ನೇಪಾಳ ವಿರುದ್ಧ ಟಾಸ್​ ಗೆದ್ದ ಪಾಕಿಸ್ತಾನ​ ಬ್ಯಾಟಿಂಗ್: ಏಷ್ಯಾಕಪ್‌ ಕ್ರಿಕೆಟ್ ಆರಂಭ

ಮುಲ್ತಾನ್​ (ಪಾಕಿಸ್ತಾನ): ಈ ವರ್ಷದ ಏಕದಿನ ಕ್ರಿಕೆಟ್‌ ವಿಶ್ವಕಪ್​ ಹಿನ್ನೆಲೆಯಲ್ಲಿ ಏಕದಿನ ಮಾದರಿಯಲ್ಲೇ ನಡೆಯುತ್ತಿರುವ ಏಷ್ಯಾ ಕಪ್​ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಇದೀಗ ಪರಸ್ಪರ ಮುಖಾಮುಖಿ ಆಗುತ್ತಿವೆ.ಕ್ರಿಕೆಟ್​ ಶಿಶು ನೇಪಾಳದ ವಿರುದ್ಧ ವಿಶ್ವದ ಅಗ್ರ ಶ್ರೇಯಾಂಕಿತ ಏಕದಿನ ಕ್ರಿಕೆಟ್‌ ತಂಡವಾದ ಪಾಕಿಸ್ತಾನ ಮೊದಲು ಬ್ಯಾಟಿಂಗ್​ ಮಾಡುತ್ತಿದೆ. ಪಾಕಿಸ್ತಾನ ತಂಡ ಇಂದು ಮುಂಜಾನೆ ನೇಪಾಳ ತಂಡದ ವಿರುದ್ಧ ಆಡುವ 11ರ ಬಳಗವನ್ನು ನಿರ್ಧರಿಸಿ ಪ್ರಕಟಿಸಿತ್ತು. ಇದೀಗ ಪಂದ್ಯಾರಂಭವಾಗಿದೆ. ಟಾಸ್​ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ […]

ಏಷ್ಯಾಕಪ್: ಸೆಪ್ಟೆಂಬರ್​ 2ರಂದು ಭಾರತ vs ಪಾಕ್ ಪಂದ್ಯ, ಕೊಲಂಬೊ ತಲುಪಿದ ರೋಹಿತ್‌ ಬಳಗ!

ಕೊಲಂಬೊ (ಶ್ರೀಲಂಕಾ): ಪಾಕಿಸ್ತಾನದ ಮುಲ್ತಾನ್​ ಅಂತರರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ನೇಪಾಳ ಮತ್ತು ಪಾಕಿಸ್ತಾನದ ನಡುವೆ ಉದ್ಘಾಟನಾ ಪಂದ್ಯ ನಡೆಯುತ್ತಿದೆ.ಇನ್ನೊಂದೆಡೆ, ಕಳೆದ 6 ದಿನಗಳಿಂದ ಏಷ್ಯಾಕಪ್​ ಮತ್ತು ವಿಶ್ವಕಪ್​ ಹಿನ್ನೆಲೆಯಲ್ಲಿ ಬೆಂಗಳೂರಿನ ಆಲೂರಿನಲ್ಲಿ ಕಠಿಣ ಅಭ್ಯಾಸ ನಡೆಸಿದ ಭಾರತ ಕ್ರಿಕೆಟ್ ತಂಡ ಇಂದು ಶ್ರೀಲಂಕಾ ದೇಶಕ್ಕೆ ತೆರಳಿದೆ. ಸೆಪ್ಟೆಂಬರ್​ 2ರಂದು ನಡೆಯುವ ಭಾರತ-ಪಾಕಿಸ್ತಾನ ನಡುವಣ ಪಂದ್ಯಕ್ಕೆ ಕೋಟ್ಯಂತರ ಕ್ರಿಕೆಟ್‌ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದಾರೆ.ಬೆಂಗಳೂರಿನ ಎನ್​ಸಿಎಯಲ್ಲಿ ಕಠಿಣ ಅಭ್ಯಾಸ ನಡೆಸಿದ ಭಾರತ ಕ್ರಿಕೆಟ್ ತಂಡ ಇಂದು ಏಷ್ಯಾಕಪ್​ ಟೂರ್ನಿಗಾಗಿ ಶ್ರೀಲಂಕಾ […]

ಜ್ಯೂರಿಚ್ ಡೈಮಂಡ್ ಲೀಗ್​: ಮತ್ತೊಂದು ಚಿನ್ನದ ಪದಕಕ್ಕೆ ನೀರಜ್ ಚೋಪ್ರಾ ಹೆಜ್ಜೆ

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಮುಕ್ತಾಯ ಕಂಡ ಬೆನ್ನಲ್ಲೇ ಜ್ಯೂರಿಚ್ ಡೈಮಂಡ್ ಲೀಗ್​ ನಡೆಯಲಿದ್ದು, ಅಥ್ಲೆಟಿಕ್ಸ್ ಅಭಿಮಾನಿಗಳು ನೀರಜ್‌ ಚೋಪ್ರಾ ಪ್ರದರ್ಶನ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಹೊಸ ಹೊಸ ದಾಖಲೆ ಬರೆದು ಮುನ್ನುಗ್ಗುತ್ತಿರುವ ಜಾವೆಲಿನ್‌ ಆಟಗಾರ ನೀರಜ್​ ಚೋಪ್ರಾ ಸೇರಿದಂತೆ ನೋಹ್ ಲೈಲ್ಸ್, ಶಾಕ್ಯಾರಿ ರಿಚರ್ಡ್‌ಸನ್, ಕಾರ್ಸ್ಟನ್ ವಾರ್‌ಹೋಮ್ ಮತ್ತು ಮಿಲ್ಟಿಯಾಡಿಸ್ ಟೆಂಟೊಗ್ಲೋ ಅವರು ಜ್ಯೂರಿಚ್ ಡೈಮಂಡ್ ಲೀಗ್​ನಲ್ಲಿ ಪ್ರತಿಷ್ಟಿತ ಪ್ರಶಸ್ತಿ ಗೆಲುವಿಗಾಗಿ ತಯಾರಿ ನಡೆಸುತ್ತಿದ್ದಾರೆ.ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ ಗೆದ್ದಿರುವ ನೀರಜ್​ ಚೋಪ್ರಾ, ಜ್ಯೂರಿಚ್ […]

ಪದಕ ಇಡೀ ಭಾರತಕ್ಕೆ ಸಲ್ಲುತ್ತದೆ : ಬುಡಾಪೆಸ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದ ನೀರಜ್ ಚೋಪ್ರಾ

ಬುಡಾಪೆಸ್ಟ್, ಹಂಗೇರಿ : ಫೈನಲ್‌ನಲ್ಲಿ ಎರಡನೇ ಪ್ರಯತ್ನದಲ್ಲಿ ಅವರು 88.17 ಮೀಟರ್‌ ದೂರ ಜಾವೆಲಿನ್​ ಎಸೆದು ಪದಕ ಗೆದ್ದರು. ವಿಶ್ವ ಚಾಂಪಿಯನ್ ಆದ ನಂತರ ನೀರಜ್ ಚೋಪ್ರಾ ಅವರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ ಮಾಧ್ಯಮದ ಮುಂದೆ ಮಾತನಾಡಿದ ನೀರಜ್ ಚೋಪ್ರಾ ಒಂದು ಕ್ಷಣ ಬಾವುಕರಾದರು. ‘ನಾನು ಈಗ ಏನು ಹೇಳಲಿ, ಈ […]

2024ರ ಪ್ಯಾರಿಸ್​ ಒಲಂಪಿಕ್​ಗೆ ಅರ್ಹತೆ ಪಡೆದ ಪಾರುಲ್ : 3000 ಮೀಟರ್​ ಓಟದಲ್ಲಿ ದಾಖಲೆ

ಬುಡಾಪೆಸ್ಟ್ (ಹಂಗೇರಿ): 3000 ಮೀಟರ್​ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ 11ನೇ ಸ್ಥಾನ ಪಡೆದು 2024ರ ಪ್ಯಾರಿಸ್​ ಒಲಂಪಿಕ್ಸ್​​ಗೆ ಆಯ್ಕೆ ಆಗಿದ್ದಾರೆ.ಸ್ಪರ್ಧೆಯಲ್ಲಿ 9:15.31 ಸಮಯದಲ್ಲಿ ಓಟ ಪೂರ್ಣಗೊಳಿಸಿದ ಅವರು, 11ನೇ ಸ್ಥಾನ ಪಡೆದರು. ಈ ಮೂಲಕ ಪಾರುಲ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. 3000 ಮೀಟರ್​ ಓಟವನ್ನು 9:15.31 ನಿಮಿಷದಲ್ಲಿ ಪೂರೈಸಿದ್ದು ಭಾರತದ ದಾಖಲೆಯಾಗಿದೆ.ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023ರ 3000 ಮೀಟರ್​ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ […]