ಇಂಜಿನಿಯರ್ ದಿನದ ಬಗ್ಗೆ ಶೋಭಾ ಬರೆದ ಸ್ಪೆಷಲ್ ಬರಹ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೊಂದು ಕಿವಿಮಾತು

  Engineers are persons who discover world by their pen and brain  ಈಗಷ್ಟೇ ಪಿ.ಯು.ಸಿ .ಮುಗಿಸಿ ಡಿಗ್ರಿ, ಅನ್ನೋ ಹೊಸ ಲೋಕಕ್ಕೆ ಕಾಲಿಡುವ ಮೊದಲು ಏನಾದರೂ ಸಾಧಿಸಬೇಕು, ಯಾವ ಕ್ಷೇತ್ರದಲ್ಲಿ ನಾವು ತೊಡಗಿಕೊಂಡರೆ ಒಳ್ಳೆಯದು ಎಂದು ಸಾವಿರ ಪ್ರಶ್ನೆಗಳನ್ನು ಹೊತ್ತು ಈಗಷ್ಟೇ ಡಿಗ್ರಿ ಮೆಟ್ಟಿಲನ್ನು ಏರಿರುವ ಎಲ್ಲ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಹಾಗೂ ಇಂಜಿನಿಯರಿಂಗ್ ಎನ್ನುವ ಪದವಿಯನ್ನು ಮುಗಿಸಿ ತಮ್ಮ ತಮ್ಮ ಕನಸಿನ ಬೆನ್ನೇರಿ ಯಶಸ್ಸನ್ನು ಗಳಿಸಿರುವ ಹಾಗೂ ಗಳಿಸುತ್ತಿರುವ ಎಲ್ಲಾ ಇಂಜಿನಿಯರ್ ಗಳಿಗೂ […]

ಪೊದಾರ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕರ ದಿನ ಆಚರಣೆ

ಉಡುಪಿ: ಪೊದಾರ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲರಾದ ಎಮ್.ಎಸ್.ಹಿರೇಮಠ  ಉದ್ಘಾಟಿಸಿದರು. ಶಾಲಾ ಮಕ್ಕಳು ಶಿಕ್ಷಕ ದಿನಾಚರಣೆಯ ಮಹತ್ವದ ಬಗ್ಗೆ ಭಾಷಣ ಮಾಡಿದರು. ಶಿಕ್ಷಕರ ಪರವಾಗಿ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯಿಯಾದ ಲಕ್ಷ್ಮೀ ಕದೆರೇಶ್ವರನ್ ಶಿಕ್ಷಕರ ದಿನಚರಣೆಯ ಬಗ್ಗೆ  ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿ ರಶಾದ್ ಸ್ವಾಗತಿಸಿದರು. ವಿವಿಧ ಸಾಂಸೃತಿಕ ಕಾರ್ಯಕ್ರಮಗಳು ನಡೆದವು.ಶಿಕ್ಷಕರಿಗಾಗಿ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ತನು ಶೆಟ್ಟಿ ನಿರೂಪಿಸಿದರು.

ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ 51.48 ಲಕ್ಷ ರೂ. ಲಾಭ, ಶೇ. 9.50 ಡಿವಿಡೆಂಡ್‌

ಮಂಗಳೂರು:ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 11ನೇ ವಾರ್ಷಿಕ ಸಾಮಾನ್ಯ ಸಭೆ ಶನಿವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಜರಗಿತು. ಅಧ್ಯಕ್ಷತೆ ವಹಿಸಿದ್ದ ಭಾಸ್ಕರ್‌ ಎಸ್‌ ಕೋಟ್ಯಾನ್‌ ಮಾತನಾಡಿ, ನಮ್ಮ ಸಂಸ್ಥೆಯು ಸರ್ವ ಸದಸ್ಯರ ಮತ್ತು ಠೇವಣಿದಾರರ ಸಹಕಾರದಿಂದ ಉತ್ತಮ ಅಭಿವೃದ್ಧಿ ಸಾಧಿಸಿದೆ. 11,684 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ 1.42 ಕೋಟಿ ರೂ. ಇರುತ್ತದೆ. 45.54 ಕೋಟಿ ರೂ. ಠೇವಣಿ ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ 46.05 ಕೋಟಿ ರೂ.ಸಾಲ ನೀಡಲಾಗಿದೆ ಎಂದರು. ಸಂಸ್ಥೆಯು 51.48 ಲಕ್ಷ ರೂ. ಲಾಭ […]

ಎಸ್‌ಸಿಡಿಸಿಸಿ ಬ್ಯಾಂಕ್‌: ಸಾರ್ವಕಾಲಿಕ ಗರಿಷ್ಠ 30.29 ಕೋ.ರೂ. ಲಾಭ: ಮಹಾಸಭೆಯಲ್ಲಿ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ  ಬ್ಯಾಂಕ್‌ 2018-19ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ 30.29 ಕೋ .ರೂ. ಲಾಭ ಗಳಿಸಿದ್ದು ಸದಸ್ಯ ಸಂಘಗಳಿಗೆ ಶೇ. 9 ಡಿವಿಡೆಂಡ್‌ ಅನ್ನು ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದ್ದಾರೆ. ಬ್ಯಾಂಕಿನ ಸಭಾಭವನದಲ್ಲಿ ಶನಿವಾರ ನಡೆದ 105ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ದಿನೇ ದಿನೇ ಸ್ಪರ್ಧೆಯನ್ನು ಎದುರಿಸಿದರೂ ಬ್ಯಾಂಕ್‌ ದೇಶದ ಅಗ್ರಮಾನ್ಯ ಸಹಕಾರಿ ಬ್ಯಾಂಕ್‌ ಎನಿಸಿಕೊಂಡಿದೆ […]

ಕ್ಯಾನ್ಸರ್ ರೋಗದಿಂದ ಕಂಗಾಲಾಗಿದೆ ಮುದ್ದು ಮುಖದ ಮಗು:ಬೇಕಿದೆ ನಮ್ಮೆಲ್ಲರ ನೆರವು

ಕಳೆದ ಒಂದುವರೆ ವರುಷಗಳಿಂದ ಈ ಮಗು ಕ್ಯಾನ್ಸರ್ ರೋಗದ ವಿರುದ್ದ ಹೊರಾಟಕ್ಕೆ ನಿಂತಿದೆ,ಇಷ್ಟೊತ್ತಿಗೆ ನಾಲ್ಕನೇ ಕ್ಲಾಸಿನಲ್ಲಿ ಕುಳಿತು ತನ್ನ ಸಹಪಾಠಿಗಳೊಂದಿಗೆ ಆಟಪಾಠಗಳಲ್ಲಿ ಭಾಗಿಯಾಗಬೇಕಿದ್ದ ಈ ಮುದ್ದು ಮುಖದ ಕಂದಮ್ಮ ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿ ಡಾಕ್ಟರು ನರ್ಸುಗಳ ಮುಖ ನೋಡುತ್ತಿದೆ, ಸಹಪಾಠಿಗಳ ಜೊತೆ ಆಟವಾಡುತ್ತ ನಲಿಯಬೇಕಾದ ಈ ಮುದ್ದು ಹುಡುಗಿ ಕ್ಯಾನ್ಸರ್ ಕೂಪದಲ್ಲಿ ನಲುಗಿಹೋಗಿದೆ. ಇದೀಗ ಚಿಕಿತ್ಸೆಗಾಗಿ  ಸರಿ ಸುಮಾರು ಮೂವತ್ತೆರಡು ಲಕ್ಷಗಳ ಬೆಟ್ಟದಂತಹ ಮೊತ್ತದ ಅಂದಾಜನ್ನು  ಮಾಡುತ್ತಲೇ ಈ ಮಗುವಿನ ತಂದೆ ತಾಯಿ ಕಂಗಾಲಾಗಿ ಕುಳಿತಿದ್ದಾರೆ! […]