ಸೌಂದರ್ಯ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಬಯಸುವವರಿಗೆ MSDC ಯಿಂದ ಸ್ಪೆಷಲ್ ಆಫರ್ !

ಮಣಿಪಾಲ: ಸೌಂದರ್ಯ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ಹಾಗೂ Orane International ವತಿಯಿಂದ ವಿಶೇಷ ಆಫರ್ ಘೋಷಿಸಲಾಗಿದೆ. Masters in Cosmetology ಅಥವಾ B.Voc in Cosmetology ಕೋರ್ಸ್‌ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ AI Film Making Course ಉಚಿತವಾಗಿ ನೀಡಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಈ ವಿಶೇಷ ಆಫರ್ ಘೋಷಿಸಲಾಗಿದ್ದು, ಆಗಸ್ಟ್ 17ರವರೆಗೆ ಮಾತ್ರ ಆಫರ್ ಲಭ್ಯವಿರಲಿದೆ. ಕಾಸ್ಮೆಟಾಲಜಿ ಕೋರ್ಸ್‌ಗಳಲ್ಲಿ ಉದ್ಯಮ ಮಾನ್ಯತೆ ಪಡೆದ ತರಬೇತಿ, ಅನುಭವಿ […]
ಜಪಾನೀಸ್ ಕಲಿತರೆ ಜಾಗತಿಕ ಮಟ್ಟದಲ್ಲೂ ಉದ್ಯೋಗಾವಕಾಶ : MSDCಯಲ್ಲಿದೆ ಜಪಾನೀಸ್ ಭಾಷೆಯ ಕೋರ್ಸ್, ಪಡೆಯಿರಿ ಸ್ವಾತಂತ್ರ್ಯೋತ್ಸವದ ಆಫರ್

ಮಣಿಪಾಲ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಜಪಾನೀಸ್ ಭಾಷೆಯ N5 ಹಂತದ ಕೋರ್ಸ್‌ಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಜಪಾನ್‌ನಲ್ಲಿ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಪಡೆಯಲು ಆಸಕ್ತಿ ಹೊಂದಿರುವವರಿಗೆ ಅನುಕೂಲವಾಗುವಂತೆ ಈ ವಿಶೇಷ ಆಫರ್ ನೀಡಲಾಗಿದ್ದು, ಆಗಸ್ಟ್ 15, 2026ರವರೆಗೆ ನೋಂದಣಿಗೆ ಅವಕಾಶವಿದೆ. ಸಾಮಾನ್ಯವಾಗಿ ₹20,000 ಶುಲ್ಕವಿರುವ ಕೋರ್ಸ್‌ಗೆ MSDC ಸಿಬ್ಬಂದಿ, ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಿಬ್ಬಂದಿ, MAHE ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅರ್ಹರಿಗೆ 50ರಷ್ಟು ರಿಯಾಯಿತಿಯೊಂದಿಗೆ ₹10,000ಕ್ಕೆ […]
AI ಬಳಸಿ ರೀಲ್ಸ್, ವಿಡಿಯೋ ಕಟೆಂಟ್ ಗಳನ್ನು ಇನ್ನಷ್ಟು ರೀಚ್ ಮಾಡೋದು ಹೇಗೆ? ಮಂಗಳೂರಿನಲ್ಲಿ ಆ.15 ರಂದು ‘AI Reels Making’ ಕಾರ್ಯಾಗಾರದಲ್ಲಿ ಭಾಗವಹಿಸಿ ಎಲ್ಲವನ್ನೂ ಕಲೀರಿ

ಮಣಿಪಾಲ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಆಕರ್ಷಕ ಹಾಗೂ ವೈರಲ್ ರೀಲ್ಸ್‌ಗಳನ್ನು ರಚಿಸುವ ಕುರಿತು ಒಂದು ದಿನದ ‘AI Reels Making’ ಹ್ಯಾಂಡ್ಸ್‌ಆನ್ ವರ್ಕ್‌ಶಾಪ್ ಅನ್ನು ಕೌಶಲ್ ಮಣಿಪಾಲ ಹಾಗೂ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಆಯೋಜಿಸಲಾಗಿದೆ. ಆಗಸ್ಟ್ 15ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಾರ್ಯಾಗಾರ ನಡೆಯಲಿದ್ದು, ಭಾಗವಹಿಸುವವರಿಗೆ AI ಆಧಾರಿತ ವಿವಿಧ ಟೂಲ್ಸ್‌ಗಳ ಬಳಕೆ, ರೀಲ್ಸ್ ರಚನೆ, ಎಡಿಟಿಂಗ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್‌ಗಳನ್ನು ಪರಿಣಾಮಕಾರಿಯಾಗಿ ಪ್ರಕಟಿಸುವ ಕುರಿತು ಪ್ರಾಯೋಗಿಕ […]
ಫಾರ್ಚ್ಯೂನ್ ಕಾಲೇಜು ವತಿಯಿಂದ ಆ.12ರಂದು ಬ್ರಹ್ಮಾವರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಬ್ರಹ್ಮಾವರ: ಬ್ರಹ್ಮಾವರದ Fortune College of Paramedical Sciences ವತಿಯಿಂದ ಆ.12ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕುಂದಾಪುರದ Indian Red Cross Society Blood Centre, ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಮೂಡಹಾಡು ಪಾಂಡೇಶ್ವರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಮಾಬುಕಳದ ಸಾಮ್ರಾಜ್ಞಿ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಕಾಲೇಜಿನ ಆಡಿಟೋರಿಯಂನಲ್ಲಿ ಬೆಳಗ್ಗೆ 9 ಗಂಟೆಯಿಂದ ಶಿಬಿರ ಆರಂಭವಾಗಲಿದೆ. ಬಾಂಧವ್ಯ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಹಸಿರು ಪ್ರಶಸ್ತಿ ಪುರಸ್ಕೃತ […]
ಮಂಗಳೂರು ಏರ್‌ಪೋರ್ಟ್‌ನಲ್ಲಿ ಕಂಬಳದ ವೈಭವ: ತುಳುನಾಡಿನ ಜಾನಪದ ಕ್ರೀಡೆಯ ಮನಮೋಹಕ ಕಲಾಕೃತಿ ನೋಡಿ ಪ್ರಯಾಣಿಕರು ಖುಷ್!

ಮಂಗಳೂರು: ಕರಾವಳಿಯ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಜಾನಪದ ಸೊಗಡನ್ನು ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ವಿನೂತನ ಹೆಜ್ಜೆ ಇಟ್ಟಿದೆ. ತುಳುನಾಡಿನ ಹೆಮ್ಮೆಯ ವಿಶ್ವಪ್ರಸಿದ್ಧ ಜಾನಪದ ಕ್ರೀಡೆ ಕಂಬಳದ ವೈಭವವನ್ನು ಸಾರುವ ಬೃಹತ್ ಕಲಾಕೃತಿಯನ್ನು ವಿಮಾನ ನಿಲ್ದಾಣದ ಆಗಮನ ವಿಭಾಗದಲ್ಲಿ ಅಳವಡಿಸಲಾಗಿದ್ದು, ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಕಂಬಳದ ರೋಮಾಂಚಕಾರಿ ದೃಶ್ಯ ಅನಾವರಣ ಈಗಾಗಲೇ ದೇಶೀಯ ವಿಮಾನಗಳ ಬ್ಯಾಗೇಜ್ ಬೆಲ್ಟ್ ಬಳಿ ಮೊದಲ ಕಂಬಳ ಕಲಾಕೃತಿಯನ್ನು ಸ್ಥಾಪಿಸಲಾಗಿದ್ದು, ಅದು ಪ್ರಯಾಣಿಕರಿಂದ […]