ಪಾಕಿಸ್ತಾನಕ್ಕೆ 267 ರನ್​ ಸ್ಪರ್ಧಾತ್ಮಕ ಗುರಿ

ಪಲ್ಲೆಕಲೆ (ಶ್ರೀಲಂಕಾ): ಪಾಕಿಸ್ತಾನದ ವೇಗಿಗಳಾದ ಶಹೀನ್​ ಆಫ್ರಿದಿ ಮತ್ತು ಹ್ಯಾರಿಸ್ ರೌಫ್​​ ಭಾರತ ತಂಡಕ್ಕೆ ಕಾಡಿದ್ದರು, ನಂತರ ಕಿಶನ್​ ಮತ್ತು ಹಾರ್ದಿಕ್​ ಭಾರತಕ್ಕೆ ಆಸರೆ ಆಗಿದ್ದಾರೆಪಾಕಿಸ್ತಾನದ ಎದುರು ಭಾರತ ತಂಡ ಆರಂಭಿಕ ವೈಫಲ್ಯದ ನಡುವೆಯೂ ಇಶಾನ್​ ಕಿಶನ್​ ಮತ್ತು ಹಾರ್ದಿಕ್​ ಪಾಂಡ್ಯರ ಬ್ಯಾಟಿಂಗ್​ ಬಲದಿಂದ ಸ್ಪರ್ಧಾತ್ಮಕ ಗುರಿಯನ್ನು ಕಲೆಹಾಕಿದೆ. 66ಕ್ಕೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ 5ನೇ ವಿಕೆಟ್​ನಲ್ಲಿ ಕಿಶನ್​ ಮತ್ತು ಹಾರ್ದಿಕ್​ ಪಾಂಡ್ಯರ 138 ರನ್​ ಜೊತೆಯಾಟದ ಆಸರೆ 267 ರನ್​ ಗುರಿಗೆ ಕಾರಣವಾಯಿತು.