ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಬೇಸ್ ಸಂಸ್ಥೆಯ ಅವಳಿ ಸಹೋದರರ ಅನುಭವದ ಮಾತುಗಳು

ಈ ಬಾರಿಯ ರಾಷ್ಟ್ರ ಮಟ್ಟದ ಬಹು ಪ್ರತಿಷ್ಠಿತ ವೆೈದ್ಯಕೀಯ ಪ್ರವೇಶ ಪರೀಕ್ಷೆ “ನೀಟ್”ನಲ್ಲಿ ಉಡುಪಿಯ ವೃಜೇಶ್ ವೀಣಾಧರ್ ಶೆಟ್ಟಿ ರಾಷ್ಟ್ರ ಮಟ್ಟದಲ್ಲಿ 13ನೇ ರ‍್ಯಾಂಕ್ (710/720) ಗಳಿಸುವುದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ಉತ್ಕೃಷ್ಟ ಸಾಧನೆಗೆೈದ ಕೀರ್ತಿಗೆ ಭಾಜನರಾಗಿದ್ದಾರೆ.

ಈತನ ಅವಳಿ ಸಹೇೂದರ ವೃಷಾನ್ ಶೆಟ್ಟಿ 547ನೇ ಸ್ಥಾನ (685/720) ಪಡೆದಿರುವುದು ಅಪರೂಪದ ಸಾಧನೆ.

ಈ ಅವಳಿ ಸಹೇೂದರರು ತಮ್ಮ ನೀಟ್ ಪರೀಕ್ಷಾ ತರಬೇತಿಯನ್ನು ಉಡುಪಿಯ ಬೇಸ್ ಸಂಸ್ಥೆಯಲ್ಲಿ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿದ್ದಾರೆ.

“ಬೇಸ್” ಸಂಸ್ಥೆಯಲ್ಲಿ ಪಡೆದ ಉತ್ತಮ ಗುಣಮಟ್ಟದ ತರಬೇತಿ, ಸಂಶೋಧನಾ ವಿಧಾನ, ವಿದ್ಯಾರ್ಥಿ ಸ್ನೇಹಿ ಅಧ್ಯಾಪಕರು, ಶ್ರೇಷ್ಠ ಗುಣಮಟ್ಟದ ಪರಿಸರ ಪರಿಕರಗಳು ಲಭ್ಯವಿರುವ ಕಾರಣ ನಮಗೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುವುದು ಸಾಧಕ ವಿದ್ಯಾರ್ಥಿಗಳ ಅನಿಸಿಕೆ.

ಕೇೂವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲಿ ಕೂಡ ವಿದ್ಯಾರ್ಥಿಗಳ ಅಧ್ಯಯನದ ನಿರಂತರವಾಗಿರಲಿ ಮತ್ತು ಅಭ್ಯಾಸಕ್ಕೆ ಯಾವುದೇ ತಡೆ ಬಾರದ ರೀತಿಯಲ್ಲಿ ‘ಆನ್ ಲೆೈನ್’ ಮೂಲಕ ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತಾ ಬಂದಿರುವ ಕಾರಣ ಈ ಕಠಿಣ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗಿದೆ. ಮಾತ್ರವಲ್ಲ, ಬೇಸ್ ನಲ್ಲಿ ಪ್ರಾರಂಭಿಸಿರುವ “ಕ್ಯೂ ಬೇಸ್ “ಅನ್ನುವ ವೇದಿಕೆ ಆತ್ಮವಿಶ್ವಾಸ ಮೂಡಿಸಲು ಸಹಕಾರಿ ಅನ್ನುವುದು ನೀಟ್ ಸಾಧಕರ ಮನದಾಳದ ಮಾತಾಗಿದೆ.

ಉಡುಪಿ ಬೇಸ್ ನಲ್ಲಿ ದೊರೆತ ಏನ್.ಸಿ.ಈ.ಆರ್.ಟಿ ಅಧ್ಯಯನವಾರು ಸಾರಾಂಶ ಬೇೂಧನೆ; ಹಿಂದಿನ ನೀಟ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಚಚೆ೯; ಬೇಸ್ ಸಿದ್ಧ ಪಡಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳು, ಭೌತಶಾಸ್ತ್ರ-ಜೀವ ಶಾಸ್ತ್ರ-ರಸಾಯನ ಶಾಸ್ತ್ರ ವಿಷಯಗಳನ್ನು ಧೆೈಯ೯ದಿಂದ ಎದುರಿಸಲು ಸಹಕಾರಿಯಾಗಿದೆ ಅನ್ನುವುದು ವೃಜೇಶ್ ರ ಅಭಿಮತವಾಗಿದೆ.

ಈ ಶೆೈಕ್ಷಣಿಕ ವಷ೯ದಲ್ಲೂ ಇನ್ನಷ್ಟು ಉತ್ತಮ ಗುಣಮಟ್ಟದ ಪರೀಕ್ಷಾ ತರಬೇತಿ ನೀಡಲು ಉಡುಪಿಯ ಬೇಸ್ ಶಿಕ್ಷಣ ಸಂಸ್ಥೆ ಸಜ್ಜಾಗಿ ನಿಂತಿದೆ ಎಂದು ಉಡುಪಿ ಬೇಸ್ ಕೇಂದ್ರದ ಸಂಯೇೂಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.