ಉಡುಪಿ ತುಳುನಾಡ ಟೈಗರ್ಸ್ ನಿಂದ ಮೂರನೇ ವರ್ಷದ ಹುಲಿ‌ ಕುಣಿತ

ಉಡುಪಿ: ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಟೈಗರ್ಸ್ ಉಡುಪಿ ಇದರ ಆಶ್ರಯದಲ್ಲಿ ರಾಜೇಶ್ ಸುವರ್ಣ ನೇತೃತ್ವದಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ಮೂರನೇ ವರ್ಷದ ಹುಲಿ‌ ಕುಣಿತ ನಡೆಯಲಿದೆ.

ಪಂದುಬೆಟ್ಟುವಿನ ನಾಗಮೂಲಸ್ಥಾನದಲ್ಲಿ ನಾಗಾರಾಧನೆ, ನಾಗತಂಬಿಲ ಸೇವೆ

ಉಡುಪಿ: ಕಲ್ಮಾಡಿ ಪಂದುಬೆಟ್ಟುವಿನ ನಾಗ ಮೂಲಸ್ಥಾನದಲ್ಲಿ ನಾಗದೇವರಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ನೆರವೇರಿಸಲಾಯಿತು. ನಾಗತಂಬಿಲ‌ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಚಿಕ್ಕಮಗಳೂರು ಸಹಿತ ಉಡುಪಿಯ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಭಕ್ತರು ತಂದ‌ ಹಾಲು, ಸೀಯಾಳವನ್ನು ಅರ್ಚಕರು ದೇವರಿಗೆ ಅರ್ಪಿಸಿದರು. ಇದು ಅತ್ಯಂತ ಪ್ರಾಚೀನ ನಾಗಬನವಾಗಿದ್ದು, ನೂರಾರು ಕುಟುಂಬಗಳಿಗೆ ಮೂಲಸ್ಥಾನವೂ ಆಗಿದೆ. ಅಲ್ಲದೆ, ಗರೋಡಿ, ದೇವಸ್ಥಾನ, ಗುತ್ತುದ ಮನೆಗಳಿಗೆ ಈ ನಾಗಬನವೇ ಮೂಲ. ಹೀಗಾಗಿ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಜನರು‌ ಆಗಮಿಸಿ ತನು ಸೇವೆ ಅನ್ನು […]

ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಛಾಯಾ ಸಂಸ್ಕ್ರತಿ ವಿಶೇಷ ಕಾರ್ಯಕ್ರಮ

ಉಡುಪಿ: ಸೀಮಿತ ವರ್ತಮಾನಕ್ಕೆ ಮಾತ್ರವಲ್ಲ, ಎಂದೆಂದಿಗೂ ಛಾಯಾಗ್ರಹಣದ ಪ್ರಾಮುಖ್ಯತೆ ನಿರಂತರವಾಗಿರುತ್ತದೆ. ಎಲ್ಲರ ಬದುಕಿನಲ್ಲಿ ಛಾಯಾಚಿತ್ರದ ಪಾತ್ರ ಬಹು ಮುಖ್ಯ. ಛಾಯಚಿತ್ರ ಕಲಾವಿದ ದಾಖಲೆಗಾರನು ಹೌದು ಎಂದು ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ ಆಶಯ ವ್ಯಕ್ತಪಡಿಸಿದ್ದರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಹಾಗು ಮಲಬಾರ್ ಗೋಲ್ಡ್ & ಡೈಮಂಡ್ಸ್ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಕೆಮೆರಾ ಕ್ಲಿಕ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಛಾಯಾ ಹಾಗು ಮಾಧ್ಯಮ ಗೋಷ್ಠಿಯಲ್ಲಿ […]

ಉಡುಪಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ಹಾಗೂ ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ ಇದರ ಆಶ್ರಯದಲ್ಲಿ ಆ16 ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರದಲ್ಲಿ ಆಯೋಜಿಸಲಾದ ಉಡುಪಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಧವಿ ಆಚಾರ್, ಉಪಾಧ್ಯಕ್ಷರು ನಿರುಪಮಾ ಹೆಗ್ಡೆ, […]

ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆಯ ನೆನಪು ಮಧುರ: ಸುನಿಧಿ ಹೆಬ್ಬಾರ್ ಬರೆದ ಬರಹ..

ಸ್ವಾತಂತ್ರ್ಯ ಎಂಬ ಉತ್ಸವದ ನೆನಪಿನ ಅಂಗಳದಲ್ಲಿ ಯಾವುದೇ ಹಬ್ಬವಾಗಲಿ, ಹಬ್ಬದ ದಿನ ನಾವು ಖುಷಿಯಾಗಿರುವುದು ಒಂದು ಲೆಕ್ಕವಾದರೆ ಆ ಹಬ್ಬದ ತಯಾರಿ ನೂರು ಪಟ್ಟು ಸಂತೋಷಕಾರಿಯಾದದ್ದು. ಅದೂ ಗೆಳೆಯರೊಂದಿಗೆ ಸೇರಿ, ಕೆಲಸವನ್ನೆಲ್ಲ ಹಂಚಿಕೊಂಡು, ಒಮ್ಮೆ ನಗುತ್ತಾ ಒಮ್ಮೆ ಕಚ್ಚಾಡುತ್ತ, ನಲಿಯುತ್ತ ಆಚರಿಸುತ್ತಿದ್ದದ್ದು ನಮ್ಮ ರಾಷ್ಟ್ರೀಯ ಹಬ್ಬಗಳು. ಅಗಸ್ಟ್ ತಿಂಗಳ ಜಿಟಿ ಜಿಟಿ ಮಳೆಯಲ್ಲಿ ಬಟ್ಟೆಯನೆಲ್ಲ ಒದ್ದೆಮಾಡಿಕೊಂಡು ಉತ್ಸಾಹದಿಂದ ನಾವೆಲ್ಲ ಸೇರುತ್ತಿದದ್ದು ಸ್ವಾತಂತ್ರ್ಯೋತ್ಸವಕ್ಕೆ. ನಾನು ನನ್ನ ನೆನಪಿನ ಪುಟವನ್ನು ತಿರುವು ಹಾಕಿ ಹೋಗಬಯಸುವುದು ಮರಳಿ ನನ್ನ ಹೈ ಸ್ಕೂಲ್ […]