ಬಾಂಗ್ಲಾ ಚೆಂಡಿಗರನ್ನು ಬಗ್ಗಿಸಿದ ಭಾರತೀಯ ಬ್ಯಾಟರ್ ಇಶಾನ್ ಕಿಶನ್: ಏಕದಿನ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಬಾರಿಸಿದ ಪೋರ

ಚಿತ್ತಗಾಂಗ್: ಇಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ನಂತರ ಇಶಾನ್ ಕಿಶನ್ ಅವರ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ಅವರ 113 ರನ್‌ಗಳ ಬೆಂಬಲದೊಂದಿಗೆ ಭಾರತವು 409/8 ರನ್ ಗಳಿಸಿದೆ. ಮೆಹಿದಿ ಹಸನ್ ಕೇವಲ ಐದನೇ ಓವರ್‌ನಲ್ಲಿ ಶಿಖರ್ ಧವನ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ರೋಹಿತ್ ಶರ್ಮಾ ಗಾಯಗೊಂಡ ನಂತರ ತಂಡದಲ್ಲಿದ್ದ ಕಿಶನ್ ಇನ್ನಿಂಗ್ಸ್ ಸ್ಥಿರತೆ ಕಾಯ್ದುಕೊಳ್ಳಲು ಕೊಹ್ಲಿಯೊಂದಿಗೆ ಕೈಜೋಡಿಸಿದರು. ಮೂವತ್ತರ ಶತಕ ಬಾರಿಸುವವರೆಗೂ […]
ಏಷ್ಯನ್ ಎಲೈಟ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಲೊವ್ಲಿನಾ, ಪರ್ವೀನ್, ಸವೀಟಿ ಮತ್ತು ಅಲ್ಫಿಯಾ ಪಠಾಣ್

ಜೋರ್ಡಾನ್: ಶುಕ್ರವಾರ ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್, ಪರ್ವೀನ್ ಹೂಡಾ, ಸವೀಟಿ ಮತ್ತು ಅಲ್ಫಿಯಾ ಪಠಾಣ್ ಚಿನ್ನದ ಪದಕಗಳನ್ನು ಪಡೆದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಭಾರತದ ಪರ್ವೀನ್ ಜಪಾನ್‌ನ ಕಿಟೊ ಮಾಯ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಸರ್ವಾನುಮತದ ನಿರ್ಧಾರದ ಮೂಲಕ ನಾಲ್ಕನೇ ಶ್ರೇಯಾಂಕದ ಮಾಯ್ ಅನ್ನು ಸೋಲಿಸಲು ಪ್ರಬಲ ಪ್ರದರ್ಶನವನ್ನು ನೀಡಿದರು. ಲೊವ್ಲಿನಾ ಅವರು ಉಜ್ಬೇಕಿಸ್ತಾನದ ರುಜ್ಮೆಟೋವಾ ಸೊಖಿಬಾ […]
ಈ ಬಾರಿಯೂ ಕಪ್ ತರಲಿಲ್ಲ: ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತದೆದುರು 10 ವಿಕೆಟ್ ಗಳಿಂದ ಗೆಲುವು ಸಾಧಿಸಿದ ಇಂಗ್ಲೆಡ್

ಗುರುವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ರ ಎರಡನೇ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತವು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಎದುರು 10 ವಿಕೆಟ್ ಗಳಿಂದ ಸೋತು ಫೈನಲ್ ಪಂದ್ಯದಿಂದ ಹೊರಗುಳಿದಿದೆ. ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಹೇಲ್ಸ್ ಮತ್ತು ಬಟ್ಲರ್ ಭಾರತದ 168 ರನ್ ಗಳ ಗುರಿಯನ್ನು ಕೇವಲ 16 ಓವರ್ ಗಳಲ್ಲಿ ಶೂನ್ಯ ವಿಕೆಟ್ ನಷ್ಟಕ್ಕೆ ಗೆದ್ದು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ 10 […]
ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾದ ವಿರಾಟ್ ಕೊಹ್ಲಿ

ಅಡಿಲೇಡ್: ಅಡಿಲೇಡ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧ ಭಾರತದ ಗುಂಪು 2 ಪಂದ್ಯದಲ್ಲಿ ಕಿಂಗ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ವಿರಾಟ್ ತಮ್ಮ ಅಜೇಯ ಅರ್ಧಶತಕದ ಹಾದಿಯಲ್ಲಿ ತಮ್ಮ 16 ನೇ ರನ್ ಬಾರಿಸಿದಾಗ, ಅವರು ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರ 1016 ರನ್‌ಗಳ ದಾಖಲೆಯನ್ನು ಮುರಿದು ಪ್ರಥಮ ಸ್ಥಾನವನ್ನು ಅಲಂಕರಿಸಿದರು. ಇದು ಈ ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ ಅವರ ಮೂರನೇ ಅರ್ಧಶತಕವಾಗಿದೆ. […]
ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತದ ರಾಷ್ಟ್ರಗಾನದ ಉದ್ಘೋಷ: ಭಾವುಕರಾದ ರೋಹಿತ್ ಶರ್ಮಾ

ಮೆಲ್ಬೋರ್ನ್: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಭಾನುವಾರದಂದು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವ ಕಪ್ ನಲ್ಲಿ ತನ್ನ ಸೂಪರ್ 12 ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವನ್ನು ಎದುರಿಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಭಾರತದ ರಾಷ್ಟ್ರಗಾನವನ್ನು ನುಡಿಸಲಾಗಿದ್ದು, ಇಡಿಯ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ರಾಷ್ಟ್ರಭಕ್ತಿಯ ಉದ್ಘೋಷ ರಾಷ್ಟ್ರಗಾನದ ರೂಪದಲ್ಲಿ ಮೊಳಗಿದೆ. ನಾಯಕ ರೋಹಿತ್ ಶರ್ಮಾ ಅವರು ಕೊನೆಯ ಕ್ಷಣದಲ್ಲಿ ಭಾವುಕರಾಗಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತೀಯ […]