ಮಂಗಳೂರು: ಸಿಎಂ ನಿಧಿಗೆ ಬಜಪೆ ವ್ಯ.ಸೇ.ಸ. ಸಂಘದಿಂದ 5 ಲಕ್ಷ ರೂ.

ಮಂಗಳೂರು: ರಾಜ್ಯದ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಹಕಾರಿ ಸಂಘ ಸಂಸ್ಥೆಗಳಿಗೆ ಎಸ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮನವಿ ಮಾಡಿದ್ದು ಇದಕ್ಕೆ ಸ್ಪಂದಿಸಿರುವ ಬಜಪೆ ವ್ಯ.ಸೇ.ಸ. ಸಂಘ 5 ಲಕ್ಷ ರೂ. ನೆರವು ನೀಡಿದೆ. ಗುರುವಾರ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಬಜಪೆ ವ್ಯ.ಸೇ.ಸ. ಸಂಘದ ಅಧ್ಯಕ್ಷ ಕೆ. ಮೋನಪ್ಪ ಶೆಟ್ಟಿ ಎಕ್ಕಾರು ಅವರು ನೆರವಿನ ಚೆಕ್‌ನ್ನು ಸಿಎಂ ಪ್ರಕೃತಿ ವಿಕೋಪ ನಿಧಿಗೆ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮೂಲಕ ಹಸ್ತಾಂತರಿಸಿದರು. […]

ಸಂದೇಶ ಸಂಸ್ಕೃತಿ, ಶಿಕ್ಷಣ ಪ್ರತಿಷ್ಠಾನ: ಪ್ರತಿಭಾ ದಿನಾಚರಣೆ ಉದ್ಘಾಟನೆ

ಮಂಗಳೂರು: ಸಂಗೀತವು ಜೀವನದ ಒಂದು ಅಂಗ ಎಂದು ಭಾವಿಸಿ ಮಕ್ಕಳು ಅದನ್ನು ಕಲಿಯಬೇಕು ಎಂದು ಸರ್ವಜ್ಞ ಅಕಾಡೆಮಿಯ ಅಧ್ಯಕ್ಷ ಸುರೇಶ್‌ ಎಂ.ಎಸ್‌. ಹೇಳಿದರು.  ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿ ಯಾಗಿ ಭಾಗವಹಿಸಿ  ಮಾತನಾಡಿದರು. ಪ್ರಾಣಿಗಳೂ ಸಂಗೀತಕ್ಕೆ ತಲೆದೂಗುತ್ತವೆ ದೇಶೀಯ ಮತ್ತು ಪಾಶ್ಚಾತ್ಯ ಸಂಗೀತವನ್ನು ಕಲಿಸುವ ಮೂಲಕ ಸಂದೇಶ ಪ್ರತಿಷ್ಠಾನವು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತದೆ ಎಂದರು. ಸಂದೇಶ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ […]

ಮಣಿಪಾಲದಲ್ಲಿ ಕಲಾಸಿಲ್ಕ್ ಕಾಟನ್‌ ಎಕ್ಸ್‌ಫೋ : ಹ್ಯಾಂಡ್‌ ಲೂಮ್‌, ಹ್ಯಾಂಡಿಕ್ರಾಫ್ಟ್‌ ಬಟ್ಟೆಗಳು ನಿಮಗಾಗಿ ಕಾದಿವೆ

ಮಣಿಪಾಲ:ಹ್ಯಾಂಡ್‌ ಲೂಮ್‌, ಹ್ಯಾಂಡಿಕ್ರಾಫ್ಟ್‌ ಬಟ್ಟೆಗಳನ್ನು ಕೊಳ್ಳುವ ಮನಸ್ಸಾಗಿದೆಯೇ? ಹಾಗಿದ್ದರೆ ಮಣಿಪಾಲದಲ್ಲಿ ನಿಮ್ಮ ಕನಸು ನನಸಾಗಲಿದೆ. ಮಣಿಪಾಲದ ಅಲೆವೂರು ರಸ್ತೆ, ಸಿಂಡಿಕೇಟ್ ಬ್ಯಾಂಕ್‌ ಹೆಡ್‌ ಆಫೀಸ್‌ನ ಹತ್ತಿರವಿರುವ ಆರ್‌.ಎಸ್‌.ಬಿ. ಸಭಾಭವನದಲ್ಲಿ ಮೊದಲ ಬಾರಿಗೆ ಕಲಾಸಿಲ್ಕ್ ಕಾಟನ್‌ ಎಕ್ಸ್‌ಫೋ 2019 ಹ್ಯಾಂಡ್‌ ಲೂಮ್‌ ಮತ್ತು ಹ್ಯಾಂಡಿಕ್ರಾಫ್ಟ್‌ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದ್ದು ಇಲ್ಲಿ ನಿಮ್ಮ ಅಚ್ಚುಮೆಚ್ಚಿನ ಹ್ಯಾಂಡ್‌ ಲೂಮ್‌, ಹ್ಯಾಂಡಿಕ್ರಾಫ್ಟ್‌ ಬಟ್ಟೆಗಳು ಲಭ್ಯವಿದೆ.. ಏನೇನ್ ಸ್ಪೆಷಲ್? ಅಂದ ಹಾಗೆ  ಪ್ರದರ್ಶನದಲ್ಲಿ ಆಂಧ್ರ ಪ್ರದೇಶದ ಧರ್ಮಾವರಂ, ವೆಂಕಟಗಿರಿ, ಮಂಗಳಗಿರಿ, ಕಾಲಾಂಕರಿ ಮತ್ತು ಉಪ್ಪಾಡ‌, […]

ಗ್ರಾಹಕರೇ ಬ್ಯಾಂಕ್ ನ ದೇವರು, ಅವರ ಸೇವೆಯೇ ನಮ್ಮ ಗುರಿ: ಡಾ| ಎಂ.ಎನ್‌.ರಾಜೇಂದ್ರಕುಮಾರ್

ಕಾಪು: ಸಹಕಾರಿ ಬ್ಯಾಂಕ್ ಗಳ ಪಾಲಿಗೆ ಗ್ರಾಹಕರೇ ದೇವರುಗಳು, ಅವರ ನಿರಂತರ ಸೇವೆಯೇ ನಮ್ಮ ಗುರಿ. ಜನರಿಗೆ ಉತ್ತಮ ಸೇವೆ ನೀಡಿ ಜನರ ವಿಶ್ವಾಸಕ್ಕೆ ಪಾತ್ರರಾಗಬೇಕು ಎನ್ನುವುದೇ ಬ್ಯಾಂಕ್ ಉದ್ದೇಶ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು. ಆ. 26ರಂದು ಕಾಪು ಶ್ರೀ ನಾರಾಯಣ ಗುರು ಸಂಕೀರ್ಣದ ಪ್ರಥಮ ಅಂತಸ್ತಿಗೆ ಸ್ಥಳಾಂತರಗೊಂಡ ಎಸ್‌ಸಿಡಿಸಿಸಿ ಬ್ಯಾಂಕ್‌ನ ಕಾಪು ಶಾಖೆ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್ […]

ಪ್ರೈಮ್ ಉಡುಪಿ: ಐಬಿಪಿಎಸ್ ಬ್ಯಾ೦ಕಿ೦ಗ್ ಪರೀಕ್ಷಾ ತರಬೇತಿ ಆ.29 ರಿಂದ ಆರಂಭ

ಉಡುಪಿ: ಪ್ರೈಮ್ ಉಡುಪಿ ವತಿಯಿಂದ ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಆ.29ರಿಂದ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳ್ಳಲಿದೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐ.ಬಿ.ಪಿ.ಎಸ್) ಆಯೋಜಿಸುವ ಬ್ಯಾಂಕ್ ಆಪೀಸರ್ ಮತ್ತು ಕ್ಲರಿಕಲ್ ಹುದ್ದೆಗಳ ನೇಮಕಕ್ಕೆ ಐಬಿಪಿಎಸ್ ಸಂಸ್ಥೆಯು ಅಧಿಸೂಚನೆ ಹೊರಡಿಸಿದ್ದು ಇದಕ್ಕೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಬ್ಯಾಂಕಿಂಗ್ ಪರೀಕ್ಷಾ ತರಬೇತಿಯ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ನಡೆಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಚೇತನ್ ಪ್ರಭು ಇವರು ಬ್ಯಾ೦ಕಿಂಗ್ ನೇಮಕಾತಿ ಪರೀಕ್ಷೆಯ  ಬಗ್ಗೆ ಮಾಹಿತಿ ನೀಡಿದರು. ತರಬೇತಿಯಲ್ಲಿ ಏನಿದೆ? […]