ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಮಾ.13 ರಂದು ನೂತನ ಬ್ರಹ್ಮರಥದ ಲೋಕಾರ್ಪಣೆ, ವಿಶೇಷ ರಥೋತ್ಸವ

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನೂತನ ಬ್ರಹ್ಮರಥದ ಲೋಕಾರ್ಪಣೆ, ವಿಶೇಷ ರಥೋತ್ಸವ ಮಾ.13 ರಂದು ನಡೆಯಲಿದೆ.

ನೂತನ ಬ್ರಹ್ಮರಥದ ಸೇವಾಕರ್ತರು

ನೀಲಾವರ ಮಕ್ಕಿತೋಟಮನೆ ಶ್ರೀಮತಿ ಗೌರಿ ವಿಠಲ ಶೆಟ್ಟಿ ಹಾಗೂ ಮನೆಯವರು.

ಮಾ.9 ರಿಂದ ಮಾ.15 ರವರೆಗೆ ಧಾರ್ಮಿಕ & ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಲಿವೆ.

09/03/2023: ಮುಹೂರ್ತ ಬಲಿ

10/03/2023: ವಿಘ್ನೇಶ್ವರ ಪ್ರಾರ್ಥನೆ, ಅಂಕುರಾರೋಪಣ

11/03/2023: ಧ್ವಜಾರೋಹಣ (ಬೆಳಿಗ್ಗೆ 7.45ಕ್ಕೆ) ಸಂಜೆ: ಸಿಂಹ ವಾಹನೋತ್ಸವ, ಭೇರಿತಾಡನ

12/03/2023: ಗಜವಾಹನೋತ್ಸವ, ಸ್ಥಾನ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ, ವಾಸ್ತು ಪೂಜಾ, ಕಲಶ ಸ್ಥಾಪನೆ, ಅಧಿವಾಸ ಹೋಮ, ದೊಡ್ಡರಂಗಪೂಜೆ,

13/03/2023 : ರಥ ಶುದ್ಧಿ, ಕಲಶಾಭಿಷೇಕ  ಬ್ರಹ್ಮರಥೋತ್ಸವ ಮತ್ತು ಅನ್ನ ಸಂತರ್ಪಣೆ

14/03/2023 ಕವಾಟೋದ್ಘಾಟನೆ , ಚೂರ್ಣೋತ್ಸವ

15/03/2023 : ಸಂಪ್ರೋಕ್ಷಣೆ

ಪ್ರತಿ ದಿನ ಸಂಜೆ 7.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 09/03/2023: ಎಂ.ಡಿ.ಸಿ. ಡ್ಯಾನ್ಸ್ ಚಾಂತಾರು, ಬ್ರಹ್ಮಾವರ ಇವರಿಂದ ನೃತ್ಯ ಕಾರ್ಯಕ್ರಮ.

10/03/2023: ಯಕ್ಷಗಾನ ನೀಲಾವರ ಮೇಳದವರಿಂದ

11/03/2023: ಯಕ್ಷಗಾನ ತಾಳಮದ್ದಳೆ – ಶಾಂಭವಿ ವಿಲಾಸ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ರಿ. ಬೆಳ್ಳಿಯ ಸಂಯೋಜನೆಯಲ್ಲಿ (ಆಯ್ದು ಪ್ರಸಿದ್ಧ ಕಲಾವಿದರಿಂದ)

12/03/2023: ಕುಣಿತ ಭಜನೆ – ಶ್ರೀ ಮಹಿಷಮರ್ದಿನೀ ಭಜನಾ ಮಂಡಳಿ ನೀಲಾವರ ಇವರಿಂದ

13/03/2023: ಮಧ್ಯಾಹ್ನ 12.30 ರಿಂದ ಲಹರಿ ಗ್ರೂಪ್ ಆಫ್ ಮ್ಯೂಸಿಕ್ ಚಾಂತಾರು ಬ್ರಹ್ಮಾವರ ಇವರಿಂದ.

ಸರ್ವರಿಗೂ ಆದರದ ಸ್ವಾಗತ ಬಯಸುವ ಮೂಲಕ ಪ್ರಕಟಣೆ ತಿಳಿಸಿದೆ.