ಪ್ರೊ ಕಬಡ್ಡಿ: ಪವನ್ ದಾಖಲೆ ರೈಡ್; ಬೆಂಗಳೂರು ಬುಲ್ಸ್‌ಗೆ ಜಯ

ಪಂಚಕುಲಾ: ಪವನ್ ಕುಮಾರ್ ಶೆಹ್ರಾವತ್ ಫುಲ್ ಚಾರ್ಚ್ ಆಟದಿಂದಾಗಿ ಬೆಂಗಳೂರು ಬುಲ್ಸ್ ತಂಡವು ಬುಧವಾರ ಹರಿಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ದಾಖಲಿಸಿದೆ. ಇದರಿಂದಾಗಿ ಬೆಂಗಳೂರು ಬುಲ್ಸ್ ತಂಡದ ಪ್ಲೇ ಆಫ್ ಆಸೆ ಜೀವಂತವಾಗುಳಿದಿದೆ. ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ 59–36ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಹಣಿಯಿತು. ಪವನ್ ಕುಮಾರ್ ಶೆಹ್ರಾವತ್ ಆಟದಲ್ಲಿ 39 ಪಾಯಿಂಟ್ಸ್ ಕಲೆ ಹಾಕಿದರು. ಇದರಲ್ಲಿ 34 ರೈಡಿಂಗ್, 5 ಬೋಸನ್ ಪಾಯಿಂಟ್‌ಗಳು ಸೇರಿವೆ. ಈ ಮೂಲಕ ಪವನ್ ದಾಖಲೆ ಮಾಡಿ ಗಮನ ಸೆಳೆದರು.
ಬೈಕ್ ರೈಡರ್ ‘ಐಶ್ವರ್ಯ’ಗೆ ವಿಶ್ವ ಕಿರೀಟ..

ವಾರ್ಪಲೋಟಾ: ಅಂತಾರಾಷ್ಟ್ರೀಯ ಮೋಟಾರ್ ಸೈಕ್ಲಿಂಗ್ ಫೆಡರೇಷನ್ (ಎಫ್‌ಐಎಂ) ಬಾಜಾ ಕ್ರಾಸ್ ಕಂಟ್ರಿ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಐಶ್ವರ್ಯ ಮೊದಲ ಸ್ಥಾನ ಪಡೆದು ಇತಿಹಾಸ ಬರೆದಿದ್ದಾರೆ. 4 ಸುತ್ತಿನ ರೇಸ್‌ನಲ್ಲಿ ಒಟ್ಟು 3,200 ಕಿ.ಮೀ. ಕ್ರಮಿಸಿ, 65 ಅಂಕ ಪಡೆದು ಕೂಟದ ಚಾಂಪಿಯನ್ ಎನಿಸಿಕೊಂಡರು. ಪೋರ್ಚುಗಲ್ನ ರೀಟಾ ವಿಯೆರಾ 61 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡರು. ಐಶ್ವರ್ಯ ಸಾಧನೆ ಹಿಂದೆ ದೊಡ್ಡ ಸಾಹಸವಿದೆ. ವಿಶ್ವಕಪ್‌ನಲ್ಲಿ ಅವರು ಕೇವಲ 250 ಸಿಸಿ ಬೈಕ್‌ನಿಂದ ಇಷ್ಟು ದೊಡ್ಡ ಸಾಧನೆ ಮೆರೆದಿದ್ದಾರೆ. ಬೇರೆ ದೇಶದ […]
‘ಇಂಗ್ಲೆಂಡ್ ಮುಡಿಗೆ 2019ರ ವಿಶ್ವಕಪ್’ ಸೂಪರ್ ಓವರ್ನ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ಗೆ ಗೆಲುವು

ಇಂಗ್ಲೆಂಡ್: 2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಸೂಪರ್ ಒವರ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ವಿಶ್ವಕಪ್ ಕಪ್ ತನ್ನ ಮುಡಿಗೇರಿಸಿಕೊಂಡಿದೆ. ಆ ಮೂಲಕ 44 ವರ್ಷಗಳ ಅನಂತರ ಕ್ರಿಕೆಟ್ ಜನಕರಿಗೆ ವಿಶ್ವಕಪ್ ಒಲಿದಂತಾಗಿದೆ. ಸೂಪರ್ ಒವರ್ನ ಕೊನೆಯ ಎಸೆತದ ವರೆಗೂ ಕುತೂಹಲವಾಗಿಯೇ ಇದ್ದ ಪಂದ್ಯ ಮಾರ್ಟಿನ್ ಗಪ್ಟಿಲ್ ರನೌಟ್ ಆಗುವುದರೊಂದಿಗೆ ಆಂಗ್ಲರ ವಿಶ್ವಕಪ್ ಕನಸು ನನಸಾಯಿತು. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ 50 ಓವರ್ನಲ್ಲಿ 8 ವಿಕೆಟ್ […]
2019 ವಿಶ್ವಕಪ್: ನ್ಯೂಜಿಲೆಂಡ್- ಇಂಗ್ಲೆಂಡ್ ಫೈನಲ್ ಕದನ, ವಿಶ್ವಕಪ್ ನಿಂದ ಹೊರಬಿದ್ದ ಬಲಿಷ್ಠ ತಂಡಗಳು

ಬರ್ಮಿಂಗ್ಹ್ಯಾಂ: 2019ರ ವಿಶ್ವಕಪ್ ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಅಚ್ಚರಿಯ ಫಲಿತಾಂಶದಿಂದ ಹೊರಬಿದ್ದ ಬೆನ್ನಲ್ಲೇ ಗುರುವಾರದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡವೂ ಹೊರಬಿದ್ದಿದೆ. ಆ ಮೂಲಕ ಲೀಗ್ ಹಂತದ ಪಂದ್ಯಗಳಲ್ಲಿ ಅದ್ಬುತ ಪ್ರದರ್ಶನ ನೀಡಿ ಪಾಯಿಂಟ್ ಟೇಬಲ್ ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದ, 2011ರ ವಿಶ್ವಕಪ್ ಚ್ಯಾಂಪಿಯನ್ ಭಾರತ ಹಾಗೂ 2015 ಚ್ಯಾಂಪಿಯನ್ ಆಸ್ಟ್ರೇಲಿಯಾ ತಂಡಗಳ ವಿಶ್ವಕಪ್ ಆಸೆ ಕಮರಿಹೋಗಿದೆ. ಹೀಗಾಗಿ ಲೀಗ್ ಹಂತದಲ್ಲಿ ಸಾಧಾರಣ ಪ್ರದರ್ಶನ […]
ಉಡುಪಿ: ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ ಸಮಾರೋಪ
ಉಡುಪಿ: ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಬ್ಯಾಂಕ್ ಆಫ್ ಬರೋಡ ಸಹ ಪ್ರಾಯೋಜಕತ್ವದಲ್ಲಿ 13 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಮಣಿಪಾಲದ ಮರಿನಾ ಒಳಾಂಗಣ ಕ್ರೀಡಾಂಗಣ ಮತ್ತು ಅಜ್ಜರಕಾಡು ಒಳಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತ ಸಬ್ ಜ್ಯೂನಿಯರ್ ರ‍್ಯಾಂಕಿಂಗ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ವಿಜೇತರ ಪಟ್ಟಿ ಹೀಗಿದೆ: 13 ವರ್ಷ ಬಾಲಕರ ವಿಭಾಗ-ಅನ್ಶ್ ನೇಗಿ (ಉತ್ತರಾಖಂಡ್), ಬಾಲಕಿಯರ ವಿಭಾಗ- ಉನ್ನತಿ ಹೂಡಾ (ಹರ್ಯಾಣ), 13 ವರ್ಷ ಬಾಲಕರ ಡಬಲ್ಸ್- ವನ್ಶ್ ಪ್ರತಾಪ್ […]