ಮುಂಬೈ ಹಿರಿಯ ಹೋಟೆಲ್ ಉದ್ಯಮಿ ಮಹಾಬಲ ಶೆಟ್ಟಿ ಕಟಪಾಡಿ ನಿಧನ


ಉಡುಪಿ:ಕುತ್ಯಾರು ಮೂಲದ ಬೆಟ್ಟು ಗುತ್ತು ಕುಟುಂಬದ ಹಿರಿಯ ವ್ಯಕ್ತಿ ಮುಂಬೈ ಹೋಟೆಲ್ ಪ್ರಕಾಶ್ ಇದರ ಆಡಳಿತ ನಿರ್ದೇಶಕರು ಕಾಪು ಕಲ್ಯ ನಿವಾಸಿ ಮಹಾಬಲ ಶೆಟ್ಟಿ 95 ಇವರು ತಾರೀಕು 4-6-25ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.

ಕುತ್ಯಾರು ಮೂಲದ ಬೆಟ್ಟು ಗುತ್ತು ವೆಲ್ ಫೇರ್ ಟ್ರಸ್ಟ್ ಗೌರವ ಅಧ್ಯಕ್ಷರಾಗಿದ್ದು ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಪ್ರಾಯದಲ್ಲಿ ಕೂಡ ಬಂದು ತನ್ನ ಧಾರ್ಮಿಕ ಕೆಲಸಗಳಲ್ಲಿ ಅದಲ್ಲದೆ ಕುಟುಂಬದ ದೈವದೇವರ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುತ್ತಾರೆ. ಮೂಲದ ಬೆಟ್ಟು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಗೌರವ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿರುತ್ತಾರೆ.

ಮೃತರು ಪತ್ನಿ ಇಬ್ಬರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿರುತ್ತಾರೆ.

ಇವರ ನಿಧನಕ್ಕೆ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ಬಂಟರ ಸಂಘ ಅಧ್ಯಕ್ಷರಾದ ವಾಸು ದೇವ ಶೆಟ್ಟಿ ಕಾಪು, ಕಾಪು ಬಂಟರ ಸಂಘ ಉಪಾಧ್ಯಕ್ಷ ರಾದ ರವಿರಾಜ್ ಶೆಟ್ಟಿ ಪಂಜಿತ್ತೂರು ಗುತ್ತು, ಮೂಲದ ಬೆಟ್ಟು ಗುತ್ತು ಮನೆತನದ ಯಜಮಾನ ಜಯರಾಮ್ ಶೆಟ್ಟಿ ರಾಯ್ ಭಾಗ್ ಜನ ಸಂಪರ್ಕ ಜನ ಸೇವಾ ವೇದಿಕೆ ಅಧ್ಯಕ್ಷ ದಿವಾಕರ್ ಬಿ ಶೆಟ್ಟಿ, ಎನ್ ಸಿ ಪಿ ಇದರ ನಾಯಕರಾದ ಕಳತ್ತೂರು ವಿಶ್ವನಾಥ ಜೆ ಶೆಟ್ಟಿ, ಮೂಲದ ಬೆಟ್ಟು ಮನೆತನದ ಧಾರ್ಮಿಕ ವ್ಯವಸ್ಥಾಪಕ ಪ್ರದೀಪ್ ಶೆಟ್ಟಿ ಕುತ್ಯಾರು ಸಂತಾಪ ವ್ಯಕ್ತಪಡಿಸಿದ್ದಾರೆ.