ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಯಿತು. ಕ್ರೀಡಾಕೂಟವನ್ನು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮತ್ತು ಪವರ್ ಲಿಫ್ಟರ್ ಶ್ರೀ ವಿನೋದ್ ಕುಮಾರ್ ರವರು ಉದ್ಘಾಟಿಸಿದರು. ತದನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ರೀಡೆಯ ಮಹತ್ವ ವನ್ನು ಸವಿಸ್ತಾರವಾಗಿ ವಿವರಿಸಿದರು, ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಮತ್ತು ಇಂದಿನ ಯುವಪೀಳಿಗೆಯು ಕ್ರೀಡೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ, ವಿದ್ಯಾರ್ಥಿಗಳಾದ ತಾವು ಕ್ರೀಡಾಕ್ಷೇತ್ರದಲ್ಲಿ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು. ಕಾರ್ಯಕ್ರಮದ […]

ಮಂಗಳೂರು: ಪಿ.ಎ ಕಾಲೇಜಿನಲ್ಲಿ ICEST 24 ಉದ್ಘಾಟನೆ

ಮಂಗಳೂರು: ಇಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ-2024 (ಐಸಿಇಎಸ್ಟಿ-24) ಕುರಿತ ಅಂತರರಾಷ್ಟ್ರೀಯ ಮಟ್ಟದ ಸಮಾವೇಶದ ಉದ್ಘಾಟನೆಯು ಏಪ್ರಿಲ್ 23 ರಂದು ಬೆಳಿಗ್ಗೆ 9:30 ಕ್ಕೆ ಮಂಗಳೂರಿನ ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗನಲ್ಲಿ ನಡೆಯಿತು. ICEST-24 ಒಟ್ಟು ಆರು ಸಮ್ಮೇಳನಗಳನ್ನು ಒಳಗೊಂಡಿದ್ದು ವಿಭಿನ್ನ ಎಂಜಿನಿಯರಿಂಗ್ ವಿಭಾಗಗಳನ್ನು ಪ್ರತಿನಿಧಿಸುತ್ತದೆ. ಮುಖ್ಯ ಅತಿಥಿಯಾಗಿ ಆಗಮಿಸಿದ, ಮಂಗಳೂರಿನ ಇನ್ಫೋಸಿಸ್ನ ಹಿರಿಯ ಯೋಜನಾ ವ್ಯವಸ್ಥಾಪಕ ಶ್ರೀ ಸೋಹನ್ ಎಂ. ಅವರು ಮಾತನಾಡಿ ತಾಂತ್ರಿಕ ಶಿಕ್ಷಣದ ಪ್ರಗತಿಯಲ್ಲಿ ಬಹುಶಿಸ್ತೀಯ ವಿಧಾನಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಮುಖ್ಯ ಭಾಷಣ ಮಾಡಿದ […]

ಕಮಲಶಿಲೆ: ಇಂದು ಶಿಲಾಮಯ ರಾಜಗೋಪುರ ಲೋಕಾರ್ಪಣೆ.

ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ ಶಿಲಾಮಯ ರಾಜಗೋಪುರ ಲೋಕಾರ್ಪನ ಮತ್ತು ಬ್ರಹ್ಮ ಕುಂಭಾಭಿಷೇಕವು ಎ.24ರ ಬುಧವಾರ ವಿವಿಧ ವಿಧಿ ವಿಧಾನ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.ರಾಜಗೋಪುರವನ್ನು ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಂದ ಲೋಕಾರ್ಪಣೆ ಗೊಳ್ಳಲಿದ್ದು, ಅದಕ್ಕಿಂತ ಮೊದಲು ಶ್ರೀ ಬ್ರಾಹೀದುರ್ಗಾಪರಮೇಶ್ವರೀ ಅಮ್ಮನವರಿಗೆ ಬ್ರಹ್ಮಕುಂಭಾಭಿಷೇಕ ನೆರವೇರಿಸಲಿದ್ದಾರೆ.ಬೆಳಗ್ಗೆ 9ಕ್ಕೆ ಜಗದ್ಗುರುಗಳ ಆಗಮನ, ಪೂರ್ಣಕುಂಭ ಸ್ವಾಗತ. 9.30ಕ್ಕೆ ಅಮ್ಮನವರಿಗೆ ಬ್ರಹ್ಮಕುಂಭಾಭಿಷೇಕ. 10ಕ್ಕೆ ರಾಜಗೋಪುರ […]

ಉಡುಪಿ: ನೀತಿ ಸಂಹಿತೆ ಉಲ್ಲಂಘನೆ – ಮದ್ಯ ವಶ

ಉಡುಪಿ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಅಬಕಾರಿ ಇಲಾಖೆ ವತಿಯಿಂದ 20,300 ರೂ. ಮೌಲ್ಯದ 22.250 ಲೀ. ಮದ್ಯ ವಶಪಡಿಸಿಕೊಳ್ಳಲಾಗಿರುತ್ತದೆ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬAಧಿಸಿದAತೆ ಕಾಂಗ್ರೇಸ್ ಅಭ್ಯರ್ಥಿಯಾದ ಕೆ.ಜಯಪ್ರಕಾಶ್ ಹೆಗ್ಡೆರವರು ಕರಾವಳಿಗರ ಬಯಲು ಸೀಮೆ-ಮಲೆನಾಡ ಗಟ್ಟಿ ಧ್ವನಿ ಎಂಬ ಶೀರ್ಷಿಕೆಯ ಕರಪತ್ರಗಳನ್ನು ಮುದ್ರಿಸಿ, ಸಾರ್ವಜನಿಕವಾಗಿ ಉಡುಪಿಯಲ್ಲಿ ಹಂಚಿಕೆ ಮಾಡಲಾಗಿದ್ದು, ಕರಪತ್ರದಲ್ಲಿ ಪ್ರಕಾಶಕರ ಹೆಸರು, ಮುದ್ರಕರ ಹೆಸರು, ಮುದ್ರಣದ ವಿಳಾಸ ಹಾಗೂ ಮುದ್ರಿತ ಪ್ರತಿಗಳ […]

ಅತಿಥಿ ಉಪನ್ಯಾಸಕರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ನಗರದ ಉಪ್ಪೂರು ಕೊಳಲ್‌ಗಿರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಮೆಕೆಟ್ರಾನಿಕ್ಸ್ ತರಗತಿಗಳನ್ನು ನಡೆಸಲು ಉಪನ್ಯಾಸಕರ ಅವಶ್ಯಕತೆ ಇದ್ದು, ಎಂ.ಟೆಕ್ ಹಾಗೂ ಬಿ.ಇ ವಿದ್ಯಾರ್ಹತೆಹೊಂದಿರುವ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಸರ್ಕಾರಿ ಪ್ರೌಢಶಾಲೆ ಹತ್ತಿರ, ಕೊಳಲಗಿರಿ, ಉಪ್ಪೂರು ಉಡುಪಿ, ದೂರವಾಣಿ ಸಂಖ್ಯೆ: 0820-2950101, 9880510585, ಇ-ಮೇಲ್: gttcudupi@gmail.com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ […]