ಬಿಎಸ್ಸಿ ಆದವರಿಗೆ ಇಲ್ಲಿದೆ ಭರ್ಜರಿ ಜಾಬ್, ರೈಲ್ವೆ ಇಲಾಖೆಯಲ್ಲಿದೆ ಒಂದೊಳ್ಳೆ ಅವಕಾಶ !

ಪೂರ್ವ ಕರಾವಳಿ ರೈಲ್ವೆ(East Coast Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಫಾರ್ಮಾಸಿಸ್ಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳು ಖಾಲಿ ಇದ್ದು, 12ನೇ ತರಗತಿ, ಬಿ.ಫಾರ್ಮಾ, ಡಿ.ಫಾರ್ಮಾ, ಬಿಎಸ್ಸಿ ನರ್ಸಿಂಗ್, GNM ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು eastcoastrail.indianrailways.gov.in ಗೆ ಭೇಟಿ ನೀಡಿ.

ಹುದ್ದೆಯ ಮಾಹಿತಿ:
ನರ್ಸಿಂಗ್ ಸೂಪರಿಂಟೆಂಡೆಂಟ್- 07
ಫಾರ್ಮಾಸಿಸ್ಟ್- 01
ಒಟ್ಟು 8 ಹುದ್ದೆಗಳು

ವಿದ್ಯಾರ್ಹತೆ:
ಪೂರ್ವ ಕರಾವಳಿ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ, ಫಾರ್ಮಾಸಿಸ್ಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ 12ನೇ ತರಗತಿ, ಬಿ.ಫಾರ್ಮಾ, ಡಿ.ಫಾರ್ಮಾ, ಬಿಎಸ್ಸಿ ನರ್ಸಿಂಗ್, GNM ಪೂರ್ಣಗೊಳಿಸಿರಬೇಕು.

ವಯೋಮಿತಿ:
ನರ್ಸಿಂಗ್ ಸೂಪರಿಂಟೆಂಡೆಂಟ್- 20-40 ವರ್ಷ
ಫಾರ್ಮಾಸಿಸ್ಟ್- 20-35 ವರ್ಷ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/01/2022