ಆ.26: ಎಸ್‌ಸಿಡಿಸಿಸಿ ಬ್ಯಾಂಕ್‌ ಕಾಪು ಶಾಖೆ ಸ್ಥಳಾಂತರ

ಮಂಗಳೂರು: ಇಲ್ಲಿನ ಎಸ್‌ಸಿಡಿಸಿಸಿ ಬ್ಯಾಂಕ್‌ನ ಕಾಪು ಶಾಖೆಯು ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಈಗ ಇರುವ ಕಟ್ಟಡದಿಂದ ಕಾಪು ರಾ. ಹೆ. 66ರ ಬಳಿಯ ಶ್ರೀ ನಾರಾಯಣ ಗುರು ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಗೆ ಆ.26ರಂದು ಸ್ಥಳಾಂತರಗೊಳ್ಳಲಿದೆ. ಆ ದಿ‌ನ ಬೆಳಗ್ಗೆ 10.30ಕ್ಕೆ  ಕಚೇರಿಯ ಉದ್ಘಾಟನಾ ಸಮಾರಂಭ ಜರಗಲಿದೆ. ಶಾಸಕ ಲಾಲಾಜಿ ಆರ್‌. ಮೆಂಡನ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬ್ಯಾಂಕಿನ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಸಹಕಾರ […]

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಸುತ್ತೋಲೆಯಿಂದ ವಿನಾಯ್ತಿ ನೀಡಿ:ಡಾ| ಎಂ.ಎನ್‌ ರಾಜೇಂದ್ರ ಕುಮಾರ್

ಮಂಗಳೂರು:ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಜು.30ರಂದು ಕೃಷಿ ಇಲಾಖೆಯ ಮೂಲಕ ರಸಗೊಬ್ಬರ ಮಾರಾಟ ಕೇಂದ್ರ ತೆರೆಯಲು ಪರವಾನಿಗೆಗೆ ಕಡ್ಡಾಯವಾಗಿ ಕೃಷಿ ವಿಜ್ಞಾನದಲ್ಲಿ ಪದವಿ ಅಥವಾ ಡಿಪ್ಲೊಮಾ ಇನ್‌ ಎಇಎಸ್‌ಐ ಪ್ರೋಗ್ರಾಮ್‌ ಅರ್ಹತೆ ಹೊಂದಿರಬೇಕು ಎಂಬ  ಸುತ್ತೋಲೆ ಹೊರಡಿಸಿದ್ದು  ಈ ಸುತ್ತೋಲೆಯಿಂದ ವಿನಾಯಿತಿ ನೀಡಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್‌.  ಅವರು ಕೇಂದ್ರ ಸರಕಾರದ ರಾಸಾಯನಿಕ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅ ಮನವಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಪತ್ತಿನ […]

ಪೊದಾರ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಉಡುಪಿ:  ಪೊದಾರ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ  ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ನಿವೃತ್ತ ಯೋಧ,ರೈಲ್ವೇ ಯಾತ್ರಿಕರ ಸಂಘದ ಅಧ್ಯಕ್ಷರಾದ ಆರ್.ಎಲ್.ಡಾಯಸ್  ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಎಮ್.ಎಸ್.ಹಿರೇಮಠ ಸ್ವಾತಂತ್ರ್ಯೋತ್ಸವದ ಕುರಿತು ಮಾಹಿತಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿ ಪ್ರಥಮ್ ನಿರೂಪಿಸಿದರು. ವಿದ್ಯಾರ್ಥಿಗಳಾದ ರಶಾದ್ ಸ್ವಾಗತಿಸಿ, ಸುಪ್ರೀತ್ ವಂದಿಸಿದರು.

ಪ್ರೈಮ್: ಬ್ಯಾಂಕಿಂಗ್ ನೇಮಕಾತಿ ಮಾದರಿ ಸಂದರ್ಶನ ಕಮ್ಮಟ

ಉಡುಪಿ: ಪ್ರೈಮ್ ಸಂಸ್ಥೆಯು ಕರ್ಣಾಟಕ ಬ್ಯಾಂಕ್ ಕ್ಲರಿಕಲ್ ವಿಭಾಗದಲ್ಲಿ ನಡೆಸಿದ  ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ  ಪ್ರೈಮ್ ಸಂಸ್ಥೆಯ  33 ಅಭ್ಯರ್ಥಿಗಳಿಗೆ ಮುಂದಿನ ಹಂತದ  ವೈಯಕ್ತಿಕ ಸಂದರ್ಶನ ಪರೀಕ್ಷೆಯನ್ನು ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ಎದುರಿಸಲು ಬೇಕಾದ ಮಾರ್ಗದರ್ಶನ ಕಾರ್ಯಾಗಾರ ಕಾರ್ಯಕ್ರಮ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿಗಳಾಗಿ ಗುರುಪ್ರಸಾದ್, ಶೈಲೇಸ್, ಎ.ಪಿ.ಭಟ್ ಭಾಗವಹಿಸಿ, ಸಂದರ್ಶನದಲ್ಲಿ ಯಶಸ್ಸು ಗಳಿಸಲು ನೆರವಾಗುವ ಕೌಶಲಗಳ ವಿವರ ಹಾಗೂ ಯಶಸ್ವೀ ಸಂದರ್ಶನದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಪ್ರತೀ ಅಭ್ಯರ್ಥಿಗಳಿಗೂ 30ನಿಮಿಷದ […]

ಗುಣಮಟ್ಟದ ಶಿಕ್ಷಣದಲ್ಲಿ ಅಂತರಾಷ್ಟ್ರೀಯ ಅವಕಾಶಗಳಿವೆ: ಡಾ| ಬಲ್ಲಾಳ್‌

ಉಡುಪಿ: ಗುಣಮಟ್ಟದ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಅವಕಾಶಗಳಿವೆ ಎಂದು ಮಣಿಪಾಲ ಮಾಹೆ ವಿ.ವಿ.ಯ ಸಹಕುಲಾಧಿಪತಿ ಡಾ| ಎಚ್. ಎಸ್‌. ಬಲ್ಲಾಳ್‌ ಹೇಳಿದರು. ಮಣಿಪಾಲದಲ್ಲಿ ಶುಕ್ರವಾರ ಮಣಿಪಾಲ್ ಯುನಿವರ್ಸಲ್ ಪ್ರಸ್‌ನ (ಎಂಯುಪಿ) 155ನೇ ಪ್ರಕಾಶನವಾದ ‘ಇಂಟರ್‌ನ್ಯಾಶನಲೈಸೇಶನ್‌ ಆಫ್ ಹೈಯರ್‌ ಎಜುಕೇಶನ್‌: ದಿ ಡೈನಾಮಿಕ್ಸ್‌ ಆಫ್ ಎಜುಕೇಶನಲ್ ಇಕಾಲಜಿ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣದ ಅಂತಾರಾಷ್ಟ್ರೀಕರಣದ ಪಾತ್ರವನ್ನು ಪುಸ್ತಕ ಪ್ರತಿಫ‌ಲಿಸುತ್ತಿದೆ. ಇದಕ್ಕೆ ಪೂರಕವಾಗಿ ವಿದೇಶಗಳ ವಿ.ವಿ.ಗಳೊಂದಿಗೆ ವಿನಿಮಯ, ಟ್ವಿನ್ನಿಂಗ್‌ ಕಾರ್ಯಕ್ರಮಗಳು, ವಿದ್ಯಾರ್ಥಿ ವಿನಿಮಯ ಇತ್ಯಾದಿ ಕಾರ್ಯಕ್ರಮಗಳನ್ನು ಮಾಹೆ ವಿ.ವಿ. ಜಾರಿಗೊಳಿಸಿದೆ ಎಂದವರು […]