ಪಾಕಿಸ್ತಾನಕ್ಕೆ 267 ರನ್ ಸ್ಪರ್ಧಾತ್ಮಕ ಗುರಿ

ಪಲ್ಲೆಕಲೆ (ಶ್ರೀಲಂಕಾ): ಪಾಕಿಸ್ತಾನದ ವೇಗಿಗಳಾದ ಶಹೀನ್ ಆಫ್ರಿದಿ ಮತ್ತು ಹ್ಯಾರಿಸ್ ರೌಫ್ ಭಾರತ ತಂಡಕ್ಕೆ ಕಾಡಿದ್ದರು, ನಂತರ ಕಿಶನ್ ಮತ್ತು ಹಾರ್ದಿಕ್ ಭಾರತಕ್ಕೆ ಆಸರೆ ಆಗಿದ್ದಾರೆಪಾಕಿಸ್ತಾನದ ಎದುರು ಭಾರತ ತಂಡ ಆರಂಭಿಕ ವೈಫಲ್ಯದ ನಡುವೆಯೂ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ ಬ್ಯಾಟಿಂಗ್ ಬಲದಿಂದ ಸ್ಪರ್ಧಾತ್ಮಕ ಗುರಿಯನ್ನು ಕಲೆಹಾಕಿದೆ. 66ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ 5ನೇ ವಿಕೆಟ್ನಲ್ಲಿ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ 138 ರನ್ ಜೊತೆಯಾಟದ ಆಸರೆ 267 ರನ್ ಗುರಿಗೆ ಕಾರಣವಾಯಿತು.
ಏಷ್ಯಾಕಪ್ ಅಬ್ಬರದ ಶತಕದೊಂದಿಗೆ ವಿಶ್ವದಾಖಲೆ ಮುರಿದ ಬಾಬರ್ ಅಜಂ

ಮುಲ್ತಾನ್: ಏಷ್ಯಾಕಪ್ 2023 ಉದ್ಘಾಟನಾ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೊಸ ದಾಖಲೆಗಳನ್ನು ಬರೆದಿದ್ದಾರೆ.131 ಎಸೆತಗಳಲ್ಲಿ 151 ರನ್ ಬಾರಿಸಿದ ಬಾಬರ್, 42ನೇ ಓವರ್ನಲ್ಲಿ ಮೂರಂಕಿ ಮೊತ್ತ ತಲುಪಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಸಿಂ ಆಮ್ಲ ಅವರ ರೆಕಾರ್ಡ್ ಬ್ರೇಕ್ ಮಾಡಿದರು. ಆಮ್ಲ 104 ಏಕದಿನ ಇನ್ನಿಂಗ್ಸ್ಗಳಿಂದ 19 ಶತಕಗಳನ್ನು ಬಾರಿಸಿದ್ದರು. ಆಮ್ಲ ಬಳಿಕದ ಸ್ಥಾನದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ (124 ಇನ್ನಿಂಗ್ಸ್), ಆಸ್ಟ್ರೇಲಿಯಾದ ಡೆವಿಡ್ […]
ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಟಿಕೆಟ್ ಮಾರಾಟ ಇಂದಿನಿಂದ ಶುರು

ಮುಂಬೈ, ಮಹಾರಾಷ್ಟ್ರ: ಇನ್ನು ಕೆಲ ದಿನಗಳಲ್ಲಿ ಭಾರತದಲ್ಲಿ ವಿಶ್ವ ಕ್ರಿಕೆಟ್ ಜಾತ್ರೆ ಶುರುವಾಗಲಿದೆ ( ICC Cricket World Cup ).ಅಕ್ಟೋಬರ್ 5 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದ ಮುಖಾಂತರ ಅಧಿಕೃತ ಚಾಲನೆ ಸಿಗಲಿದೆ. ಈಗಾಗಲೇ ವಿಶ್ವಕಪ್‌ನ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಿದೆ. ಇಂದಿನಿಂದ ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳಿಗೆ ಟಿಕೆಟ್ ಮಾರಾಟವಾಗಲಿದೆ. ಇದಕ್ಕಾಗಿ ಐಸಿಸಿ ಜೋರಾಗಿಯೇ ಪ್ರಚಾರ ಮಾಡುತ್ತಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ […]
ನೇಪಾಳ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್: ಏಷ್ಯಾಕಪ್ ಕ್ರಿಕೆಟ್ ಆರಂಭ

ಮುಲ್ತಾನ್ (ಪಾಕಿಸ್ತಾನ): ಈ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆಯಲ್ಲಿ ಏಕದಿನ ಮಾದರಿಯಲ್ಲೇ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಇದೀಗ ಪರಸ್ಪರ ಮುಖಾಮುಖಿ ಆಗುತ್ತಿವೆ.ಕ್ರಿಕೆಟ್ ಶಿಶು ನೇಪಾಳದ ವಿರುದ್ಧ ವಿಶ್ವದ ಅಗ್ರ ಶ್ರೇಯಾಂಕಿತ ಏಕದಿನ ಕ್ರಿಕೆಟ್ ತಂಡವಾದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಪಾಕಿಸ್ತಾನ ತಂಡ ಇಂದು ಮುಂಜಾನೆ ನೇಪಾಳ ತಂಡದ ವಿರುದ್ಧ ಆಡುವ 11ರ ಬಳಗವನ್ನು ನಿರ್ಧರಿಸಿ ಪ್ರಕಟಿಸಿತ್ತು. ಇದೀಗ ಪಂದ್ಯಾರಂಭವಾಗಿದೆ. ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ […]
ಏಷ್ಯಾಕಪ್: ಸೆಪ್ಟೆಂಬರ್ 2ರಂದು ಭಾರತ vs ಪಾಕ್ ಪಂದ್ಯ, ಕೊಲಂಬೊ ತಲುಪಿದ ರೋಹಿತ್ ಬಳಗ!

ಕೊಲಂಬೊ (ಶ್ರೀಲಂಕಾ): ಪಾಕಿಸ್ತಾನದ ಮುಲ್ತಾನ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನೇಪಾಳ ಮತ್ತು ಪಾಕಿಸ್ತಾನದ ನಡುವೆ ಉದ್ಘಾಟನಾ ಪಂದ್ಯ ನಡೆಯುತ್ತಿದೆ.ಇನ್ನೊಂದೆಡೆ, ಕಳೆದ 6 ದಿನಗಳಿಂದ ಏಷ್ಯಾಕಪ್ ಮತ್ತು ವಿಶ್ವಕಪ್ ಹಿನ್ನೆಲೆಯಲ್ಲಿ ಬೆಂಗಳೂರಿನ ಆಲೂರಿನಲ್ಲಿ ಕಠಿಣ ಅಭ್ಯಾಸ ನಡೆಸಿದ ಭಾರತ ಕ್ರಿಕೆಟ್ ತಂಡ ಇಂದು ಶ್ರೀಲಂಕಾ ದೇಶಕ್ಕೆ ತೆರಳಿದೆ. ಸೆಪ್ಟೆಂಬರ್ 2ರಂದು ನಡೆಯುವ ಭಾರತ-ಪಾಕಿಸ್ತಾನ ನಡುವಣ ಪಂದ್ಯಕ್ಕೆ ಕೋಟ್ಯಂತರ ಕ್ರಿಕೆಟ್‌ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದಾರೆ.ಬೆಂಗಳೂರಿನ ಎನ್ಸಿಎಯಲ್ಲಿ ಕಠಿಣ ಅಭ್ಯಾಸ ನಡೆಸಿದ ಭಾರತ ಕ್ರಿಕೆಟ್ ತಂಡ ಇಂದು ಏಷ್ಯಾಕಪ್ ಟೂರ್ನಿಗಾಗಿ ಶ್ರೀಲಂಕಾ […]