ಕಣ್ಮಣ ಸೆಳೆಯುವಂತೆ ಸಿಂಗಾರಗೊಳ್ಳುತ್ತಿವೆ ಮತಗಟ್ಟೆಗಳು

ಪ್ರಜಾಪ್ರಭುತ್ವದಲ್ಲಿ ಮತದಾರರರೇ ಪ್ರಭುಗಳು, ಈ ಮತದಾರರ ಪ್ರಭುಗಳು ಚುನಾವಣೆಯಲ್ಲಿ ತಮ್ಮ, ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಲು ಅವರಿಗೆ ಅಗತ್ಯ ಅರಿವು ಮತ್ತು ಮತದಾನದ ಮಹತ್ವ ಕುರಿತು ತಿಳಿಸಲು, ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಸ್ವೀಪ್) ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿ ಮತಗಟ್ಟೆಗಳು ಕಣ್ಮಣ ಸೆಳೆಯುವಂತೆ ಸಿಂಗಾರಗೊಳ್ಳುತ್ತಿದ್ದು, ಮತದಾರರನ್ನು ಮತದಾನ ಕೇಂದ್ರಗಳತ್ತ ಆಕರ್ಷಿಸುತ್ತಿವೆ. ಕೇಂದ್ರ ಚುನಾವಣಾ ಆಯೋಗವು ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸಲು ಕರೆ ನೀಡಿದ್ದು, ಮತದಾನದ […]

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಮಾ.13 ರಂದು ನೂತನ ಬ್ರಹ್ಮರಥದ ಲೋಕಾರ್ಪಣೆ, ವಿಶೇಷ ರಥೋತ್ಸವ

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನೂತನ ಬ್ರಹ್ಮರಥದ ಲೋಕಾರ್ಪಣೆ, ವಿಶೇಷ ರಥೋತ್ಸವ ಮಾ.13 ರಂದು ನಡೆಯಲಿದೆ. ನೂತನ ಬ್ರಹ್ಮರಥದ ಸೇವಾಕರ್ತರು ನೀಲಾವರ ಮಕ್ಕಿತೋಟಮನೆ ಶ್ರೀಮತಿ ಗೌರಿ ವಿಠಲ ಶೆಟ್ಟಿ ಹಾಗೂ ಮನೆಯವರು. ಮಾ.9 ರಿಂದ ಮಾ.15 ರವರೆಗೆ ಧಾರ್ಮಿಕ & ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಲಿವೆ. 09/03/2023: ಮುಹೂರ್ತ ಬಲಿ 10/03/2023: ವಿಘ್ನೇಶ್ವರ ಪ್ರಾರ್ಥನೆ, ಅಂಕುರಾರೋಪಣ 11/03/2023: ಧ್ವಜಾರೋಹಣ (ಬೆಳಿಗ್ಗೆ 7.45ಕ್ಕೆ) ಸಂಜೆ: ಸಿಂಹ ವಾಹನೋತ್ಸವ, ಭೇರಿತಾಡನ 12/03/2023: ಗಜವಾಹನೋತ್ಸವ, ಸ್ಥಾನ ಶುದ್ಧಿ, ಪ್ರಾಸಾದ […]

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಮಹಿಳಾ ಕಲೋತ್ಸವ”

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಳಗಳ ಒಕ್ಕೂಟ ರಿ. ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಕಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು .ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು.

ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವ ಸಂಭ್ರಮ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷಮರ್ದಿನಿ ದೇವಿಯ ವಾರ್ಷಿಕ ರಥೋತ್ಸವವು ಮಾ. 7ರಂದು ಪಾಡಿಗಾರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಜರಗಿತು. ರಥಾರೋಹಣ, ಸಾರ್ವಜನಿಕ ಅನ್ನ ಸಂತರ್ಪಣೆ, ದಾಮೋದರ ಸೇರಿಗಾರ್ ಇವರಿಂದ ಸ್ಯಾಕ್ಸೋಫೋನ್ ವಾದನ, ಮನ್ಮಹಾರಥೋತ್ಸವ, ವೈವಿಧ್ಯಮಯ ಯಕ್ಷಗಾನ ವೇಷಗಳ ಮೆರವಣಿಗೆ, ಹಚ್ಚಡ ಸೇವೆ, ಉಂಡಾರು ಚೆಂಡೆ ಬಳಗದವರಿಂದ ಚೆಂಡೆ ವಾದನ, ಕ್ರೇಜಿ ಕಿಡ್ಸ್, ಸ್ಥಳೀಯರಿಂದ ನೃತ್ಯ ವೈಭವ, ಸನ್ನಿಧಿ ಕಲಾವಿದರಿಂದ ತುಳು ನಾಟಕ ಅಪ್ಪೆ ಮಂತ್ರ ದೇವತೆ ನಡೆಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ […]

ಕೈವಾರ ತಾತಯ್ಯ, ಜಗದ್ಗುರು ರೇಣುಕಾಚಾರ್ಯ ಜಯಂತಿ

ಉಡುಪಿ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಮತ್ತು ಕೈವಾರ ತಾತಯ್ಯ ಜಯಂತಿ ಆಚರಣೆಯು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಇಲಾಖೆ ವತಿಯಿಂದ ಆಚರಿಸಲಾಗುವ ಎಲ್ಲಾ ಮಹನೀಯರು, ದಾರ್ಶನಿಕರು, ತತ್ವ ಜ್ಞಾನಿಗಳು, ವಚನಕಾರರ ಬದುಕು ಹಾಗೂ ಮಾರ್ಗದರ್ಶನಗಳು ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಎಂದರು. ಜಂಗಮ ಮಠದ ಡಾ. […]