ಪವರ್ ಪಾಯಿಂಟ್ ಸಾಫ್ಟ್ವೇರ್ ತಯಾರಕ ಡೆನ್ನಿಸ್ ಆಸ್ಟಿನ್ ವಿಧಿವಶ

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಸುಮಾರು 36 ವರ್ಷಗಳ ಹಿಂದೆ ಮತ್ತೊಬ್ಬ ಸಾಫ್ಟವೇರ್ ಎಂಜಿನಿಯರ್ ಜೊತೆಗೂಡಿ ಪವರ್ ಪಾಯಿಂಟ್ ಸಾಫ್ಟ್ ವೇರ್ ಅನ್ನು ರಚಿಸಿದ್ದ ಡೆನ್ನಿಸ್ ಆಸ್ಟಿನ್ ಅವರು ಅಮೆರಿಕದಲ್ಲಿ ನಿಧನರಾಗಿದ್ದಾರೆ.ಎಂಎಸ್ ಪವರ್ ಪಾಯಿಂಟ್ ಸಾಫ್ಟ್ವೇರ್ ತಯಾರಿಸಿದ ಡೆನ್ನಿಸ್ ಆಸ್ಟಿನ್ 76ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ನಿಧನರಾಗಿದ್ದಾರೆ. 76 ವರ್ಷದ ಆಸ್ಟಿನ್ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 1993 ರ ಹೊತ್ತಿಗೆ ಪವರ್ ಪಾಯಿಂಟ್ $ 100 ಮಿಲಿಯನ್ ಡಾಲರ್ಗಿಂತ ಹೆಚ್ಚು ಆದಾಯ […]
3 ಮಿಲಿಯನ್ ಡಾಲರ್ ಹೂಡಿಕೆ ಪ್ರಕೃತಿ ಆಧರಿತ ಯೋಜನೆಗಳಿಗೆ ಮಾಡಲಿದೆ ಅಮೆಜಾನ್

ನವದೆಹಲಿ: ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಲ್ಲಿ 3 ಮಿಲಿಯನ್ ಡಾಲರ್ ಆರಂಭಿಕ ಹೂಡಿಕೆ ಮಾಡುವುದಾಗಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಸೋಮವಾರ ತಿಳಿಸಿದೆ. ಏಷ್ಯಾ ಪೆಸಿಫಿಕ್ (ಎಪಿಎಸಿ) ನಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗೆ ಕಂಪನಿಯು ನಿಗದಿಪಡಿಸಿದ 15 ಮಿಲಿಯನ್ ಡಾಲರ್ ನಿಧಿಯ ಭಾಗವಾಗಿ ಈ ಹೂಡಿಕೆ ಮಾಡಲಾಗುವುದು. ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗಾಗಿ ನಿಧಿಯ ಎಪಿಎಸಿ ಪಾಲಿನ ಮೊದಲ 3 ಮಿಲಿಯನ್ ಡಾಲರ್ ಬಳಸಲಾಗುವುದು ಎಂದು ಅಮೆಜಾನ್ ಹೇಳಿದೆ. ಪರಿಸರ ಸಂರಕ್ಷಣೆಯ ಯೋಜನೆಗಳಿಗಾಗಿ ಭಾರತದಲ್ಲಿ ಆರಂಭಿಕವಾಗಿ 3 ಮಿಲಿಯನ್ […]
ವಿಂಡೋಸ್ನಿಂದ ಮೈಕ್ರೊಸಾಫ್ಟ್ ‘ವರ್ಡ್ಪ್ಯಾಡ್’ಅನ್ನು ತೆಗೆದು ಹಾಕಲಿದೆ

ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ಇನ್ನು ಮುಂದೆ ವರ್ಡ್ಪ್ಯಾಡ್ಗೆ ಯಾವುದೇ ಅಪ್ಡೇಟ್ ನೀಡುವುದಿಲ್ಲ ಎಂದು ಘೋಷಿಸಿದೆ. ಪರ್ಯಾಯವಾಗಿ, ಮೈಕ್ರೋಸಾಫ್ಟ್ ತನ್ನ ಪಾವತಿಸಿದ ವರ್ಡ್ ಪ್ರೊಸೆಸರ್ ಎಂಎಸ್ ವರ್ಡ್ ಅನ್ನು ಬಳಸುವಂತೆ ಹೇಳಿದೆ. ವರ್ಡ್ ಪ್ಯಾಡ್ಗಿಂತ ತುಂಬಾ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ಬಳಸಲು ಸುಲಭವಾದ ಎಂಎಸ್ ವರ್ಡ್ 1995 ರಿಂದ ವಿಂಡೋಸ್ನೊಂದಿಗೆ ಲಭ್ಯವಾಗುತ್ತಿದೆ. ಅಲ್ಲದೆ ಸುಮಾರು 30 ವರ್ಷಗಳ ನಂತರ ವಿಂಡೋಸ್ನ ಭವಿಷ್ಯದ ಆವೃತ್ತಿಗಳಿಂದ ವರ್ಡ್ ಪ್ರೊಸೆಸರ್ ಅನ್ನು ತೆಗೆದುಹಾಕುವುದಾಗಿ ತಿಳಿಸಿದೆ.ಭವಿಷ್ಯದ ವಿಂಡೋಸ್ ಅಪ್ಡೇಟ್ಗಳಲ್ಲಿ ವರ್ಡ್ಪ್ಯಾಡ್ ಇರುವುದಿಲ್ಲ ಎಂದು […]
19,400ಕ್ಕೆ ತಲುಪಿದ ನಿಫ್ಟಿ, ಬಿಎಸ್‌ಇ ಸೆನ್ಸೆಕ್ಸ್ 556 ಅಂಕ ಏರಿಕೆ

ಮುಂಬೈ: ದೇಶೀಯ ಷೇರು ಮಾರುಕಟ್ಟೆಗಳು ಗಮನಾರ್ಹ ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ. ಬಿಎಸ್‌ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 555.75 ಪಾಯಿಂಟ್ ಅಥವಾ ಶೇಕಡಾ 0.86 ರಷ್ಟು ಏರಿಕೆ ಕಂಡು 65,387.16 ಕ್ಕೆ ತಲುಪಿದ್ದರೆ, ವಿಶಾಲ ಎನ್‌ಎಸ್‌ಇ ನಿಫ್ಟಿ-50 181.50 ಪಾಯಿಂಟ್ ಅಥವಾ ಶೇಕಡಾ 0.94 ರಷ್ಟು ಏರಿಕೆ ಕಂಡು 19,400 ಕ್ಕೆ ತಲುಪಿದೆ. ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರದಂದು ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ. ಎನ್ಟಿಪಿಸಿ, ಜೆಎಸ್ಡಬ್ಲ್ಯೂ ಸ್ಟೀಲ್, ಜಿಯೋ ಫೈನಾನ್ಷಿಯಲ್, ಒಎನ್ಜಿಸಿ, ಟಾಟಾ […]
ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕರಿಂದ Aditya-L1 ಬಗ್ಗೆ ಸಂಪೂರ್ಣ ಮಾಹಿತಿ

ಬೆಂಗಳೂರು : ನಾಳೆ(ಶನಿವಾರ) ಇಸ್ರೋ ನಿರ್ಮಿತ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ.ಆದಿತ್ಯ ಎಲ್1 ಸೂರ್ಯನನ್ನು ಅಧ್ಯಯನ ಮಾಡುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಯೋಜನೆಯಾಗಿದೆ. ಈ ಕುರಿತು ಈಟಿವಿ ಭಾರತಕ್ಕೆ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಿಂದುವಿನಲ್ಲಿ ಭೂಮಿಯ ಗುರುತ್ವ ಪ್ರಭಾವ ಮತ್ತು ಸೂರ್ಯನ ಗುರುತ್ವ ಪ್ರಭಾವಗಳು ಸಮತೋಲನಗೊಳ್ಳುತ್ತವೆ. ಆದಿತ್ಯ-ಎಲ್ 1 ಯೋಜನೆಯಲ್ಲಿ ಈ ಬಿಂದುವನ್ನು ಕೇಂದ್ರೀಕರಿಸಿ ಸೂರ್ಯನ ಸುತ್ತ ಪರಿಭ್ರಮಿಸಲು ಯೋಜಿಸಲಾಗಿದೆ.ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ […]