ಕನಸಿನ ಮನೆಯಲ್ಲಿ ನೆಮ್ಮದಿಯಿಂದ ಬದುಕಲು ಹೋಂ ಇನ್ಶೂರೆನ್ಸ್ ಆಯ್ಕೆ ಮಾಡುವುದು ಸೂಕ್ತ: ಬಜಾಜ್ ಅಲಿಯಾನ್ಸ್ ನಿಂದ ಸಲಹೆ ಸೂಚನೆಗಳು ಇಲ್ಲಿವೆ

ಹೆಚ್ಚಿನ ಜನರಿಗೆ, ಮನೆ ಖರೀದಿಸುವುದು ಅವರ ಜೀವನದಲ್ಲಿ ಅವರ ದೊಡ್ಡ ಹೂಡಿಕೆ ಮತ್ತು ಮೈಲಿಗಲ್ಲಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಸ್ವಂತ ಮನೆಯನ್ನು ಹೊಂದುವ ಆಕಾಂಕ್ಷೆಯನ್ನು ಹೊಂದಿರುತ್ತಾರೆ ಮತ್ತು ಇದು ನಮ್ಮ ಅತ್ಯಂತ ಬೆಲೆಬಾಳುವ ಸ್ವತ್ತುಗಳಲ್ಲಿ ಒಂದಾಗಿರುತ್ತದೆ, ಅದನ್ನು ನಾವು ಸಾಧ್ಯವಿರುವ ಎಲ್ಲಾ ವಿಧಾನಗಳ ಮೂಲಕ ಸುರಕ್ಷಿತವಾಗಿರಿಸಬೇಕು. ಆದಾಗ್ಯೂ, ಮನೆ ಮಾಲೀಕತ್ವವು ವಿವಿಧ ಅಪಾಯಗಳು, ಬೆಂಕಿ, ಅಪಘಾತಗಳು, ದರೋಡೆ, ನೈಸರ್ಗಿಕ ವಿಪತ್ತುಗಳು ಮತ್ತು ಗಣನೀಯ ಅರ್ಥಿಕ ನಷ್ಟ ಮತ್ತು ಭಾವನಾತ್ಮಕ ನೋವನ್ನು ಉಂಟುಮಾಡುವ ಇತರ ಅನಿರೀಕ್ಷಿತ ಘಟನೆಗಳಂತಹ ಸಂಭಾವ್ಯ ಅಪಾಯಗಳೊಂದಿಗೆ ಕೂಡಿರುತ್ತದೆ ಎಂದು ಒಪ್ಪಿಕೊಳ್ಳುವುದು ಅತ್ಯಗತ್ಯ. ಹೋಮ್ ಇನ್ಶೂರೆನ್ಸ್ ವಿಮಾದಾರರ ಮನೆಗೆ ಸುರಕ್ಷತಾ ಪದರದಂತೆ ಕಾರ್ಯನಿರ್ವಹಿಸುವ ಸಮಗ್ರ ಪರಿಹಾರವಾಗಿದೆ ಏಕೆಂದರೆ ಇದು ಅನಿರೀಕ್ಷಿತ ತುರ್ತು ಸಂದರ್ಭಗಳಲ್ಲಿ ಆರ್ಥಿಕ ಭದ್ರತೆ ಮತ್ತು ಮನಸ್ಸಿನ ಶಾಂತಿಯನ್ನು ನೀಡುತ್ತದೆ.

ಹೋಮ್ ಇನ್ಶೂರೆನ್ಸ್ ಪಾಲಿಸಿಗಳ ವಿಧಗಳ ಬಗ್ಗೆ ನಾವು ಇನ್ನಷ್ಟು ತಿಳಿಯೋಣ:

ವಸತಿ ಆವರಣದ ಕವರ್: ನೈಸರ್ಗಿಕ ವಿಪತ್ತುಗಳು ಅಥವಾ ಇತರ ಮಾನವ ನಿರ್ಮಿತ ಅಪಾಯಗಳಿಂದಾಗಿ ವಿಮಾದಾರರ ಆಸ್ತಿಯ ಭೌತಿಕ ರಚನೆಗೆ ಉಂಟಾಗಬಹುದಾದ ನಷ್ಟ ಅಥವಾ ಹಾನಿಯನ್ನು ಇದು ಒಳಗೊಳ್ಳುತ್ತದೆ. ಬೆಂಕಿ, ಅಪಘಾತಗಳು, ವಿಧ್ವಂಸಕತೆ, ಬಿರುಗಾಳಿಗಳು, ಪ್ರವಾಹಗಳು, ಚಂಡಮಾರುತಗಳು ಮತ್ತು ಇತರ ಅಜ್ಞಾತ ಬೆದರಿಕೆಗಳಂತಹ ಅಪಾಯಗಳಿಂದ ಉಂಟಾಗುವ ಹಾನಿಗಳಿಗೆ ಇದು ಕವರೇಜ್ ಒದಗಿಸುತ್ತದೆ. ಇದು ಗೋಡೆಗಳು, ಛಾವಣಿ, ಅಡಿಪಾಯ ಇತ್ಯಾದಿಗಳಿಗೆ ಉಂಟಾಗಬಹುದಾದ ಸಂಪೂರ್ಣ ಅಥವಾ ಭಾಗಶಃ ಹಾನಿಯನ್ನು ಒಳಗೊಳ್ಳುತ್ತದೆ. ಒಪ್ಪಂದವು ನಿರ್ದಿಷ್ಟಪಡಿಸಿದರೆ ಮತ್ತು ಕಟ್ಟಡದ ರಚನೆಯನ್ನು ವಿಮೆ ಮಾಡಲು ಬಾಡಿಗೆದಾರರ ಮೇಲೆ ಜವಾಬ್ದಾರಿ ಹೊತ್ತಿರುವ ಸಂದರ್ಭದಲ್ಲಿ ಈ ಕವರ್ ಅನ್ನು ಆಸ್ತಿಯ ಮಾಲೀಕರು ಅಥವಾ ಬಾಡಿಗೆದಾರರು ಪಡೆಯಬಹುದು.

ವಸತಿ ಕಂಟೆಂಟ್‌ಗಳ ಕವರ್: ಕಂಟೆಂಟ್‌ಗಳ ಇನ್ಶೂರೆನ್ಸ್ ಮನೆಯೊಳಗಿನ ವೈಯಕ್ತಿಕ ವಸ್ತುಗಳನ್ನು ರಕ್ಷಿಸುವುದರ ಮೇಲೆ ಕೇಂದ್ರೀಕೃತವಾಗಿದೆ, ಉದಾಹರಣೆಗೆ ಪೀಠೋಪಕರಣಗಳು, ಉಪಕರಣಗಳು, ಎಲೆಕ್ಟ್ರಾನಿಕ್ಸ್, ಬಟ್ಟೆ, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು. ಇದು ಕಳ್ಳತನ, ಬೆಂಕಿ, ನೀರಿನ ಹಾನಿ ಅಥವಾ ಇತರ ಅಜ್ಞಾತ ಅಪಾಯಗಳಿಂದ ಉಂಟಾಗುವ ನಷ್ಟ ಅಥವಾ ಹಾನಿಯನ್ನು ಒಳಗೊಳ್ಳುತ್ತದೆ. ಗ್ರಾಹಕರು ಕೇವಲ ಕಂಟೆಂಟ್‌ಗಳಿಗೆ ಮಾತ್ರ ರಕ್ಷಣೆಯನ್ನು ಹೊಂದಲು ಬಯಸಿದರೆ ಮತ್ತು ಕಟ್ಟಡಕ್ಕೆ ಅಲ್ಲದಿದ್ದಲ್ಲಿ ಇದು ಉಪಯುಕ್ತವಾಗಿದೆ. ಯಾಕೆಂದರೆ ಅವರು ಕಟ್ಟಡದ ಮೇಲೆ ಇನ್ಶೂರೆನ್ಸ್ ಮಾಡಲು ಆಸಕ್ತಿಯನ್ನು ಹೊಂದಿಲ್ಲದಿರಬಹುದು ಅಥವಾ ಬಾಡಿಗೆದಾರರಾಗಿರಬಹುದು.

ಸಾರ್ವಜನಿಕ ಹೊಣೆಗಾರಿಕೆ ಕವರ್: ಇನ್ಶೂರೆನ್ಸ್‌ನ ಈ ವಿಭಾಗವು ವಿಮಾದಾರನ ಆವರಣದಲ್ಲಿದ್ದಾಗ ಯಾವುದೇ ಮೂರನೇ ವ್ಯಕ್ತಿಗೆ ದೈಹಿಕ ಗಾಯ, ಸಾವು ಅಥವಾ ಮೂರನೇ ವ್ಯಕ್ತಿಯ ಆಸ್ತಿ ಹಾನಿ ಉಂಟಾದಾಗ ಮತ್ತು ಅಂತಹ ಅನಿರೀಕ್ಷಿತ ಅಪಘಾತಗಳಿಗೆ ಕ್ಲೈಮ್ ಪಡೆಯಲು ವಿಮಾದಾರರ ವಿರುದ್ಧ ಕಾನೂನು ಮೊಕದ್ದಮೆಯನ್ನು ಮಾಡಲಾದಾಗ ಕಾನೂನು ಹೊಣೆಗಾರಿಕೆಯನ್ನು ಒಳಗೊಳ್ಳುತ್ತದೆ. ಆದ್ದರಿಂದ, ಈ ಇನ್ಶೂರೆನ್ಸ್‌ ವೈದ್ಯಕೀಯ ಚಿಕಿತ್ಸಾ ಬಿಲ್‌ಗಳು ಮತ್ತು/ಅಥವಾ ಕಾನೂನು ಶುಲ್ಕಗಳು ಮತ್ತು/ಅಥವಾ ಯಾವುದೇ ಮೂರನೇ ವ್ಯಕ್ತಿಯ ಆಸ್ತಿ ರಿಪೇರಿ ಅಥವಾ ಸ್ವಸ್ಥಿತಿಗೆ ತರುವುದನ್ನು ಕವರ್ ಮಾಡಲು ವಿಸ್ತರಿತವಾಗಿದೆ.

ಕಳ್ಳತನದ ಕವರ್: ನೀವು ಮನೆ ಮಾಲೀಕರಾಗಿರಲಿ ಅಥವಾ ಬಾಡಿಗೆದಾರರಾಗಿರಲಿ, ನಿಮ್ಮ ಮನೆಯಲ್ಲಿ ಆಭರಣಗಳು, ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಕಲಾಕೃತಿಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದರೆ, ಕಳ್ಳತನದ ಘಟನೆಯು ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ನೀವು ಹೋಮ್ ಇನ್ಶೂರೆನ್ಸ್‌ ಅನ್ನು ಹೊಂದಿದ್ದರೆ, ಕಳ್ಳತನದ ಕವರ್‌ ಅಂತಹ ಘಟನೆಯಿಂದ ರಕ್ಷಣೆ ನೀಡಬಹುದು ಮತ್ತು ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ಏಕೆಂದರೆ ಅದು ಅಂತಹ ನಷ್ಟಗಳನ್ನು ಒಳಗೊಳ್ಳುತ್ತದೆ ಮತ್ತು ಕಳುವು ಘಟನೆಗೂ ವಿಸ್ತರಿಸಬಹುದು.

ಬಾಡಿಗೆದಾರರ ಕವರ್: ಕಟ್ಟಡ ರಚನೆಗಳಿಗೆ ಪ್ರೀಮಿಯಂ ಪಾವತಿಸದೆಯೇ ಬಾಡಿಗೆದಾರರು ತಮ್ಮ ಮನೆಗಳಲ್ಲಿನ ತಮ್ಮ ಕಂಟೆಂಟ್‌ಗಳಿಗೆ ಮಾತ್ರ ಕವರ್ ಅನ್ನು ಆಯ್ಕೆ ಮಾಡಬಹುದು. ಈ ಇನ್ಶೂರೆನ್ಸ್‌ ದುಬಾರಿ ಆಭರಣಗಳು, ಎಲೆಕ್ಟ್ರಾನಿಕ್ಸ್, ಉಪಕರಣಗಳು ಮತ್ತು ವರ್ಣಚಿತ್ರಗಳನ್ನು ಒಳಗೊಂಡಂತೆ ಅವರ ಕಂಟೆಂಟ್‌ಗಳನ್ನು ವಿಮಾದಾರರು ಆಯ್ಕೆಮಾಡಿದಂತೆ ಮತ್ತು ಒಪ್ಪಿಕೊಂಡಂತೆ ರಕ್ಷಿಸುತ್ತದೆ.

ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳ ಬಗ್ಗೆ ಅರಿತುಕೊಳ್ಳೋಣ:

ಹಣಕಾಸಿನ ರಕ್ಷಣೆ: ನೀವು ಸಮಗ್ರ ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ಮತ್ತು ಕೆಲವು ಅನಿರೀಕ್ಷಿತ ಘಟನೆಗಳಿಂದಾಗಿ, ಅಂತಹ ವಸತಿ ಆಸ್ತಿ/ಕಂಟೆಂಟ್‌ಗಳಿಗೆ ನಷ್ಟ ಅಥವಾ ಹಾನಿ ಉಂಟಾದರೆ, ಪಾಲಿಸಿ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಅಂತಹ ನಷ್ಟಕ್ಕೆ ಪರಿಹಾರವನ್ನು ನೀಡಲಾಗುತ್ತದೆ.

ತಾತ್ಕಾಲಿಕ ಜೀವನ ವೆಚ್ಚಗಳ ಕವರೇಜ್: ಇನ್ಶೂರೆನ್ಸ್ ಮಾಡಲಾದ ಮನೆಯು ಹಾನಿಗೊಳಗಾಗಿದ್ದರೆ ಮತ್ತು ಅದನ್ನು ಮರುನಿರ್ಮಾಣ ಅಥವಾ ನವೀಕರಿಸುವವರೆಗೆ ವಾಸಿಸಲು ಸಾಧ್ಯವಾಗದಿದ್ದರೆ, ನಂತರ ಪರ್ಯಾಯ ಮನೆಗಾಗಿ ಬಾಡಿಗೆಯನ್ನು ಪಾಲಿಸಿ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಹೋಮ್ ಇನ್ಶೂರೆನ್ಸ್ ಪಾಲಿಸಿಯಿಂದ ಒಳಗೊಳ್ಳಲಾಗುತ್ತದೆ.

ಮನೆ ಮರುನಿರ್ಮಾಣಕ್ಕೆ ಸಹಾಯ ಮಾಡುತ್ತದೆ: ಕೆಲವು ಅನಿರೀಕ್ಷಿತ ಅನಾಹುತಗಳಿಂದಾಗಿ ಮನೆಯನ್ನು ಕಳೆದುಕೊಳ್ಳುವ ಸ್ಥಿತಿ ಮತ್ತು ಅದನ್ನು ಮತ್ತೆ ಮರುನಿರ್ಮಾಣ ಮಾಡುವುದು ಒಂದು ಸವಾಲಾಗಿದೆ. ಆದರೆ ನಿಮ್ಮ ಹೋಮ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಮನೆಯನ್ನು ಮರುನಿರ್ಮಾಣ ಮಾಡಲು ಮತ್ತು/ಅಥವಾ ಮರುರಚಿಸಲು ನಿಮಗೆ ಸಹಾಯ ಮಾಡುತ್ತದೆ.

ಮನಸ್ಸಿನ ಶಾಂತಿ: ಹೋಮ್ ಇನ್ಶೂರೆನ್ಸ್ ನಿಮಗೆ ಮನಸ್ಸಿನ ಶಾಂತಿಯನ್ನು ನೀಡುತ್ತದೆ. ಏಕೆಂದರೆ ಈ ಪಾಲಿಸಿಯೊಂದಿಗೆ, ನಿಮ್ಮ ಮನೆಗೆ ಏನಾದರೂ ಸಂಭವಿಸಿದರೂ, ನಿಮ್ಮ ಮನೆಗಾದ ಹಾನಿಯನ್ನು ಸರಿಪಡಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ತಮ್ಮ ಇನ್ಶೂರೆನ್ಸ್ ಪಾಲಿಸಿಯಿಂದ ಆರ್ಥಿಕವಾಗಿ ರಕ್ಷಿಸಲ್ಪಡುತ್ತದೆ.

ಹೋಮ್ ಇನ್ಶೂರೆನ್ಸ್ ರಕ್ಷಣೆಯು ಎಲ್ಲಾ ಮನೆಮಾಲೀಕರಿಗೆ ಮತ್ತು ಬಾಡಿಗೆದಾರರಿಗೆ ಅವಶ್ಯಕವಾಗಿದೆ. ನಿಮ್ಮ ಮನೆ ನಿಸ್ಸಂದೇಹವಾಗಿ ನಿಮ್ಮ ಅತ್ಯಮೂಲ್ಯ ಆಸ್ತಿಯಾಗಿದೆ. ನಮ್ಮಲ್ಲಿ ಅನೇಕರು ಕೈಗೆಟುಕುವ ಪ್ರೀಮಿಯಂನ ಅನುಕೂಲತೆ ನೀಡಿದರೂ ಹೋಮ್ ಇನ್ಶೂರೆನ್ಸ್ ಪಡೆಯುವುದರೊಂದಿಗೆ ತಮ್ಮ ಮನೆಗಳನ್ನು ರಕ್ಷಿಸಲು ಆದ್ಯತೆ ನೀಡುವುದಿಲ್ಲ. ಹಣಕಾಸಿನ ಹಾನಿಯನ್ನುಂಟುಮಾಡುವ ಅನಿರೀಕ್ಷಿತ ಘಟನೆಗಳು ಯಾವುದೇ ಸಮಯದಲ್ಲಿ ಬೇಕಾದರೂ ಸಂಭವಿಸಬಹುದು. ಈ ಕಾರಣದಿಂದ ಹೋಮ್ ಇನ್ಶೂರೆನ್ಸ್ ಅತ್ಯಗತ್ಯ. ನಿಮ್ಮ ಬಜೆಟ್ ಅನ್ನು ತಗ್ಗಿಸದೆಯೇ ರಿಪೇರಿ ಅಥವಾ ನವೀಕರಣಗಳ ವೆಚ್ಚದಿಂದ ಇದು ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ, ನೀವು ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಲು ಅಥವಾ ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಹೊಸ ಮನೆಯಲ್ಲಿ ಚಿಂತಾಮುಕ್ತರಾಗಿ ವಾಸ್ತವ್ಯವನ್ನು ಖಚಿತಪಡಿಸಿಕೊಳ್ಳಲು ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳುವುವುದಕ್ಕೆ ಬದ್ಧರಾಗಿರಿ.

ಲೇಖನ: ಗುರುದೀಪ್ ಸಿಂಗ್ ಬಾತ್ರಾ, ಮುಖ್ಯಸ್ಥರು- ಪ್ರಾಪರ್ಟಿ ಯುಡಬ್ಲ್ಯೂ (ಇ ಮತ್ತು ಎಸ್), ರಿಸ್ಕ್ ಎಂಜಿನಿಯರಿಂಗ್, ಗ್ಲೋಬಲ್ ಅಕೌಂಟ್ಸ್ ಮತ್ತು ಕೊಇನ್ಶೂರೆನ್ಸ್