ವನ್ಯಜೀವಿ ಸಪ್ತಾಹ ಪ್ರಯುಕ್ತ ವಿವಿಧ ಸ್ಪರ್ಧೆ

ಉಡುಪಿ: ವನ್ಯಜೀವಿ ಸಪ್ತಾಹ ಅಂಗವಾಗಿ ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ ಕಾರ್ಕಳ ಪೆರ್ವಾಜೆಯ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಿವಿಧ ವಲಯ ಮಟ್ಟಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರಿಸರ, ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ವಿವಿಧ ಸ್ಫರ್ಧೆಗಳು ರವಿವಾರ ನಡೆಯಿತು. ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ವನ್ಯಜೀವಿ ಸಪ್ತಾಹ ಕಾರ್ಯಕ್ರಮಗಳ ಮಹತ್ವ, ವನ್ಯಜೀವಿ, ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಮಂಗಳೂರು ವೃತ್ತ ಮುಖ್ಯ ಅರಣ್ಯ […]
ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ಇಂದು ಸಂಜೆ ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭ

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಸೆ.26 ರಿಂದ ಅ.05 ವರೆಗೆ ನಡೆಯುವ ಶರನ್ನವರಾತ್ರಿ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರದ ಉದ್ಘಾಟನಾ ಸಮಾರಂಭವು ಸೆ.26 ಸೋಮವಾರ ಸಂಜೆ: 6.30ಕ್ಕೆ, ಸ್ಥಳ ಗಾಲವ ಮಂಟಪ, ಶ್ರೀ ಮಹಿಷಮರ್ದಿನೀ ದೇವಸ್ಥಾನ, ನೀಲಾವರದಲ್ಲಿ ನಡೆಯಲಿದೆ. ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶ್ರೀ ಮಹಿಷಮರ್ದಿನೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಘುರಾಮ ಮಧ್ಯಸ್ಥ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹೇಂದ್ರ ಕುಮಾರ್, ಕನ್ನಾರು ಶ್ರೀ […]
ಚೈನ್ನೈ ಬಳಿ 12000 ವರ್ಷ ಪುರಾತನ ಕಲ್ಲಿನ ಕಲಾಕೃತಿಗಳನ್ನು ಪತ್ತೆಮಾಡಿದ ಭಾರತೀಯ ಪುರಾತತ್ವ ಇಲಾಖೆ

ಚೆನ್ನೈ: ಚೆನ್ನೈನ ಹೊರವಲಯದಲ್ಲಿರುವ ಓರಗಡಂನಲ್ಲಿ ಕಲ್ಲಿನ ಉಪಕರಣಗಳನ್ನು ತಯಾರಿಸಲಾಗುತ್ತಿದ್ದ ಪ್ರಾಚೀನ ಸ್ಥಳವನ್ನು ಭಾರತೀಯ ಪುರಾತತ್ವ ಇಲಾಖೆಯು ಉತ್ಖನನ ಮಾಡಿದೆ. ಈ ಪ್ರದೇಶದಲ್ಲಿ ದೊರೆತ ಕಲಾಕೃತಿಗಳು 12000 ವರ್ಷ ಪುರಾತನವಾಗಿದ್ದಿರಬೇಕೆಂದು ಪುರಾತತ್ವ ಇಲಾಖೆಯು ಅನುಮಾನ ವ್ಯಕ್ತಪಡಿಸಿವೆ. ಇಲ್ಲಿ ಅಗೆತ ಮಾಡಿದ ಒಂದೇ ಸ್ಥಳದಲ್ಲಿ ಸಾವಿರಾರು ವರ್ಷಗಳಿಂದ ಕನಿಷ್ಠ ನಾಲ್ಕು ಪ್ರತ್ಯೇಕ ನಾಗರಿಕತೆಗಳು ವಾಸವಾಗಿರುವ ಪುರಾವೆ ದೊರೆತಿದೆ. ವಡಕ್ಕುಪಟ್ಟು ಗ್ರಾಮದಲ್ಲಿ ನಡೆಸಿದ ಉತ್ಖನನದಲ್ಲಿ ಮೆಸೊಲಿಥಿಕ್ ಅವಧಿಯ ಕೈಗೊಡಲಿಗಳು, ಉಜ್ಜುಗಗಳು, ಸೀಳುವ ಮತ್ತು ಕತ್ತರಿಸುವ ಉಪಕರಣಗಳು ದೊರೆತಿವೆ. ಇವುಗಳೆಲ್ಲವೂ ಭೂಮಿಯ ಮೇಲ್ಮೈಯಿಂದ […]
ಭೂಮಿಗೆ ಬಂತು ‘ಗುರು’ ಬಲ: 59 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪ ಬರಲಿರುವ ಬೃಹಸ್ಪತಿ

ಖಗೋಳ ಶಾಸ್ತ್ರದ ಕುತೂಹಲಿಗಳಿಗೆ ಸಂಭ್ರಮಿಸುವ ಕ್ಷಣವೊಂದು ಸೋಮವಾರ, ಸೆಪ್ಟೆಂಬರ್ 26ರಂದು ದೊರಕಲಿದೆ. ಸೌರಮಂಡಲದ ಅತ್ಯಂತ ಬಲಶಾಲಿ ಅನಿಲ ದೈತ್ಯ ಗ್ರಹವಾದ ಗುರು ಅಥವಾ ಬ್ರಹಸ್ಪತಿಯು 59 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪ ಬರಲಿದೆ. ಆ ದಿನದಂದು ಭೂಮಿಯಿಂದ ನೋಡಿದಾಗ ಗುರುವು ಸೂರ್ಯನ ನೇರ ಎದುರು ಅಂದರೆ ಸೂರ್ಯನ ವಿರುದ್ದ ದಿಕ್ಕಿನಲ್ಲಿರುತ್ತದೆ. ಈ ಖಗೋಳ ವ್ಯವಸ್ಥೆಯನ್ನು ‘ವಿರೋಧ’ ಎಂದು ಕರೆಯಲಾಗುತ್ತದೆ. ಸೂರ್ಯ ಪಶ್ಚಿಮದಲ್ಲಿ ಮುಳುಗುವಾಗ ಗ್ರಹವು ಪೂರ್ವದಲ್ಲಿ ಉದಯಿಸುವುದನ್ನು ವಿರೋಧ ಎನ್ನುತ್ತಾರೆ. ಈ ಸಮಯದಲ್ಲಿ ಗುರುವು ಅಸಾಮಾನ್ಯ […]
ಬಿಹಾರದ ನಿಗೂಢ ಗುಹೆಯಲ್ಲಿದೆ ಅಪರಿಮಿತ ಸ್ವರ್ಣ ಭಂಡಾರ? 1500 ವರ್ಷಗಳ ಹಿಂದಿನ ರಹಸ್ಯದಿಂದ ಪರದೆ ಸರಿಸಲು ಯಾರಿಂದಲೂ ಸಾಧ್ಯವಾಗಿಲ್ಲ!

ಬಿಹಾರದ ರಾಜ್‌ಗಿರ್‌ನಲ್ಲಿರುವ ವೈಭಾರ್ ಬೆಟ್ಟಗಳಲ್ಲಿ ಮಾನವ ನಿರ್ಮಿತ ಗುಹೆಗಳು ಸಾವಿರಾರು ವರ್ಷಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಸ್ವರ್ಣ ಭಂಡಾರವೆನ್ನುವ ಹೆಸರಿನಿಂದ ಕರೆಸಿಕೊಳ್ಳುವ ಈ ಗುಹೆಯಲ್ಲಿ ಲೆಕ್ಕವಿಲ್ಲದಷ್ಟು ಅತ್ಯಮೂಲ್ಯ ಸ್ವರ್ಣದ ಖಜಾನೆಯನ್ನು ಬಚ್ಚಿಡಲಾಗಿದೆ ಎನ್ನುವುದೇ ಈ ಗುಹೆಯನ್ನು ಸಹಸ್ರಾರು ಜನರನ್ನು ಇತ್ತ ಆಕರ್ಷಿಸುತ್ತಿರುವುದು. ದಂತಕಥೆಗಳ ಪ್ರಕಾರ ಈ ಗುಹೆಯನ್ನು ವೈರದೇವ ಎಂಬ ಜೈನ ಸನ್ಯಾಸಿಯೊಬ್ಬರು ನಿರ್ಮಿಸಿದ್ದು, ತನ್ನ ಧ್ಯಾನಕ್ಕಾಗಿ ಈ ಗುಹೆಯನ್ನು ಬಳಸುತ್ತಿದ್ದರು. ಇದೆ ಸಮಯದಲ್ಲಿ ಬಿಂಬಿಸಾರನೆನ್ನುವವನೊಬ್ಬನು ತನ್ನ ಅಪರಿಮಿತ ಪರಾಕ್ರಮದ ಮೂಲಕ 15 ನೇ ವಯಸ್ಸಿನಲ್ಲಿಯೆ ರಾಜನಾಗುತ್ತಾನೆ ಮತ್ತು […]