ಆದಾಯ ತೆರಿಗೆ ಹಳೆಯ ಪದ್ಧತಿ: ಐಟಿಆರ್ ಸಲ್ಲಿಸುವ ಮೊದಲು ಈ ಕಡಿತವನ್ನು ತಿಳಿದುಕೊಳ್ಳಿ

ಆದಾಯ ತೆರಿಗೆ: ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸುವಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈಯಕ್ತಿಕ ಆದಾಯ ತೆರಿಗೆಯ ಹೊಸ ಪದ್ದತಿಯಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದ್ದರು. ಸರ್ಕಾರ ಜಾರಿಗೆ ತಂದಿರುವ ಹೊಸ ತೆರಿಗೆ ಪದ್ಧತಿಯು 2023-24ನೇ ಹಣಕಾಸು ವರ್ಷದಿಂದ ಡೀಫಾಲ್ಟ್ (ಪೂರ್ವ ನಿಯೋಜಿತ) ಆಗಿರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ತಮ್ಮ ತೆರಿಗೆ ಪ್ರಯೋಜನಗಳನ್ನು ಉಳಿಸಿಕೊಳ್ಳಲು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಲು ಬಯಸುವ ತೆರಿಗೆದಾರರು ಅದರ ಬಗ್ಗೆ ಘೋಷಣೆಯನ್ನು ಮಾಡಬೇಕು. ಆದರೆ ನೀವು ಹಳೆಯ […]

ಸಚಿವ ವಿ. ಸುನಿಲ್ ಕುಮಾರ್ ಅವರು ಬೆಳ್ತಂಗಡಿಯ ಶ್ರೀ ಕಾಶೀಮಠ ಸಂಸ್ಥಾನಕ್ಕೆ ಭೇಟಿ

ಕಾರ್ಕಳ: ಕನ್ನಡ, ಇಂಧನ ಹಾಗೂ ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಬೆಳ್ತಂಗಡಿಯಲ್ಲಿ ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಕಾರ್ಕಳದ ಜಿ.ಎಸ್.ಬಿ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.

ದೇಶಾದ್ಯಂತ ಈದ್- ಉಲ್-ಫಿತ್ರ್ ಆಚರಣೆ

ಈದ್ ಉಲ್ ಫಿತ್ರ್ ವಿಶ್ವಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಹಬ್ಬವು ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇದು ಉಪವಾಸ, ಪ್ರಾರ್ಥನೆ ಮತ್ತು ಆತ್ಮಾವಲೋಕನದ    ಅವಧಿಯಾಗಿದೆ. ಈದ್ ಉಲ್ ಫಿತರ್ ಅನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತಿದೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ಈದ್ ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು. ಕೆಲವು ಸಂಪ್ರದಾಯಗಳ ಪ್ರಕಾರ, ಮುಹಮ್ಮದ್ ಅವರು ಮೆಕ್ಕಾದಿಂದ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು. ಸಾಂಪ್ರದಾಯಿಕವಾಗಿ, ಈದ್ ಉಲ್-ಫಿತರ್  ಸೂರ್ಯಾಸ್ತದ […]

“ಕ್ಷಯ”ವಿಲ್ಲದ ಸಂಪತ್ತು ಸಮೃದ್ದಿ ನೆಮ್ಮದಿಯನ್ನು ಕರುಣಿಸುವುದು “ಅಕ್ಷಯ ತೃತೀಯ”

ಅಕ್ಷಯ ತೃತೀಯ ಇದು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿಯಂದು ಬರುತ್ತದೆ. ಇದು “ಅಂತ್ಯವಿಲ್ಲದ ಸಮೃದ್ಧಿಯ ಮೂರನೇ ದಿನ” ಎಂದು ಸೂಚಿಸುತ್ತದೆ. ಸಂಸ್ಕೃತದಲ್ಲಿ, ಅಕ್ಷಯ ಎಂದರೆ “ಎಂದಿಗೂ ಕ್ಷಯವಿಲ್ಲದ್ದು” ಎಂದರ್ಥ. ತೃತೀಯಾ ಎಂದರೆ “ಚಂದ್ರನ ಮೂರನೇ ದಿನ”. ಸೂರ್ಯ-ಚಂದ್ರರು ಉಜ್ವಲವಾಗಿ ಬೆಳಗುವ ದಿನ ಇದಾಗಿದ್ದು, ಅಧ್ಯಾತ್ಮದ ದೃಷ್ಟಿಯಿಂದಲೂ ಈ ದಿನವು ಮಹತ್ವವನ್ನು ಪಡೆದಿದೆ. ಈ ದಿನದಂದು ಜಪ ತಪ ನಿಷ್ಠೆಗಳನ್ನು ಮಾಡುವುದರಿಂದ ಮನಸ್ಸು ಮತ್ತು ದೇಹವು ಶುದ್ದಗೊಂಡು ಅಧ್ಯಾತ್ಮದ ಸಾಧನೆಯು ಸುಲಭವಾಗಿ ಮೋಕ್ಷವು ದೊರೆಯುತ್ತದೆ. ಈ […]

ಸಂಘಟನೆಯಲ್ಲಿ ಬಲವಿದೆ ಎಂದು ಸಾಧಿಸಿ ತೋರಿದ ಸ್ವರ್ಣೋದ್ಯಮ ಸಂಘಟನಾ ಚತುರ ನೋವೆಲ್ಟಿ ಸಂಸ್ಥೆಯ ಜಿ.ಜಯ ಆಚಾರ್ಯ

ನೋವೆಲ್ಟಿ ಸ್ಟೋರ್ಸ್ ನ ಸಂಸ್ಥಾಪಕ ಜಿ. ಅನಂತಕೃಷ್ಣ ಆಚಾರ್ಯರ 4 ನೇ ಪುತ್ರ ಜಯ ಆಚಾರ್ಯರು ಪ್ರಾರಂಭದಲ್ಲಿ ಚಿತ್ರರಂಗದತ್ತ ಒಲವು ಹೊಂದಿದ್ದರು. ಬೆಂಗಳೂರಿನಲ್ಲಿರುವ ಆರ್. ನಾಗೇಂದ್ರರಾಯರ ಆದರ್ಶ್ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿ, ಡಿ.ಎಫ್.ಟಿ ಕೋರ್ಸ್ ಪೂರೈಸಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಹ ನಿರ್ದೇಶಕರಾಗಿ ದುಡಿದ ಅನುಭವವಿದೆ. ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ ನಟಿಸಿಯೂ ಇದ್ದಾರೆ. ತದನಂತರ ಜಿ.ವಿ.ಅಯ್ಯರ್ ರವರ ಮಧ್ವಾಚಾರ್ಯ ಚಿತ್ರದಲ್ಲೂ ಪರ್ಷಿಯನ್ ದೊರೆಯ ಪಾತ್ರದಲ್ಲಿ […]