‘ಇಂಗ್ಲೆಂಡ್ ಮುಡಿಗೆ 2019ರ ವಿಶ್ವಕಪ್’  ಸೂಪರ್ ಓವರ್ನ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ಗೆ ಗೆಲುವು

ಇಂಗ್ಲೆಂಡ್: 2019ರ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಸೂಪರ್ ಒವರ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ‌ ವಿಶ್ವಕಪ್ ಕಪ್ ತನ್ನ ಮುಡಿಗೇರಿಸಿಕೊಂಡಿದೆ. ಆ ಮೂಲಕ 44 ವರ್ಷಗಳ ಅನಂತರ ಕ್ರಿಕೆಟ್ ಜನಕರಿಗೆ ವಿಶ್ವಕಪ್ ಒಲಿದಂತಾಗಿದೆ.
ಸೂಪರ್ ಒವರ್ನ ಕೊನೆಯ ಎಸೆತದ ವರೆಗೂ ಕುತೂಹಲವಾಗಿಯೇ ಇದ್ದ ಪಂದ್ಯ ಮಾರ್ಟಿನ್ ಗಪ್ಟಿಲ್ ರನೌಟ್ ಆಗುವುದರೊಂದಿಗೆ ಆಂಗ್ಲರ ವಿಶ್ವಕಪ್ ಕನಸು ನನಸಾಯಿತು.
ಇದಕ್ಕೂ‌ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ 50 ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡು‌ 241 ಸಾಧಾರಣ ಮೊತ್ತ ಕಲೆ ಹಾಕಿತು. ಈ ತಂಡದ ಪರ ಆರಂಭಿಕ ಆಟಗಾರ ನಿಕೊಲಸ್ 55, ಲಾತಮ್ 47 ರನ್ ಗಳಿಸಿದರು.‌
241 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸೋಲಿನತ್ತ ಮುಖ‌ ಮಾಡಿತು. 86 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, 5 ಮತ್ತು 6 ನೇ ಕ್ರಮಾಂಕದಲ್ಲಿ ಕ್ರಸ್ ಗೆ ಇಳಿದ ಸ್ಟೋಕ್ಸ್ ಹಾಗೂ ಬಟ್ಲರ್ ಉತ್ತಮ‌ ಜತೆಯಾಟ ಗೆಲುವಿನತ್ತ ಕೊಂಡೊಯ್ಯಿತು. ಬಟ್ಲರ್ 59 ರನ್ ಗಳಿಸಿ ನಿರ್ಗಮಿಸಿದರು. ಅನಂತರ ಬಂದ ಪ್ಲಂಕೆಟ್, ಅರ್ಚರ್, ರಶೀದ್ ವಿಕೆಟ್ ಬೇಗನೇ ಕಳೆದುಕೊಂಡರು. ಆದರೆ ಒಂದು ಕಡೆ ಬಂಡೆಯಂತೆ ನಿಂತಿದ್ದ ಸ್ಟೋಕ್ಸ್ ಮಾತ್ರ 2 ಸಿಕ್ಸರ್ ಸಹಿತ 4 ಬೌಂಡರಿ ಸಿಡಿಸಿ 84 ರಮ್ ಗಳಿಸಿದರು.
ಕೊನೆಯ ಒವರ್ ನಲ್ಲಿ ಇಂಗ್ಲೆಂಡ್ ಗೆಲ್ಲಲು 15 ಬೇಕಿತ್ತು. ಮೊದಲೆರಡು ಎಸೆತ ಡಾಟ್ ಆದರೂ, ಮೂರನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ‌ರು ಸ್ಟೋಕ್ಸ್. 4ನೇ ಎಸತ ಮಿಸ್ ಫೀಲ್ಡ್ನಿಂದಾ 6 ರನ್ ಬರುವಂತಾಯಿತು. ಅಂತಿಮ ಎರಡು‌ ಎಸೆತದಲ್ಲಿ 3 ರನ್ ಬೇಕಿದ್ದಾಗ ಇಂಗ್ಲೆಂಡ್ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 2 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗೆ ಪಂದ್ಯ‌ ರೋಚಕ ಟೈ ಕಂಡಿತು.
ಸೂಪರ್ ಒವರ್:
ಸೂಪರ್ ಒವರ್ ಎದುರಿಸಲು ಕ್ರಿಸ್ ಗೆ ಬಂದ ಬಟ್ಲರ್ ಹಾಗೂ ಸ್ಟೋಕ್ಸ್ ಬೋಲ್ಟ್ ಎಸೆದಲ್ಲಿ 2 ಬೌಂಡರಿ ಬಾರಿಸುವ ಮೂಲಕ 15 ರನ್ ಕಲೆ ಹಾಕಿದರು. ನ್ಯೂಜಿಲೆಂಡ್ ಪರ ಬ್ಯಾಟಿಂಗ್ ಆರಂಭಿಸಿದ ಗಪ್ಟಿಲ್ ಹಾಗು‌ ನೀಶಮ್ ಒಂದು ಸಿಕ್ಸರ್ ಸಹಿತ 15 ರನ್ ಗಳಿಸುತ್ತಾರೆ. ಕೊನೆಯ ಎಸೆತದಲ್ಲಿ ಎರಡು ರನ್ ಗೆ ಓಡಿದರಾದರೂ ಗಪ್ಟಿಲ್ ರನೌಟ್ ಆದರು. ಹೀಗಾಗಿ ಇಂಗ್ಲೆಂಡ್ ನ ಎರಡು‌ ಬೌಂಡರಿಸಿದ್ದರಿಂದ ತಂಡ ರೋಚಕ‌ ಜಯ ಸಾಧಿಸಿತು.
ಇಂಗ್ಲೆಂಡ್ ಪರ ಪ್ಲಂಕೆಟ್ ಹಾಗೂ ಬೋಲ್ಟ್ ಬಿಗು ದಾಳಿಯ ಮೂಲಕ ತಲಾ 3 ವಿಕೆಟ್ ಪಡೆದರು. ನ್ಯೂಜಿಲೆಂಡ್ ನ ಪರ ಫರ್ಗ್ಯೂಸನ್ ಹಾಗೂ ನೀಶಮ್ ತಲಾ 3 ವಿಕೆಟ್ ಪಡೆದರು.‌