Google Pixel 8 Pro : ಎಐ ತಂತ್ರಜ್ಞಾನದ ಅದ್ಭುತ ಸ್ಮಾರ್ಟ್​ಫೋನ್ ಬಿಡುಗಡೆ

ನವದೆಹಲಿ : ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳ ಜನಪ್ರಿಯತೆ ಹೆಚ್ಚಾಗುತ್ತಿರುವ ಮಧ್ಯೆ ಗೂಗಲ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ತಂತ್ರಜ್ಞಾನವನ್ನು ಒಳಗೊಂಡ ಅದ್ಭುತವಾದ ಅನುಭವ ನೀಡುವ ತನ್ನ ಹೊಸ Pixel 8 Pro ಸ್ಮಾರ್ಟ್​ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಈ ಫೋನ್ ನಿಮಗೆ ರೋಮಾಂಚಕ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.ಎಐ ತಂತ್ರಜ್ಞಾನವನ್ನು ಆಧರಿಸಿ ಕೆಲಸ ಮಾಡುವ ಹೊಸ ಗೂಗಲ್ ಪಿಕ್ಸೆಲ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ ಪಿಕ್ಸೆಲ್ 8 ಪ್ರೊ ನವೀಕರಿಸಿದ ಕ್ಯಾಮೆರಾಗಳು, ಹೊಸ ಸೆನ್ಸರ್​ಗಳು ಮತ್ತು ಉಪಯುಕ್ತ ವೈಶಿಷ್ಟ್ಯಗಳಿಂದ ತುಂಬಿದೆ. ಇದು […]

ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ : ನಾಳೆ ನಿಮ್ಮ ಮೊಬೈಲ್ ನಲ್ಲಿ ಪ್ರತಿಧ್ವನಿಸಲಿದೆ ಎಚ್ಚರಿಕೆ ಕರೆಗಂಟೆ

ಬೆಂಗಳೂರು: ರಾಜ್ಯದಲ್ಲಿ ದೂರಸಂಪರ್ಕ ಇಲಾಖೆ (ಸಿ-ಡಾಟ್‌) ಸೆಲ್‌ ಬ್ರಾಡ್‌ ಕಾಸ್ಟಿಂಗ್‌ ಮೂಲಕ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ ಮುಂಬರುವ ದಿನದಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಟೆಲಿಕಮ್ಯುನಿಕೇಶನ್‌ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ಸಕಾಲಿಕ ಮುನ್ನೆಚ್ಚರಿಕೆ (ವಿಭಿನ್ನ ಧ್ವನಿ ಮತ್ತು ಕಂಪನ) ನೀಡಲು ಮುಂದಾಗಿದೆ. ಈಗಾಗಲೇ ಮೊಬೈಲ್‌ ಬಳಕೆದಾರರಿಗೆ ಸಂದೇಶಗಳು ರವಾನೆಯಾಗಿದೆ. ಫೋನ್‌ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್‌ ಶಬ್ದದೊಂದಿಗೆ ಸಂದೇಶ ಫ್ಲಾಶ್‌ ಆಗಲಿದೆ. ಬಳಕೆದಾರರು […]

ಸೆನ್ಸೆಕ್ಸ್​, ನಿಫ್ಟಿ ಏರಿಕೆಯೊಂದಿಗೆ ಆರಂಭ : ಮಧ್ಯಪ್ರಾಚ್ಯ ಬಿಕ್ಕಟ್ಟಿನ ಆತಂಕ ಮಾಯ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಉತ್ತೇಜನಕಾರಿ ಪ್ರವೃತ್ತಿಗಳು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದ್ದರಿಂದ ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡವು.30 ಷೇರುಗಳ ಸೆನ್ಸೆಕ್ಸ್ 416.22 ಪಾಯಿಂಟ್ ಅಥವಾ ಶೇಕಡಾ 0.63 ರಷ್ಟು ಏರಿಕೆ ಕಂಡು 66,495.58 ಪಾಯಿಂಟ್​ಗಳಿಗೆ ತಲುಪಿದ್ದರೆ, ವಿಶಾಲ ನಿಫ್ಟಿ 120 ಪಾಯಿಂಟ್ಸ್ ಅಥವಾ ಶೇಕಡಾ 0.61 ರಷ್ಟು ಏರಿಕೆ ಕಂಡು 19,809.85 ಪಾಯಿಂಟ್​ಗಳಿಗೆ ತಲುಪಿದೆ. ಬುಧವಾರದ ಆರಂಭಿಕ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಏರಿಕೆ ಕಂಡಿವೆ. ಇಂದಿನ ಷೇರು ಮಾರುಕಟ್ಟೆಗಳ ಪ್ರವೃತ್ತಿಯ […]

ಮಾರಾಟ ಕುಸಿತ : ಚೀನಾದಲ್ಲಿ ಸ್ಮಾರ್ಟ್​ಪೋನ್ ತಯಾರಿಕೆ

ನವದೆಹಲಿ: ಚೀನಾದ ಸ್ಮಾರ್ಟ್​ಫೋನ್ ಮಾರುಕಟ್ಟೆ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಕುಸಿತ ಕಂಡಿದೆ. ಜನವರಿಯಿಂದ ಆಗಸ್ಟ್​ವರೆಗೆ ಚೀನಾ ಕೇವಲ 679 ಮಿಲಿಯನ್ ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸಿದೆ. 2022 ರ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡಾ 7.5 ರಷ್ಟು ಕಡಿಮೆಯಾಗಿದೆ ಎಂದು ದೇಶದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಿಸಿದ ಅಂಕಿ ಅಂಶಗಳು ತಿಳಿಸಿವೆ. ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಚೀನಾದ ಸ್ಮಾರ್ಟ್​ಪೋನ್ ಮಾರುಕಟ್ಟೆ ಕುಸಿತ ಕಂಡಿದೆ. ಮುಂಬರುವ ಚಳಿಗಾಲದ ಮಾರಾಟದ ಋತುವಿನಲ್ಲಿ ಹುವಾವೇ […]

ಇ- ಪೋರ್ಟ್​ನಲ್ಲಿ ಸಾಧಕರ ನಾಮನಿರ್ದೇಶನಕ್ಕೆ ಅವಕಾಶ : 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಧಾನ ಮಾಡಲಾಗುವ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ ಇಂದಿನಿಂದ (ಅಕ್ಟೋಬರ್ 1) ಅರ್ಜಿ ಸಲ್ಲಿಸಬಹುದಾಗಿದೆ.ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಾಮನಿರ್ದೇಶನ ಮಾಡಬಹುದಾಗಿದ್ದು, ನಾಮನಿರ್ದೇಶನದ ಅವಧಿ ಅ.1 ರಿಂದ ಅ. 15ರ ವರೆಗೆ ಇರಲಿದೆ2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾಧಕರ ನಾಮನಿರ್ದೇಶನಕ್ಕೆ ಇಂದಿನಿಂದ ಅ.15ರ ವರೆಗೆ ಅವಕಾಶ ನೀಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ಹೊರಡಿಸಿದೆ. ಆಯ್ಕೆ ಸಮಿತಿ ರಚನೆ: 2023ನೇ ಸಾಲಿನ […]