ಅಧ್ಯಯನ ವರದಿ : ಶೇ 45ರಷ್ಟು ಐಟಿ-ಟೆಕ್ ಪದವೀಧರರು ಮಾತ್ರ ನೇಮಕಾತಿಗೆ ಅರ್ಹರು

ನವದೆಹಲಿ : ಸರಿಸುಮಾರು 1.5 ಮಿಲಿಯನ್ ಎಂಜಿನಿಯರಿಂಗ್ ಪದವೀಧರರು ಐಟಿ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ನೌಕರಿಗಾಗಿ ಹುಡುಕಾಟ ನಡೆಸುತ್ತಿದ್ದು, ಉದ್ಯಮಗಳು ವಿಶಿಷ್ಟ ಕೌಶಲಗಳನ್ನು ಹೊಂದಿದ ಅಭ್ಯರ್ಥಿಗಳನ್ನು ಹುಡುಕಾಡುತ್ತಿರುವುದು ಮತ್ತು ಮಂದಗತಿಯ ನೇಮಕಾತಿಗಳು ಗೊಂದಲದ ವಾತಾವರಣ ಸೃಷ್ಟಿಸಿವೆ. ಪದವಿ ಶಿಕ್ಷಣ ಮುಗಿಸಿ ಐಟಿ ಉದ್ಯಮದಲ್ಲಿ ಕೆಲಸಕ್ಕೆ ಸೇರಬಯಸುವ ಉದ್ಯೋಗಾಕಾಂಕ್ಷಿಗಳ ಪೈಕಿ ಕೇವಲ ಶೇ 45ರಷ್ಟು ಜನ ಮಾತ್ರ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಹೊಂದಿದ್ದು, ನೇಮಕಾತಿಗೆ ಅರ್ಹವಾಗಿರುತ್ತಾರೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ.ಐಟಿ ಅಥವಾ ತಂತ್ರಜ್ಞಾನ ಪದವಿ ಮುಗಿಸಿ ಹೊರಬರುವ […]
25 ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಟೆಕ್-ಲೋಡೆಡ್ SUV ಸೋನೆಟ್ ಫೇಸ್ ಲಿಫ್ಟ್ ಅನಾವರಣಗೊಳಿಸಿದ ಕಿಯಾ

ಕಿಯಾ ಅಂತಿಮವಾಗಿ ಸೋನೆಟ್‌ನ ನವೀಕರಿಸಿದ ಆವೃತ್ತಿಯನ್ನು ಅನಾವರಣಗೊಳಿಸಿದೆ. ಈ ಪರಿಷ್ಕರಿಸಿದ ಸೋನೆಟ್ ಹೆಚ್ಚು ಬಲಯುತ ಮತ್ತು ಸ್ಪೋರ್ಟಿಯರ್ ಆಗಿದೆ, ಇದು ಸಂಪೂರ್ಣ ಚಲನಶೀಲತೆಯ ಪರಿಹಾರವನ್ನು ಹುಡುಕುತ್ತಿರುವ ಆಧುನಿಕ ದಂಪತಿಗಳು ಮತ್ತು ಟೆಕ್-ಸ್ಯಾವಿ ವೃತ್ತಿಪರರ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. KIA ಸೋನೆಟ್ ಫೇಸ್‌ಲಿಫ್ಟ್: ADAS ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ನಿರ್ಮಾಣ ಮಾಡಲಾದ ಹೊಸ ಸೋನೆಟ್ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅಡಿಯಲ್ಲಿ 10 ಸ್ವಾಯತ್ತ ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಭಾಗದ ಘರ್ಷಣೆ ತಪ್ಪಿಸುವ ಸಹಾಯ (FCA) ಲೀಡಿಂಗ್ ವೆಹಿಕಲ್ […]
2023ರ ವಿಕಿಪೀಡಿಯಾದ ಟಾಪ್ 25 ಲೇಖನಗಳ ಪಟ್ಟಿ ಬಿಡುಗಡೆ: ಕ್ರಿಕೆಟ್, ಬಾಲಿವುಡ್ ಸಿನಿಮಾ, ಭಾರತದ ಬಗ್ಗೆ ಹೆಚ್ಚು ಸರ್ಚ್

ಸ್ಯಾನ್ ಫ್ರಾನ್ಸಿಸ್ಕೋ: 2023 ರಲ್ಲಿ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಹೆಚ್ಚು ವೀಕ್ಷಿಸಿದ ಲೇಖನಗಳ ವಾರ್ಷಿಕ ಪಟ್ಟಿಯನ್ನು ವಿಕಿಮೀಡಿಯಾ ಫೌಂಡೇಶನ್ ಮಂಗಳವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮೊದಲನೇ ಸ್ಥಾನ ಚಾಟ್‌ಜಿಪಿಟಿ (AI) ಪಡೆದುಕೊಂಡರೆ, 2ನೇಯದು ಸಾವುಗಳ ಕುರಿತು ಮತ್ತು ಕ್ರಿಕೆಟ್ ಕ್ರೇಜ್ ಮೂರನೇ ಸ್ಥಾನದಲ್ಲಿದೆ. ಹಾಗೇ ಸಿನಿಮಾ ಕುರಿತು ಹೆಚ್ಚಿನ ಹುಡುಕಾಟ ನಡೆಸಿದ್ದಾರೆ. ಹಾಲಿವುಡ್ನ ಬಾರ್ಬಿಯಿಂದ ಹಿಡಿದು ಬಾಲಿವುಡ್‌ವರೆಗೆ ಮತ್ತು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಪ್ರಪಂಚದ ಬಗ್ಗೆ ತಿಳಿದುಕೊಳ್ಳುವಲ್ಲಿ ಜನರು ಸಕ್ರಿಯರಾಗಿದ್ದಾರೆ ಎಂಬ ಅಂಶ ಈ ಪಟ್ಟಿಯಿಂದ ಹೊರಬಿದ್ದಿದೆ.ವಿಕಿಪೀಡಿಯಾದಲ್ಲಿ ಹೆಚ್ಚು […]
ರಸ್ತೆಗಿಳಿದ ಸೈಬರ್ ಟ್ರಕ್ ಗಳು: ಗ್ರಾಹಕರಿಗೆ ಟ್ರಕ್ ವಿತರಿಸಿದ ಟೆಸ್ಲಾ ಸಿಇಒ ಏಲಾನ್ ಮಸ್ಕ್

ಟೆಕ್ಸಾಸ್: ನಾಲ್ಕು ವರ್ಷಗಳ ವಿಳಂಬದ ಮತ್ತು ಹಲವಾರು ಬದಲಾವಣೆಗಳ ನಂತರ, ಟೆಸ್ಲಾ ದ ಬಹುನಿರೀಕ್ಷಿತ ಸೈಬರ್ ಟ್ರಕ್ ಗಳು ಅಂತಿಮವಾಗಿ ರಸ್ತೆಗಿಳಿದಿದೆ. ಟೆಸ್ಲಾ ಸಿಇಒ ಏಲಾನ್ ಮಸ್ಕ್ ತಮ್ಮ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸೈಬರ್ ಟ್ರಕ್ ನ ಟೋಯಿಂಗ್ ಸಾಮರ್ಥ್ಯಗಳು, ಬುಲೆಟ್‌ಪ್ರೂಫ್ ಬಾಗಿಲುಗಳು ಮತ್ತು ವಿಲಕ್ಷಣ ಲೈಟ್ ಗಳು ಹಾಗೂ ಸ್ಪೀಡ್ ಬಗ್ಗೆ ವಿವರಿಸಿದ ಅವರು ಗ್ರಾಹಕರಿಗೆ ಟ್ರಕ್ ಗಳನ್ನು ವಿತರಿಸಿದರು. ಈವೆಂಟ್‌ನಲ್ಲಿ ಹಲವಾರು ಗ್ರಾಹಕರು ತಮ್ಮ ಸೈಬರ್‌ಟ್ರಕ್‌ಗಳನ್ನು ಪಡೆದರು. ಅಗ್ಗದ […]
ಸಂಶೋಧನಾ ವರದಿ : ಗ್ಯಾಸ್ – ಡೀಸೆಲ್ಗಿಂತ ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಅಧಿಕ

ಸ್ಯಾನ್ ಫ್ರಾನ್ಸಿಸ್ಕೋ: ಲಾಭರಹಿತ ಸಂಸ್ಥೆಯಾದ ಕನ್ಸ್ಯೂಮರ್ ರಿಪೋರ್ಟ್ (Consumer Reports) ವರದಿಯ ಪ್ರಕಾರ, ಆಂತರಿಕ ದಹನ ಎಂಜಿನ್ (ಐಸಿಇ) ನಿಂದ ಚಾಲಿತ ಕಾರುಗಳಿಗಿಂತ ಹೈಬ್ರಿಡ್ ಮಾದರಿಗಳು ಶೇಕಡಾ 26 ರಷ್ಟು ಕಡಿಮೆ ಸಮಸ್ಯೆಗಳನ್ನು ಹೊಂದಿವೆ ಎಂದು ಹೇಳಿದೆ. ಆಂತರಿಕ ದಹನ ಅಂದರೆ ಅನಿಲ ಮತ್ತು ಡೀಸೆಲ್ ಚಾಲಿತ ವಾಹನಗಳು ಎಂದರ್ಥ. ಗ್ಯಾಸ್ ಅಥವಾ ಡೀಸೆಲ್ ಚಾಲಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ (ಇವಿ) ನಿರ್ವಹಣಾ ವೆಚ್ಚ ಶೇಕಡಾ 79 ರಷ್ಟು ಹೆಚ್ಚು ಹಾಗೂ ಪ್ಲಗ್ – ಇನ್ […]