರವರೆಗೆ – ದೀಪ […]
ಕುಡಿಯೋದೆ ನಮ್ ವೀಕ್ನೆಸ್ಸು ಅನ್ನುತ್ತಿರುವ ಕೋತಿ: ಗ್ರಾಹಕರ ಕೈಯಿಂದ ಬಿಯರ್ ಬಾಟಲಿ ಕಸಿಯುವ ಕೋತಿ ವೀಡಿಯೋ ವೈರಲ್

ರಾಯಬರೇಲಿ: ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಕೋತಿಯೊಂದು ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಂಗವೊಂದು ಕ್ಯಾನ್‌ನಿಂದ ಬಿಯರ್ ಅನ್ನು ಗಟಗಟ ಕುಡಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಕೋತಿ, ಹತ್ತಿರದ ವೈನ್ ಶಾಪ್‌ನಿಂದ ಮದ್ಯ ಖರೀದಿಸಲು ಬರುವವರ ಕೈಯಿಂದ ಮದ್ಯವನ್ನು ಕಸಿದುಕೊಳ್ಳುತ್ತದೆ ಎಂದು ಸುದ್ದಿ ಸಂಸ್ಥೆ ಆಜ್‌ತಕ್ ವರದಿ ಮಾಡಿದೆ. ವೈನ್ ಶಾಪ್ ಮಾಲಿಕ ಕೋತಿಯ ವರ್ತನೆಯಿಂದ ಬೇಸತ್ತು ಅಧಿಕಾರಿಗಳಿಗೆ ದೂರು ನೀಡಿದ್ದರೂ, ಅಧಿಕಾರಿಗಳನ್ನು ಮಂಗನನ್ನು ಓಡಿಸಿ ಎಂದು ಉದಾಸೀನ ತೋರಿದ್ದಾರೆ. ವೀಡೀಯೋ ವೈರಲ್ […]