ಆಸ್ಟ್ರೇಲಿಯದ ಕಿಂಬರ್ಲಿಯಲ್ಲಿ 380 ಮಿಲಿಯನ್ ವರ್ಷ ಹಳೆಯ ಮೀನಿನ ಹೃದಯದ ಪಳೆಯುಳಿಕೆ ಪತ್ತೆ!

380 ಮಿಲಿಯನ್ ವರ್ಷ ಹಳೆಯ ಮೀನಿನ ಹೃದಯ ಇತ್ತೀಚೆಗಷ್ಟೇ ಆಸ್ಟ್ರೇಲಿಯದ ಕಿಂಬರ್ಲಿಯಲ್ಲಿನ ಬಂಡೆಯ ರಚನೆಯಿಂದ ಪಡೆಯಲಾಗಿದೆ. ಇದುವರೆಗೆ ಕಂಡುಬಂದಿರುವ ಅತ್ಯಂತ ಹಳೆಯ ಪಳೆಯುಳಿಕೆ ಇದಾಗಿದೆ ಎಂದು ದ ವೆಥರ್ ಚಾನೆಲ್ ಇಂಡಿಯಾ ವರದಿ ಮಾಡಿದೆ. ಈ ಹೃದಯವು ಆರ್ತ್ರೋಡೈರ್ಸ್ ಅಥವಾ ಗೊಗೊ ಮೀನು ಎಂದು ಕರೆಯಲ್ಪಡುವ ಶಸ್ತ್ರಸಜ್ಜಿತ ದವಡೆಯ ಮೀನುಗಳ ವರ್ಗಕ್ಕೆ ಸೇರಿದೆ. ಆದರೆ ಅದಕ್ಕಿಂತಲೂ ವಿಸ್ಮಯಕಾರಿ ಸಂಗತಿಯೆಂದರೆ ಪಳೆಯುಳಿಕೆಯು ಚಪ್ಪಟೆಯಾಗಿರದೆ ಅಪರೂಪದ ಮೂರು ಆಯಾಮಗಳಲ್ಲಿ ಸಂರಕ್ಷಿಸಲ್ಪಟ್ಟಿರುವುದು ಕಂಡುಬಂದಿದೆ. ಹೃದಯದ ಪಕ್ಕದಲ್ಲಿ ಪಳೆಯುಳಿಕೆಗೊಂಡ ಹೊಟ್ಟೆ, ಕರುಳು ಮತ್ತು […]
ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಮಸ್ತ ಇಂಜಿನಿಯರ್ ಗಳಿಗೆ ಇಂಜಿನಿಯರಿಂಗ್ ದಿನದ ಶುಭಾಶಯಗಳು

ಭೋರ್ಗರೆಯುತ್ತಾ ಧುಮ್ಮಿಕ್ಕುವ ಜೋಗದ ಜಲಪಾತವನ್ನು ಕಂಡು ಒಬ್ಬ ಭಾವಾತುರನಾಗಿ ಕಾವ್ಯ ರಚಿಸಿ ಧನ್ಯನಾಗುತ್ತಾನೆ. ಅದೆ ಮತ್ತೊಬ್ಬ ಇಷ್ಟೊಂದು ನೀರು ಪೋಲಾಗುತ್ತಿದೆಯಲ್ಲಾ? ಇದಕ್ಕೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಬಹುದಲ್ಲಾ ಅಥವಾ ನೀರಾವರಿಗೆ ಬಳಸಬಹುದಲ್ಲಾ ಎಂದು ಯೋಚಿಸುತ್ತಾನೆ. ಒಬ್ಬ ಕವಿಗೂ ಒಬ್ಬ ವಿಜ್ಞಾನಿಗೂ ಇರುವ ವ್ಯತ್ಯಾಸವೆಂದರೆ ಇದುವೆ. ಇಬ್ಬರೂ ಅವರವರ ಕ್ಷೇತ್ರದಲ್ಲಿ ಶ್ರೇಷ್ಠರು. ಆಧುನಿಕ ಮೈಸೂರಿನ ಶಿಲ್ಪಿ ಸರ್ ಎಮ್ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ದೇಶಾದ್ಯಂತ ಇಂಜಿನಿಯರರ ದಿನಾಚರಣೆಯಾಗಿ ಆಚರಿಸುತ್ತೇವೆ. ವಿಶ್ವೇಶ್ವರಯ್ಯನವರು ಕೇವಲ ಒಬ್ಬ ಶ್ರೇಷ್ಠ ಇಂಜಿನಿಯರ್ ಮಾತ್ರವಲ್ಲ, ಅವರು ವಿಜ್ಞಾನಿ […]
ಇಂಜಿನಿಯರ್ಸ್ ದಿನಾಚರಣೆಗೆ ನಾಡಿನ ಗಣ್ಯರಿಂದ ಶುಭಹಾರೈಕೆ..

ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಬೇಸ್ ಸಂಸ್ಥೆಯ ಅವಳಿ ಸಹೋದರರ ಅನುಭವದ ಮಾತುಗಳು

ಈ ಬಾರಿಯ ರಾಷ್ಟ್ರ ಮಟ್ಟದ ಬಹು ಪ್ರತಿಷ್ಠಿತ ವೆೈದ್ಯಕೀಯ ಪ್ರವೇಶ ಪರೀಕ್ಷೆ “ನೀಟ್”ನಲ್ಲಿ ಉಡುಪಿಯ ವೃಜೇಶ್ ವೀಣಾಧರ್ ಶೆಟ್ಟಿ ರಾಷ್ಟ್ರ ಮಟ್ಟದಲ್ಲಿ 13ನೇ ರ‍್ಯಾಂಕ್ (710/720) ಗಳಿಸುವುದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ಉತ್ಕೃಷ್ಟ ಸಾಧನೆಗೆೈದ ಕೀರ್ತಿಗೆ ಭಾಜನರಾಗಿದ್ದಾರೆ. ಈತನ ಅವಳಿ ಸಹೇೂದರ ವೃಷಾನ್ ಶೆಟ್ಟಿ 547ನೇ ಸ್ಥಾನ (685/720) ಪಡೆದಿರುವುದು ಅಪರೂಪದ ಸಾಧನೆ. ಈ ಅವಳಿ ಸಹೇೂದರರು ತಮ್ಮ ನೀಟ್ ಪರೀಕ್ಷಾ ತರಬೇತಿಯನ್ನು ಉಡುಪಿಯ ಬೇಸ್ ಸಂಸ್ಥೆಯಲ್ಲಿ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿದ್ದಾರೆ. “ಬೇಸ್” ಸಂಸ್ಥೆಯಲ್ಲಿ ಪಡೆದ ಉತ್ತಮ ಗುಣಮಟ್ಟದ […]
ವೈದ್ಯಕೀಯ ಗುಣಗಳಿರುವ ‘ಸ್ವರ್ಗದ ಹಣ್ಣಿನ’ ಬೀಜಗಳಿಂದ ವರ್ಷಕ್ಕೆ 2 ಲಕ್ಷ ಸಂಪಾದಿಸುವ ಕೇರಳದ ರೈತನ ಯಶೋಗಾಥೆ!

ಎರ್ನಾಕುಲಂ: 2018 ರಲ್ಲಿ ಕೇರಳದ ವೈಕೋಮ್‌ನ ಕಾರ್ಯಕ್ರಮವೊಂದರಲ್ಲಿ ಹೊರಭಾಗದಲ್ಲಿ ಮುಳ್ಳುಗಳನ್ನು ಹೊಂದಿರುವ ಹೊಳೆಯುವ ಕೆಂಪು-ಕಿತ್ತಳೆ ಬಣ್ಣದಲ್ಲಿರುವ ಕಲ್ಲಂಗಡಿ ಗಾತ್ರದ ಹಣ್ಣು, ಜೊಜೊ ಪುನ್ನಕಲ್ ಅವರ ಗಮನವನ್ನು ಸೆಳೆಯಿತು. ಹಣ್ಣಿನ ಬಗ್ಗೆ ಕುತೂಹಲಗೊಂಡು ಕೆಲವು ಬೀಜಗಳನ್ನು ಸಂಗ್ರಹಿಸಿ ಅದನ್ನು ತಮ್ಮ ತೋಟದಲ್ಲಿ ಬೆಳೆದ ಜೊಜೋ ಅವರು ಇಂದು ಅದರ ಬೀಜ ಮಾತ್ರದಿಂದಲೇ ವರ್ಷಕ್ಕೆ 2 ಲಕ್ಷ ರೂ ಸಂಪಾದನೆ ಮಾಡುತ್ತಿದ್ದಾರೆ! ಎರ್ನಾಕುಲಂನ ಜೋಜೋ ಪುನ್ನಕಲ್ ಅವರು ಕಳೆದ ನಾಲ್ಕು ವರ್ಷಗಳಿಂದ ವಿಯೆಟ್ನಾಂನ ವಿಲಕ್ಷಣ ಮತ್ತು ಪೌಷ್ಟಿಕಾಂಶಗಳುಳ್ಳ ಗ್ಯಾಕ್ ಹಣ್ಣನ್ನು […]