ಕಲ್ಯಾಣಪುರ: ಬಾಲಮಾರುತಿ ವ್ಯಾಯಾಮ ಶಾಲೆಯ ರಜತ ಸಂಭ್ರಮ

ಕಲ್ಯಾಣಪುರ ಶ್ರೀ ಬಾಲಮಾರುತಿ ವ್ಯಾಯಾಮ ಶಾಲೆಯ ರಜತ ಸಂಭ್ರಮ ನಡೆಯಿತು. ರಜತ ಸಂಭ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿಗಳಾದ ಪ್ರಸಾದ್ ಕಾಂಚನ್, ಜೇರಿ ವಿನ್ಸೆಂಟ್ ಡಯಾಸ್ ಮೊದಲಾದವರು ಇದ್ದರು.
ನಿಮ್ಮದೇ ಸಂಭ್ರಮ, ನಿಮ್ಮದೇ ಉತ್ಸವ ಹರ್ಷೋತ್ಸವದ ಸಂಭ್ರಮಾಚರಣೆ ನಾಳೆಯಿಂದ ಆರಂಭ

ಉಡುಪಿ: ಪ್ರತಿವರ್ಷವೂ ಗ್ರಾಹಕರ ಅಪಾರ ಬೆಂಬಲದಿಂದ ಹರ್ಷೋತ್ಸವವು ಯಶಸ್ವಿಯಾಗಿ ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಾರೀ ಜನಮನ್ನಣೆ ಗಳಿಸುತ್ತಾ, ಎಲ್ಲರ ನೆಚ್ಚಿನ “ಶಾಪಿಂಗ್ ಹಬ್ಬ”ವಾಗಿ ಸಂಭ್ರಮದಿಂದ ಆಚರಿಸಲ್ಪಡುತ್ತಿದೆ. ಈ ಬಾರಿಯೂ ಇನ್ನಷ್ಟು ವೈಶಿಷ್ಟö್ಳೊಂದಿಗೆ ಏಳು ದಿನಗಳು ನಡೆಯಲಿರುವ ಹೊಸ ರೂಪದ ಹರ್ಷೋತ್ಸವವು ನಿಮ್ಮ ಶಾಪಿಂಗ್‌ಗೆ ಒಂದು ವಿನೂತನ ಮೆರುಗನ್ನು ನೀಡಲಿದೆ. ಹರ್ಷದ ವಾರ್ಷಿಕಾಚರಣೆ – “ಹರ್ಷೋತ್ಸವ” ನಾಳೆ ಅಂದರೆ ಮಾರ್ಚ್ 06 ರಿಂದ 12ರವರೆಗೆ ಉಡುಪಿಯ ಮೂರು, ಮಂಗಳೂರಿನ ಎರಡು, ಬ್ರಹ್ಮಾವರ, ಸುರತ್ಕಲ್, ಪುತ್ತೂರು, ಕುಂದಾಪುರ ಹಾಗೂ ಶಿವಮೊಗ್ಗ […]
ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಾ.7 ರಂದು ಶ್ರೀ ಮನ್ಮಹಾರಥೋತ್ಸವ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಶ್ರೀ ಮಹಿಷಮರ್ದಿನಿ ದೇವಿಯ ಸನ್ನಿಧಿಯಲ್ಲಿ ಮಾ.4 ರಿಂದ ತಾ. ಮಾ.9ರ ರವರೆಗೆ ವೇದಮೂರ್ತಿ ಪಾಡಿಗಾರು ಶ್ರೀ ಶ್ರೀನಿವಾಸ ತಂತ್ರಿಗಳವರ ನೇತೃತ್ವದಲ್ಲಿ ರಥೋತ್ಸವಾದಿ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮ: ಮಾ.4 ಶನಿವಾರ ರಾತ್ರಿ 7.30 ಗಂಟೆಗೆ ವಿಘ್ನೇಶ್ವರ ಪ್ರಾರ್ಥನೆ, ಅಂಕುರಾರೋಹಣ. ಮಾ.5 ಆದಿತ್ಯವಾರ ಬೆಳಿಗ್ಗೆ ಗಂಟೆ 8.00ಕ್ಕೆ ಧ್ವಜಾರೋಹಣ, ಸಾಮೂಹಿಕ ಗಣಹೋಮ, ಮಹಾಪೂಜೆ, ಕಲಶಾಭಿಷೇಕ ಮಧ್ಯಾಹ್ನ 1.00 ದಿ|ಪರ್ಕಳ ಗುರುರಾಜ ಜೋಯಿಸರ್ ರವರ ಸುಪುತ್ರರಿಂದ ಸಂತರ್ಪಣೆ, ರಾತ್ರಿ ಬೈಗಿನ ಬಲಿ, ಚಂದ್ರಮಂಡಲ […]
ಅತಿರುದ್ರ ಮಹಾಯಾಗದ ಸಂಪನ್ನದಿವಸ: ನಡೆಯಲಿರುವ ಕಾರ್ಯಕ್ರಮಗಳ ಮುನ್ನೋಟ

ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹನ್ನೊಂದು ದಿನಗಳನ್ನು ಪೂರೈಸಿ, ಇದೀಗ ಸಂಪನ್ನಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಕಳೆದ 11 ದಿನಗಳಲ್ಲಿ ಹಲವು ಗಣ್ಯಾತಿ ಗಣ್ಯರು ಅತಿರುದ್ರ ಮಹಾಯಾಗಕ್ಕೆ ಆಗಮಿಸಿದ್ದಾರೆ ಮತ್ತು ಯಾಗದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅತಿರುದ್ರ ಮಹಾಯಾಗದಲ್ಲಿ ಭಾಗಿಯಾಗಲೆಂದೇ ದೂರದೂರಿನಿಂದ ಭಕ್ತಾದಿಗಳು ಆಗಮಿಸುತ್ತಿರುವುದು, […]
ಹಿರಿಯಡಕದಲ್ಲಿ ಮೂರು ದಿನಗಳ ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವಕ್ಕೆ ಚಾಲನೆ

ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ಪರ್ಕಳ, ವೆನಿಲ್ಲಾ ಅಭಿವೃದ್ಧಿ ಟ್ರಸ್ಟ್ ಹಿರಿಯಡ್ಕ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ಕೃಷಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವಕ್ಕೆ ಇಂದು ಚಾಲನೆ ನೀಡಲಾಯಿತು. ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು, ರೈತರು ಪ್ರಯೋಗಶೀಲರಾಗಬೇಕು. ಮುಂದಿನ ದಿನಗಳಲ್ಲಿ ಯುವ ಸಮುದಾಯ ಕೃಷಿಯಲ್ಲಿ […]