ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ಉಡುಪಿ: ಖ್ಯಾತ ವಿದ್ವಾಂಸ, ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ತಮ್ಮ ಮಾತಪಿತರ ಸ್ಮರಣಾರ್ಥ ಯಕ್ಷಗಾನ ಕಲಾರಂಗದ ಮೂಲಕ ಕೊಡ ಮಾಡುವ ಪ್ರತಿಷ್ಠಿತ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು ಶುಕ್ರವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಖ್ಯಾತ ವಿದ್ವಾಂಸ, ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ […]

ಹಿರಿಯಡಕ ಪುತ್ತಿಗೆ ಮೂಲ ಮಠದಲ್ಲಿ ವಾರ್ಷಿಕ ಮಹಾಭಿಷೇಕ

ಉಡುಪಿ: ಹಿರಿಯಡಕದ ಸ್ವರ್ಣ ನದಿಯ ತೀರದಲ್ಲಿರುವ ಶ್ರೀ ಪುತ್ತಿಗೆ ಮೂಲ ಮಠದಲ್ಲಿ ವಾರ್ಷಿಕ ಮಹಾಭಿಷೇಕವು ಶುಕ್ರವಾರ ನಡೆಯಿತು.ಇದರ ಅಂಗವಾಗಿ ಶ್ರೀ ರಾಮ, ನರಸಿಂಹ ದೇವರ ಸಹಿತ ಮಠದ ಸಂಸ್ಥಾನ ದೇವರಿಗೆ ವಿವಿಧ ಮಂಗಳ ದ್ರವ್ಯವನ್ನು ಒಳಗೊಂಡಂತೆ ಪಂಚಾಮೃತ ಅಭಿಷೇಕ ಹಾಗೂ ಸೀಯಾಳ ಅಭಿಷೇಕವನ್ನು ಮಾಡಲಾಯಿತು.ವಿಶೇಷ ಅಲಂಕಾರವನ್ನು ಮಾಡಿ ಮಹಾ ಪೂಜೆಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಮನ್ಯುಸೂಕ್ತ ಹೋಮದ ಮಂಡಲ ಪೂಜೆ ಮಾಡಿ, ವಿವಿಧ ಮಂಗಳ ದ್ರವ್ಯಗಳನ್ನು ಅರ್ಪಿಸಿ ಹೋಮದ ಮಹಾಪೂಜೆ ಹಾಗೂ ಪೂರ್ಣಾಹುತಿಯನ್ನು ಮಾಡಲಾಯಿತು. ಈ ಎಲ್ಲಾ […]

ವಕ್ವಾಡಿ 32 ನೇ ಸಾರ್ವಜನಿಕ ಗಣೇಶೋತ್ಸವದ ಅಧ್ಯಕ್ಷರಾಗಿ ಕಲಾವಿದ ಗಿರೀಶ್ ಆಚಾರ್, ಕಾರ್ಯದರ್ಶಿಯಾಗಿ ಕೃಷ್ಣ ಶೆಟ್ಟಿಗಾರ್ ಆಯ್ಕೆ

ಉಡುಪಿ: ಕುಂದಾಪುರ -ವಕ್ವಾಡಿ ಸಾರ್ವಜನಿಕ ಗಣೇಶೋತ್ಸವದ 32 ನೇ ಸಾಲಿನ ಅಧ್ಯಕ್ಷರಾಗಿ ಕಲಾವಿದ ಗಿರೀಶ್ ಆಚಾರ್ ವಕ್ವಾಡಿ ಹಾಗೂ ಕಾರ್ಯದರ್ಶಿಯಾಗಿ ವಕ್ವಾಡಿ ಫ್ರೆಂಡ್ಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಬ್ರಹ್ಮಕಲಶೋತ್ಸವ ಸಂಪನ್ನ ಗೊಂಡ ವಕ್ವಾಡಿ ಮಹಾಲಿಂಗೇಶ್ವರ ಸನ್ನಿದಾನದಲ್ಲಿ ಕಳೆದ 32 ವರ್ಷ ಗಳಿಂದ ಸಾಗಿ ಬರುತ್ತಿರುವ ಗಣೇಶೋತ್ಸವವು ಅನೇಕ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.ಇತ್ತೀಚಿಗೆ ಗಣೇಶೋತ್ಸವ ಸಮಿತಿ ಸಭೆಯಲ್ಲಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಬಾರಿ ಅಧ್ಯಕ್ಷರಾಗಿ […]

ಉಡುಪಿ: ನಿದೀಶ್ ಕುಮಾರ್ ಮಡಿಲಿಗೆ ಅಂತಾರಾಷ್ಟ್ರೀಯ ಗೋಲ್ಡ್ ಮೆಡಲ್

ಉಡುಪಿ: ಉಡುಪಿಯ ಯುವ ಛಾಯಾಚಿತ್ರ ಕಲಾವಿದ, ಹಲವು ಪ್ರಶಸ್ತಿಗಳ ಸರದಾರ ನಿದೀಶ್ ಕುಮಾರ್ ರವರಿಗೆಅಂತಾರಾಷ್ಟ್ರೀಯಮಟ್ಟದ ಗೋಲ್ಡ್ ಮೆಡಲ್ ಪ್ರಾಪ್ತವಾಗಿದೆ. ಬಾಂಗ್ಲಾ ದೇಶದ ಚಿತ್ರಚಿಂತಾ ಫೋಟೋಗ್ರಾಫರ್ಸ್ ಸರ್ಕಲ್ ಆಯೋಜಿಸಿದ್ದ ಮೂಡ್ಆಫ್ ಮಾನ್ ಸೂನ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ನಿದೀಶ್ ಪಾಲಾಗಿದೆ.

ಪತಿಯಿಂದಲೇ ಮಹಿಳಾ ಪುರಸಭೆ ಕೌನ್ಸಿಲರ್‌’ನ ಹತ್ಯೆ!

ಚೆನ್ನೈ: ಪುರಸಭೆಯ ಮಹಿಳಾ ಕೌನ್ಸಿಲರ್‌ ಒಬ್ಬರನ್ನು ಅವರ ಪತಿಯೇ ಕೊಚ್ಚಿ ಕೊಂದಿರುವ ಘಟನೆ ಚೆನ್ನೈನ ಪಶ್ಚಿಮ ಉಪನಗರದಲ್ಲಿರುವ ತಿರುನಿಂದ್ರವೂರ್’ನಲ್ಲಿ ನಡೆದಿದೆ. ಮೃತ‌ ಕೌನ್ಸಿಲರ್ ಎಸ್ ಗೋಮತಿ (38). ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ತಿರುನಿನ್ರವೂರಿನ ಪುರಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ವಯಕ್ತಿಕ ಕಾರಣಗಳಿಂದಾಗಿ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಗುರುವಾರ ರಾತ್ರಿ ತಿರುನಿನ್ರವೂರಿನ ಪೆರಿಯಾರ್ ಕಾಲೋನಿಯಲ್ಲಿರುವ ,ಅವರ ಮನೆಯ ಬಳಿ ಆಕೆಯ ಪತಿ ಸ್ಟೀಫನ್ ರಾಜ್ ಹಲ್ಲೆ ನಡೆಸಿದ್ದ, ತೀವ್ರವಾಗಿ ಗಾಯಗೊಂಡಿದ್ದ ಸಾವನ್ನಪ್ಪಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ […]