ಉಡುಪಿ: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕಟಪಾಡಿ ಸಮೀಪದ ಸುಭಾಷ್ ನಗರ ನಿವಾಸಿ ಮುದಾಸ್ಸಿರ್ (23) ಹಾಗೂ ಉಡುಪಿ ತಾಲೂಕಿನ ಉದ್ಯಾವರ ನಿವಾಸಿ ಅಡೆನ್ ಲೋಬೋ(18) ಬಂಧಿತ ಆರೋಪಿಗಳು. ಈ ಇಬ್ಬರು ಜೂನ್ 4ರಂದು ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದು, ಈ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಅಂದಾಜು 2,49,440 ಲಕ್ಷ ಮೌಲ್ಯದ 124.72 ಗ್ರಾಂ ತೂಕದ MDMA ಮಾದಕ ವಸ್ತು, P Oracle ಪ್ಲ್ಯಾಸ್ಟಿಕ್ ಬಾಕ್ಸ್-1, ಇನ್ಸುಲಿನ್ ಸಿರಿಂಜ್-9, ENER-MECH ಕಪ್ಪು ಬ್ಯಾಗ್-1, Fresh ಪ್ಲ್ಯಾಸ್ಟಿಕ್ ಬಾಕ್ಸ್-1, ವೇಯಿಂಗ್ ಮೇಶಿನ್-2, 20 ಸಣ್ಣ ಸಣ್ಣ ಸ್ಟೀಲ್ ಡಬ್ಬ ಮತ್ತು 2 ಸ್ಟೀಲ್ ಚಮಚ ಇರುವ ಪ್ಲಾಸ್ಟೀಕ್ ಬಾಕ್ಸ್-1, 36-ಪ್ಲಾಸ್ಟೀಕ್ ಜಿಪ್ ಲಾಕ್ ಕವರ್, ನಗದು 4540 ರೂ, ಡ್ರಾಗನ್ ಚೂರಿ-1, OPPO ಮೊಬೈಲ್-1 ಹಾಗೂ Samsung ಮೊಬೈಲ್-2 ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ












