ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ: ಬಂಟ ಸಮುದಾಯ ಪ್ರಾಮಾಣಿಕತೆ, ದಕ್ಷತೆ, ವಿಶ್ವಾಸಾರ್ಹತೆ, ಕ್ರಿಯಾಶೀಲತೆಯ ಪ್ರತೀಕ: ಕೇಮಾರು ಶ್ರೀ

ಕಾರ್ಕಳ: ಪ್ರಮಾಣಿಕತೆ, ದಕ್ಷತೆ, ವಿಶ್ವಾರ್ಹತೆ, ಕ್ರಿಯಾಶೀಲತೆ ಹೊಂದಿದ್ದ ಬಂಟ ಸಮುದಾಯವು ನಾಡಿನ ಸಂಸ್ಕೃತಿ ಇದ್ದಂತೆ. ಸಂಸ್ಕೃತಿ ಯಿಂದಾಗಿ ಸಮಾಜದಲ್ಲಿ ಉತ್ಸವಗಳು ಮೂಡಿ ಬರುತ್ತವೆ ಹಾಗೂ ಸಮಾಜದಲ್ಲಿ ಎಲ್ಲರು ಒಗ್ಗಟ್ಟಾಗಿಸಲು ಸಾಧ್ಯವೆಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿ ನುಡಿದರು. ಕುಕ್ಕುಂದೂರು ಜೋಡುರಸ್ತೆಯ ಪ್ರೈಮ್ ಮಾಲ್‌ನ ಒಂದನೇಯ ಮಹಡಿಯಲ್ಲಿ ಪ್ರಾರಂಭಿಸಲಾದ ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ದೀಪ ಪ್ರಜ್ವಲಿಸಿದ ಬಳಿಕ ಉಷಾ ಸೆಲೆಬ್ರೇಶನ್ ಹಾಲ್‌ನಲ್ಲಿ ಜರುಗಿದ್ದ ಸಮಾರಂಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಉದಯ ಶೆಟ್ಟಿ […]

ಬಿಎಸ್ಸಿ ಆದವರಿಗೆ ಇಲ್ಲಿದೆ ಭರ್ಜರಿ ಜಾಬ್, ರೈಲ್ವೆ ಇಲಾಖೆಯಲ್ಲಿದೆ ಒಂದೊಳ್ಳೆ ಅವಕಾಶ !

ಪೂರ್ವ ಕರಾವಳಿ ರೈಲ್ವೆ(East Coast Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಫಾರ್ಮಾಸಿಸ್ಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳು ಖಾಲಿ ಇದ್ದು, 12ನೇ ತರಗತಿ, ಬಿ.ಫಾರ್ಮಾ, ಡಿ.ಫಾರ್ಮಾ, ಬಿಎಸ್ಸಿ ನರ್ಸಿಂಗ್, GNM ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು eastcoastrail.indianrailways.gov.in ಗೆ ಭೇಟಿ ನೀಡಿ. ಹುದ್ದೆಯ […]

ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್‌ಗೆ ಕೊರೋನಾ ಸೋಂಕು

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದ ಬರೆದುಕೊಂಡಿರುವ ಗಂಭೀರ್ ಅವರು, ತಾವು ಕೊರೋನಾ ಸೋಂಕಿತನಾಗಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಗೌತಮ್ ಗಂಭೀರ್ ಅವರನ್ನು ಹೊಸ ಐಪಿಎಲ್ ತಂಡವಾದ ಲಕ್ನೋದ ಮೆಂಟರ್ ಆಗಿ ಆಯ್ಕೆ ಮಾಡಲಾಗಿದೆ. ಈ ವೇಳೆ, ಕೋವಿಡ್ ಸೋಂಕಿಗೆ ತುತ್ತಾಗಿರುವ ಮಾಜಿ ಆಟಗಾರ ಗಂಭೀರ್, ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಲ್ಕ ವಿನಾಯಿತಿ ಪಾವತಿ: ಆಧಾರ್ ಸೀಡ್ ಕಡ್ಡಾಯ

ಉಡುಪಿ: ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿ ವೇತನ/ ಶುಲ್ಕ ವಿನಾಯಿತಿ ಸೌಲಭ್ಯಕ್ಕೆ 2020-21 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ಹಲವಾರು ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮೊತ್ತವು ಮಂಜೂರಾಗಿರುತ್ತದೆ. ಕೆಲವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದಿರುವ ಕಾರಣ ಹಣ ಸಂದಾಯ ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಸಂಬಂಧಿಸಿದ ವಿದ್ಯಾರ್ಥಿಗಳು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಐ.ಪಿ.ಪಿ.ಬಿ ಮೂಲಕ ಅಕೌಂಟ್ ತೆರೆದು ಆಧಾರ್ ಸೀಡ್ (ಎನ್.ಪಿ.ಸಿ.ಐ ಮ್ಯಾಪಿಂಗ್) ಅನ್ನು ಜನವರಿ 29 ರ ಒಳಗೆ ಮಾಡಿಸಿ, ತಾಲೂಕು […]

ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಮೈಸೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಕೋರ್ಸ್ಗಾಗಿ, ಪಿ.ಜಿ.ಸಿ.ಇ.ಟಿ ಬರೆಯದೆ ಇರುವ ಬಿ.ಇ, ಮೆಕ್ಯಾನಿಕಲ್, ಇಂಡಸ್ಟ್ರಿಯಲ್ ಪ್ರೊಡಕ್ಷನ್, ಆಟೋ ಮೊಬೈಲ್, ಆಟೋಮೇಷನ್, ಮೇರಿನ್ ಇಂಜಿನೀಯರಿಂಗ್ ಮತ್ತು ರೋಬೋಟಿಕ್ಸ್ ಇಂಜಿನೀಯರಿಂಗ್ ಮುಂತಾದವುಗಳಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್ ಟೂಲ್ ಇಂಜಿನೀಯರಿಂಗ್ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. […]