ಮಣಿಪಾಲ: ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್‌ ಗೆ ಪೊಲೀಸರ ದಾಳಿ; ಓರ್ವನ‌ ಬಂಧನ, ಮಹಿಳೆಯ ರಕ್ಷಣೆ

ಉಡುಪಿ: ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಣಿಪಾಲ ದಶರಥನಗರದ ಡಿ.ಕ್ಲಾಸಿಕೋ ಲಾಡ್ಜ್‌ ಮೇಲೆ ದಾಳಿ ನಡೆಸಿದ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚುಮಾನ್‌ರಾಮ್‌ ಎಂದು ಗುರುತಿಸಲಾಗಿದೆ. ಡಿ.ಕ್ಲಾಸಿಕೋ ಲಾಡ್ಜ್‌ ನ ಒಂದನೆ ಮಹಡಿಯ ರೂಮ್‌ ನಂಬ್ರ 104ರಲ್ಲಿ ಬಲವಂತವಾಗಿ ಮಹಿಳೆಯರನ್ನು ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು‌ ದಾಳಿ ನಡೆಸಿದ್ದಾರೆ. ಈ ವೇಳೆ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಸಿವಿಲ್ ಕ್ಯಾಡ್ ಇಂಜಿನಿಯರ್, ಸಿವಿಲ್ ಕ್ಯಾಡ್ ಬೋಧನಾ ವಿಭಾಗದಲ್ಲಿ ಹುದ್ದೆಗಳು ಖಾಲಿ ಇದ್ದು ನೇಮಕಾತಿ ನಡೆಯಲಿದೆ. Sofware Skills : Autocad, Revit, 3DSmax. ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಮೇಲ್ ಐಡಿಗೆ ಕಳುಹಿಸಿ. [email protected] 📞8147183603

ನೀವು ಸ್ವಂತ ಬಿಸಿನೆಸ್ ಮಾಡಬೇಕೇ? ಇಲ್ಲಿದೆ ನಿಮಗೊಂದು ಸುವರ್ಣಾವಕಾಶ

ಉಡುಪಿ:ನೀವು ಸ್ವಂತ ಬಿಸಿನೆಸ್ ಮಾಡಬೇಕೇಂದಿದ್ದರೆ ನಿಮಗೆ ಇಲ್ಲಿದೆ ಸುವರ್ಣ ಅವಕಾಶ. ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸಬಹುದು. Financial Advisor ಹುದ್ದೆ ಖಾಲಿ ಇದ್ದು ಪಾರ್ಟ್ ಟೈಮ್/ಫುಲ್ ಟೈಮ್ ಕೆಲಸ ಮಾಡಿ, ಅಧಿಕ ಆದಾಯ ಗಳಿಸಬಹುದು. ಉತ್ತಮ ಸಂವಹನ ಕೌಶಲ್ಯ ಹೊಂದಿದ್ದು ,30 ವರ್ಷಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಬಳಸಿ. https://docs.google.com/forms/d/e/1FAIpQLSf7tJvT2kMs3-gRjXLZFbmTKXMQar1eLnDKHCbmTip3QOPz5g/viewform?usp=sharing&ouid=102156342738200244583 ಸಂಪರ್ಕಿಸಿ:8105732895

ಮುಂಬೈ ಹಿರಿಯ ಹೋಟೆಲ್ ಉದ್ಯಮಿ ಮಹಾಬಲ ಶೆಟ್ಟಿ ಕಟಪಾಡಿ ನಿಧನ

ಉಡುಪಿ:ಕುತ್ಯಾರು ಮೂಲದ ಬೆಟ್ಟು ಗುತ್ತು ಕುಟುಂಬದ ಹಿರಿಯ ವ್ಯಕ್ತಿ ಮುಂಬೈ ಹೋಟೆಲ್ ಪ್ರಕಾಶ್ ಇದರ ಆಡಳಿತ ನಿರ್ದೇಶಕರು ಕಾಪು ಕಲ್ಯ ನಿವಾಸಿ ಮಹಾಬಲ ಶೆಟ್ಟಿ 95 ಇವರು ತಾರೀಕು 4-6-25ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಕುತ್ಯಾರು ಮೂಲದ ಬೆಟ್ಟು ಗುತ್ತು ವೆಲ್ ಫೇರ್ ಟ್ರಸ್ಟ್ ಗೌರವ ಅಧ್ಯಕ್ಷರಾಗಿದ್ದು ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಪ್ರಾಯದಲ್ಲಿ ಕೂಡ ಬಂದು ತನ್ನ ಧಾರ್ಮಿಕ ಕೆಲಸಗಳಲ್ಲಿ ಅದಲ್ಲದೆ ಕುಟುಂಬದ ದೈವದೇವರ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ […]

ಕುಂದಾಪುರ: ಎಂಡಿಎಂಎ ಮಾದಕ ವಸ್ತು ಮಾರಾಟ; ಇಬ್ಬರು ಆರೋಪಿಗಳ ಬಂಧನ

ಉಡುಪಿ: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕಟಪಾಡಿ ಸಮೀಪದ ಸುಭಾಷ್ ನಗರ ನಿವಾಸಿ ಮುದಾಸ್ಸಿರ್ (23) ಹಾಗೂ ಉಡುಪಿ ತಾಲೂಕಿನ ಉದ್ಯಾವರ ನಿವಾಸಿ ಅಡೆನ್ ಲೋಬೋ(18) ಬಂಧಿತ ಆರೋಪಿಗಳು. ಈ ಇಬ್ಬರು ಜೂನ್ 4ರಂದು ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದು, ಈ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 2,49,440 ಲಕ್ಷ […]