ಪ್ರೊ ಕಬಡ್ಡಿ: ಪವನ್ ದಾಖಲೆ ರೈಡ್; ಬೆಂಗಳೂರು ಬುಲ್ಸ್‌ಗೆ ಜಯ

ಪಂಚಕುಲಾ: ಪವನ್ ಕುಮಾರ್ ಶೆಹ್ರಾವತ್ ಫುಲ್ ಚಾರ್ಚ್ ಆಟದಿಂದಾಗಿ ಬೆಂಗಳೂರು ಬುಲ್ಸ್‌ ತಂಡವು ಬುಧವಾರ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಗೆಲುವು ದಾಖಲಿಸಿದೆ. ಇದರಿಂದಾಗಿ ಬೆಂಗಳೂರು ಬುಲ್ಸ್ ತಂಡದ ಪ್ಲೇ ಆಫ್‌ ಆಸೆ ಜೀವಂತವಾಗುಳಿದಿದೆ.
ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 59–36ರಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಹಣಿಯಿತು.

ಪವನ್ ಕುಮಾರ್ ಶೆಹ್ರಾವತ್ ಆಟದಲ್ಲಿ 39 ಪಾಯಿಂಟ್ಸ್‌ ಕಲೆ ಹಾಕಿದರು. ಇದರಲ್ಲಿ 34 ರೈಡಿಂಗ್, 5 ಬೋಸನ್ ಪಾಯಿಂಟ್‌ಗಳು ಸೇರಿವೆ. ಈ ಮೂಲಕ ಪವನ್ ದಾಖಲೆ ಮಾಡಿ ಗಮನ ಸೆಳೆದರು.