ಆಯಶಸ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಸೇರಿದ ಮೋಯಿನ್ ಅಲಿ: ನಿವೃತ್ತಿ ವಾಪಸ್

ಲಂಡನ್: 2021ರಲ್ಲಿ ನಿವೃತ್ತಿ ಘೋಷಿಸಿದ್ದ 35 ವರ್ಷದ ಮೋಯಿನ್ ಅಲಿ ಅವರನ್ನು ಆಯಶಸ್ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್ – ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಕ್ರಿಕೆಟ್ ಸರಣಿ ಆಯಶಸ್ನ ಮೊದಲೆರಡು ಪಂದ್ಯಗಳಿಗೆ ಮೋಯಿನ್ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ. 35 ವರ್ಷ ವಯಸ್ಸಿನ ಅನುಭವಿ ಸ್ಪಿನ್ನರ್ 2021ರಲ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇಂಗ್ಲೆಂಡ್ ತಂಡದಲ್ಲಿ ಆಟಗಾರರ ಗಾಯದ ಸಮಸ್ಯೆಯಿಂದಾಗಿ ಮತ್ತೆ ಅಲಿಗೆ ಮಣೆ ಹಾಕಲಾಗಿದೆ. ಆಸ್ಟ್ರೇಲಿಯಾ- ಭಾರತ ತಂಡಗಳ ನಡುವೆ ಲಂಡನ್‌ನ ಓವಲ್ ಮೈದಾನದಲ್ಲಿ […]
ಟೀ ಬ್ರೇಕ್ಗೆ 170ಕ್ಕೆ 3 ವಿಕೆಟ್ ಕಳೆದುಕೊಂಡ ಆಸಿಸ್ ICC WTC Final

ಲಂಡನ್: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಎರಡನೇ ಅವಧಿಯಲ್ಲಿ 97 ರನ್ ಬಿಟ್ಟು ಕೊಟ್ಟು, 1 ವಿಕೆಟ್ ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಟಿ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ ಉತ್ತಮ ಕಮ್ಬ್ಯಾಕ್ ಮಾಡಿದೆ. ದಿನದ ಎರಡನೇ ಸೆಷನ್ನಲ್ಲಿ ಕೇವಲ ಒಂದು ವಿಕೆಟ್ ಬಿಟ್ಟುಕೊಟ್ಟು 97 ರನ್ ಕಲೆಹಾಕಿದೆ. ಎರಡನೇ ಸೆಷ್ನ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದೆ. ಪ್ರಸ್ತುತ ಕ್ರೀಸ್ನಲ್ಲಿ ಸ್ಮಿತ್ ಮತ್ತು ಹೆಡ್ ಇದ್ದಾರೆ. ಮೊದಲ ಸೆಷನ್ನಲ್ಲಿ […]
ಚೊಚ್ಚಲ ಬಾರಿಗೆ ಸೆಮೀಸ್‌ಗೇರಿದ ಬೆಲಾರಸ್ ಪ್ರತಿಭೆ: ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್

ಪ್ಯಾರಿಸ್: ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ನಲ್ಲಿ ಬೆಲಾರಸ್‌ನ ಅರೀನಾ ಸಬಲೆಂಕಾ 6-4, 6-4ರ ನೇರ ಸೆಟ್‌ಗಳಿಂದ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು ಮಣಿಸಿದರು. ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ಅರೀನಾ ಸಬಲೆಂಕಾ ಅವರು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿ ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿದರು. ಸಬಲೆಂಕಾ ಸೆಮಿಫೈನಲ್ನಲ್ಲಿ ಝೆಕ್ ಕರೋಲಿನಾ ಮುಚೋವಾ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಹೆಚ್ಚು ಆಕರ್ಷಣೆಗೆ ಕಾರಣವಾಗಿತ್ತು. […]
ISSF ಜೂನಿಯರ್ ವಿಶ್ವಕಪ್ ನಲ್ಲಿ 3ನೇ ಚಿನ್ನ ಗೆದ್ದ ಧನುಷ್ ಶ್ರೀಕಾಂತ್

ಜರ್ಮನಿ: ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ 2023 ಶೂಟಿಂಗ್‌ನಲ್ಲಿ ಧನುಷ್ ಶ್ರೀಕಾಂತ್ ಮೂರನೇ ಚಿನ್ನದ ಪದಕ ಗೆದ್ದರು. ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ಜೂನಿಯರ್ ವಿಶ್ವಕಪ್‌ನಲ್ಲಿ ಧನುಷ್ ಶ್ರೀಕಾಂತ್ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಸ್ಪರ್ಧೆಯ ಮೂರನೇ ದಿನ ಭಾರತ 6 ಪದಕಗಳಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿತು. ಶೂಟಿಂಗ್‌ನಲ್ಲಿ ಭಾರತಕ್ಕೆ ದಕ್ಕಿದ ಮೂರನೇ ಚಿನ್ನದ ಪದಕ ಇದಾಗಿದೆ. ಶೂಟಿಂಗ್ ಫೈನಲ್‌ನಲ್ಲಿ ಧನುಷ್ 24 ಶಾಟ್‌ಗಳಲ್ಲಿ 249.4 […]
ಹೊಸ ಜರ್ಸಿಯಲ್ಲಿ ಟೀಂ ಇಂಡಿಯಾ ಆಟಗಾರರ ಫೋಟೋಶೂಟ್:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

ಲಂಡನ್: ಲಂಡನ್‌ನ ಓವೆಲ್ನಲ್ಲಿ ಜೂನ್ 7 ರಿಂದ 11 ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದೆ . ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡೆಸುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದೆ. ಭಾರತ ತಂಡದ ಆಟಗಾರರು ಈ ಜರ್ಸಿಯಲ್ಲಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ ಮತ್ತು ಇತರ ಆಟಗಾರರ ಫೋಟೋಗಳನ್ನು ಬಿಸಿಸಿಐ ಮತ್ತು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ […]