ಚಿಕಿತ್ಸೆಗೆ ಜರ್ಮನಿಗೆ ತೆರಳುತ್ತಿರುವ ಕೆಎಲ್ ರಾಹುಲ್ ಜೊತೆ ಪ್ರಯಾಣಿಸಲಿದ್ದಾರೆ ಬಾಲಿವುಡ್ ನಟಿ ಅಥಿಯಾ ಶೆಟ್ಟಿ?

ಬಲ್ಲ ಮೂಲಗಳ ಪ್ರಕಾರ, ಚಿಕಿತ್ಸೆಗಾಗಿ ಜರ್ಮನಿಗೆ ತೆರಳುತ್ತಿರುವ ಕೆಎಲ್ ರಾಹುಲ್ ಜೊತೆ ಪ್ರೇಯಸಿ ಅಥಿಯಾ ಶೆಟ್ಟಿ ಕೂಡಾ ಪ್ರಯಾಣಿಸಲಿದ್ದಾರೆ. ಜೂನ್ 16 ರಂದು ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಚಿಕಿತ್ಸೆಗಾಗಿ ಜರ್ಮನಿಗೆ ತೆರಳುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಭಾರತ- ಇಂಗ್ಲೆಂಡ್ ಪ್ರವಾಸದಿಂದ ರಾಹುಲ್ ಹೊರಗುಳಿದಿದ್ದಾರೆ. ತೊಡೆಸಂದು ಗಾಯಕ್ಕೆ ಒಳಗಾದ 30 ವರ್ಷ ವಯಸ್ಸಿನ ಕ್ರಿಕೆಟಿಗ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಶಸ್ತ ಚಿಕಿತ್ಸೆ ಬಳಿಕ ಸುಮಾರು ಒಂದು ತಿಂಗಳ ಕಾಲ ರಾಹುಲ್ ಜರ್ಮನಿಯಲ್ಲೇ ಉಳಿಯುತ್ತಾರೆ ಆ ಸಂದರ್ಭದಲ್ಲಿ […]
ವಿರಾಟ್ ಕೊಹ್ಲಿಇಡೀ ವೃತ್ತಿಜೀವನದಲ್ಲಿ ಮಾಡಿದ್ದಕ್ಕಿಂತ ಹೆಚ್ಚು ತಪ್ಪುಗಳನ್ನು ಒಂದು ಐಪಿಎಲ್ ಸೀಸನ್‌ನಲ್ಲಿ ಮಾಡಿದ್ದಾರೆ:ಸೆಹ್ವಾಗ್

ವಿರಾಟ್ ಕೊಹ್ಲಿ ಅವರು ತಮ್ಮ ಸಂಪೂರ್ಣ 14 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಮಾಡಿದ್ದಕ್ಕಿಂತ ಹೆಚ್ಚು ತಪ್ಪುಗಳನ್ನು ಒಂದು ಐಪಿಎಲ್ ಸೀಸನ್‌ನಲ್ಲಿ ಮಾಡಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಪಂದ್ಯಗಳಲ್ಲಿ ಇನ್ನಿಂಗ್ಸ್ ತೆರೆದರೂ, ಎರಡೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಶತಕವನ್ನು ಗಳಿಸದ ಕೊಹ್ಲಿ, 16 ಐಪಿಎಲ್ ಪಂದ್ಯಗಳಲ್ಲಿ 22.73 ರ ಸರಾಸರಿಗಿಂತ ಕಡಿಮೆ ಸರಾಸರಿಯಲ್ಲಿ 341 ರನ್ ಗಳಿಸಿ ಎರಡು ಅರ್ಧ ಶತಕಗಳನ್ನು ಗಳಿಸಿ ತಮ್ಮ ಕೆಟ್ಟ ಕುಸಿತವನ್ನು ಪ್ರದರ್ಶಿಸಿದ್ದಾರೆ. “ಇದು ನಮಗೆ ಗೊತ್ತಿರುವ ವಿರಾಟ್ ಕೊಹ್ಲಿ ಅಲ್ಲ. […]
ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ಮದುವೆಯನ್ನು ಮುಂದೂಡಿದ ಪಾಟಿದಾರ್! ಮಗನ ಕಥೆಯನ್ನು ಬಿಚ್ಚಿಟ್ಟ ತಂದೆ!!

ಬೆಂಗಳೂರು: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿಯುವುದರಿಂದ ಹಿಡಿದು, ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ದೋಣಿಯನ್ನು ದಡಕ್ಕೆ ಹಾಯಿಸುವವರೆಗಿನ ಈ ಪ್ರಯಾಣದಲ್ಲಿ ಪಾಟಿದಾರ್ ನಿಜವಾಗಿಯೂ ಬಹಳ ದೂರ ಸಾಗಿದ್ದಾರೆ. ಒಂದೇ ಮ್ಯಾಚ್ ನಲ್ಲಿ ರಜತ್ ಪಾಟೀದಾರ್ ಕ್ರಿಕೆಟ್ ಮತ್ತು ಆರ್ ಸಿ ಬಿ ಪ್ರೇಮಿಗಳ ಕಣ್ಮಣಿಯಾಗಿ ಬದಲಾಗಿದ್ದಾರೆ. ಪಾಟಿದಾರ್ ಅವರ ತಂದೆ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಐಪಿಎಲ್ ನಲ್ಲಿ ಮಾರಾಟವಾಗದೆ ಉಳಿದ ಕಾರಣ ಅದೇ ಸಮಯದಲ್ಲಿ ಮಗ ಮದುವೆಯಾಗಬೇಕಿತ್ತು, ಆದರೆ ಲುವ್ನಿತ್ ಸಿಸೋಡಿಯಾ ಗಾಯಗೊಂಡಿದ್ದರಿಂದ, ತನ್ನ ಮಗ ರಜತ್ ಪಾಟಿದಾರ್ […]
ಫ್ರೆಂಚ್ ಓಪನ್ 2022: 300ನೇ ಗ್ರ್ಯಾಂಡ್ ಸ್ಲಾಮ್ ಪಂದ್ಯದ ಗೆಲುವಿನೊಂದಿಗೆ ಮೂರನೇ ಸುತ್ತಿಗೆ ಜಿಗಿದ ರಫೆಲ್ ನಡಾಲ್

ಬುಧವಾರದಂದು ತಮ್ಮ 300ನೇ ಗ್ರ್ಯಾಂಡ್ ಸ್ಲಾಮ್ ಪಂದ್ಯದ ಗೆಲುವನ್ನು ಭದ್ರಪಡಿಸಿಕೊಳ್ಳಲು ಪ್ರಬಲವಾದ ಪ್ರದರ್ಶನವನ್ನು ನೀಡಿದ ಸ್ಪೇನ್ ಆಟಗಾರ ರಫಾಲ್ ನಡಾಲ್, ಫ್ರೆಂಚ್ ಓಪನ್ ನ ಮೂರನೇ ಸುತ್ತಿನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಲು ಸ್ಥಳೀಯ ಆಟಗಾರ ಕೊರೆಂಟಿನ್ ಮೌಟೆಟ್ ಅನ್ನು 6-3, 6-1, 6-4 ಅಂತರದಿಂದ ಸೋಲಿಸಿದ್ದಾರೆ. 🎥 Grand Slam win 3️⃣0️⃣0️⃣ for No.5 @RafaelNadal 👇#RolandGarros pic.twitter.com/px9XymLlIJ — Roland-Garros (@rolandgarros) May 26, 2022 ನಡಾಲ್ ಅವರ ಒಟ್ಟಾರೆ 21 ಮೇಜರ್‌ಗಳಲ್ಲಿ 13 […]
ಟಿ20 ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು; ಪಾಕ್ ಗೆ10 ವಿಕೆಟ್ ಗಳ ಗೆಲುವು

ದುಬೈ: ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತು. ಆದರೆ ಇಂದು ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ ಸೋಲು ಕಾಣುವ ಮೂಲಕ ಅಜೇಯ ಓಟಕ್ಕೆ ಕಡಿವಾಣ […]