ಅಮೇರಿಕಾ ಇಂಗ್ಲೆಂಡ್ ಗಳಿಗಿಂತಲೂ ದುಪ್ಪಟ್ಟು ಮಹಿಳಾ ವಾಣಿಜ್ಯ ಪೈಲಟ್ ಗಳನ್ನು ಹೊಂದಿರುವ ದೇಶ ಭಾರತ!

ಭಾರತವು ಜಾಗತಿಕವಾಗಿ ಅತಿ ಹೆಚ್ಚು ಶೇಕಡಾವಾರು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ವುಮೆನ್ ಏರ್‌ಲೈನ್ ಪೈಲಟ್‌ಗಳ ಅಂದಾಜಿನ ಪ್ರಕಾರ ವಿಶ್ವದ ಮಹಿಳಾ ಪೈಲಟ್‌ಗಳ ಒಟ್ಟು ಸಂಖ್ಯೆಯಲ್ಲಿ ಸುಮಾರು 12.4% ಭಾರತದ ಮಹಿಳಾ ಪೈಲಟ್ ಗಳಿದ್ದಾರೆ. ವಿಶ್ವದ ಅತಿದೊಡ್ಡ ವಾಯುಯಾನ ಮಾರುಕಟ್ಟೆಯಾದ ಅಮೇರಿಕಾ ಸಂಯುಕ್ತ ಸಂಸ್ಥಾನದ 5.5% ಮತ್ತು ಯುನೈಟೆಡ್ ಕಿಂಗ್ಡಮ್ ನ 4.7% ರೊಂದಿಗೆ ಹೋಲಿಸಿದರೆ ಈ ಎರಡೂ ದೇಶಗಳಿಗಿಂತ ದ್ವಿಗುಣ ಪಾಲು ಭಾರತದ ಮಹಿಳಾ ವಾಣಿಜ್ಯ ಪೈಲಟ್ ಗಳು ಪಡೆದಿದ್ದಾರೆ.

In India, women rule the skies with the highest share of female pilots in  the world | Business Insider India

2021ರ ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ವಿಶ್ವಾದ್ಯಂತ ಮಹಿಳಾ ವಾಣಿಜ್ಯ ಪೈಲಟ್‌ಗಳ ಪಾಲು: 

ಭಾರತ: 12.4%
ಐರ್ಲೆಂಡ್ 9.9%
ದಕ್ಷಿಣ ಆಫ್ರಿಕಾ: 9.8%
ಆಸ್ಟ್ರೇಲಿಯಾ: 7.5%
ಕೆನಡಾ: 7.0%
ಜರ್ಮನಿ: 6.9%
ಯು.ಎಸ್.ಎ: 5.5%
ಯು.ಕೆ: 4.7%
ನ್ಯೂಜಿಲೆಂಡ್: 4.5%
ಕತಾರ್: 2.4%
ಜಪಾನ್: 1.3%
ಸಿಂಗಪುರ: 1.0%

1989 ರಲ್ಲಿ ವಿಶ್ವದ ವಾಣಿಜ್ಯ ವಿಮಾನಯಾನದ ಅತ್ಯಂತ ಕಿರಿಯ ಪೈಲಟ್ ಆಗಿ ಮೊದಲನೆ ಬಾರಿಗೆ ವಿಮಾನ ಹಾರಿಸಿದ ನಿವೇದಿತಾ ಭಾಸಿನ್ ಪ್ರಕಾರ ಸುಧಾರಿತ ಕಾರ್ಪೊರೇಟ್ ನೀತಿಗಳು ಮತ್ತು ಬಲವಾದ ಕುಟುಂಬ ಬೆಂಬಲ ಮತ್ತು ಔಟ್ರೀಚ್ ಕಾರ್ಯಕ್ರಮಗಳಿಂದಾಗಿ ಭಾರತೀಯ ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚು ಪ್ರೋತ್ಸಾಹಿಸಲ್ಪಡುತ್ತಿದ್ದಾರೆ.

Nivedita Bhasin: The inspiration behind female pilots - International  Finance

1948 ರಲ್ಲಿ ರೂಪುಗೊಂಡ ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನ ಏರ್ ವಿಂಗ್ ಮೂಲಕ ಅನೇಕ ಭಾರತೀಯ ಮಹಿಳೆಯರು ಪೈಲಟ್ ವೃತ್ತಿಯೆಡೆಗೆ ಆಕರ್ಷಿತರಾದರು. ಇದು ಒಂದು ರೀತಿಯ ಯುವ ಕಾರ್ಯಕ್ರಮವಾಗಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಮೈಕ್ರೋಲೈಟ್ ವಿಮಾನಗಳನ್ನು ನಿರ್ವಹಿಸಲು ತರಬೇತಿ ನೀಡಲಾಗುತ್ತದೆ. ದುಬಾರಿ ವಾಣಿಜ್ಯ ಪೈಲಟ್ ತರಬೇತಿಯನ್ನು ಮಹಿಳೆಯರಿಗೆ ಹೆಚ್ಚು ಸುಲಭವಾಗಿಸಲು, ಕೆಲವು ರಾಜ್ಯ ಸರ್ಕಾರಗಳು ಇದಕ್ಕೆ ಸಹಾಯಧನ ನೀಡುತ್ತಿವೆ ಮತ್ತು ಹೋಂಡಾ ಮೋಟಾರ್ ಕಂಪನಿಯಂತಹ ಕಂಪನಿಗಳು ಭಾರತೀಯ ಫ್ಲೈಯಿಂಗ್ ಸ್ಕೂಲ್‌ನಲ್ಲಿ 18 ತಿಂಗಳ ಕೋರ್ಸ್‌ಗೆ ಪೂರ್ಣ ವಿದ್ಯಾರ್ಥಿವೇತನವನ್ನು ನೀಡುತ್ತಿವೆ ಮತ್ತು ಅವರಿಗೆ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತಿವೆ.

More power to these women fighter pilots who are taking the tricolour  higher - India Today

ಭಾರತೀಯ ವಾಯುಪಡೆಯು 1990 ರ ದಶಕದಲ್ಲಿ ಹೆಲಿಕಾಪ್ಟರ್‌ಗಳು ಮತ್ತು ಸಾರಿಗೆ ವಿಮಾನಗಳಿಗಾಗಿ ಮಹಿಳಾ ಪೈಲಟ್‌ಗಳನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿತು. ಈ ಮೂವರನ್ನು ಜೂನ್ 2016 ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರನ್‌ಗೆ ಸೇರಿಸಲಾಯಿತು. ಅವನಿ ಚತುರ್ವೇದಿ ಮೋಹನ ಸಿಂಗ್ ಜಿತರ್ವಾಲ್, ಮತ್ತು ಭಾವನಾ ಕಾಂತ್ ಭಾರತದ ಮೊದಲ ಮಹಿಳಾ ಯುದ್ಧ ಪೈಲಟ್ ಗಳಾಗಿದ್ದಾರೆ. ಅವರನ್ನು 18 ಜೂನ್ 2016 ರಂದು ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ರಾಷ್ಟ್ರದ ಸೇವೆಗಾಗಿ ಔಪಚಾರಿಕವಾಗಿ ನಿಯೋಜಿಸಿದ್ದರು.