ಕೊಸಾನೋವ್ ಸ್ಮಾರಕ 2022 ಅಥ್ಲೆಟಿಕ್ಸ್ ಕೂಟ: ಡಿಸ್ಕಸ್ ಎಸೆತಗಾರ್ತಿ ನವಜೀತ್ ಧಿಲ್ಲೋನ್ ಗೆ ಚಿನ್ನದ ಪದಕ

ನವದೆಹಲಿ: ಶನಿವಾರ ಕಝಾಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ಕೊಸಾನೋವ್ ಸ್ಮಾರಕ 2022 ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಮಹಿಳಾ ಡಿಸ್ಕಸ್ ಎಸೆತಗಾರ್ತಿ ನವಜೀತ್ ಧಿಲ್ಲೋನ್ ಚಿನ್ನದ ಪದಕ ಗೆದ್ದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲು ನೋಡುತ್ತಿರುವ ನವಜೀತ್ ಧಿಲ್ಲೋನ್, ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ 56.24 ಮೀ ದೂರ ಎಸೆದು ಚಿನ್ನ ಗೆದ್ದಿದ್ದಾರೆ. ಸಿಡಬ್ಲ್ಯೂಜಿಗಾಗಿ 4×100ಮೀ ರಿಲೇ ತಂಡದಲ್ಲಿ ಆಯ್ಕೆಯಾಗಿರುವ ದ್ಯುತಿ ಚಂದ್ 100ಮೀ ಫೈನಲ್‌ನಲ್ಲಿ 11.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 11.40 ಸೆಕೆಂಡ್‌ಗಳಲ್ಲಿ ಚಿನ್ನ ಗೆದ್ದ […]
ಆರ್ಚರಿ ವಿಶ್ವಕಪ್ ಸ್ಟೇಜ್-3 ರ ಸಂಯುಕ್ತ ಮಿಶ್ರ ತಂಡ ಸ್ಪರ್ಧೆ: ಮೊಟ್ಟ ಮೊದಲ ಚಿನ್ನ ಗೆದ್ದ ಜ್ಯೋತಿ ಸುರೇಖಾ ವೆನ್ನುಮ್ ಮತ್ತು ಅಭಿಷೇಕ್ ವರ್ಮಾ

ನವದೆಹಲಿ: ನಿನ್ನೆ ಪ್ಯಾರಿಸ್‌ನಲ್ಲಿ ನಡೆದ ವಿಶ್ವಕಪ್ ಸ್ಟೇಜ್-3 ರಲ್ಲಿ ಬಿಲ್ಲುಗಾರರಾದ ಜ್ಯೋತಿ ಸುರೇಖಾ ವೆನ್ನುಮ್ ಮತ್ತು ಅಭಿಷೇಕ್ ವರ್ಮಾ ಅವರು ಸಂಯುಕ್ತ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶೂಟ್-ಆಫ್‌ನಲ್ಲಿ ಗ್ರೇಟ್ ಬ್ರಿಟನ್‌ನ ಎಲ್ಲಾ ಗಿಬ್ಸನ್ ಎದುರು ಫೈನಲ್‌ನಲ್ಲಿ ಸೋತ ಜ್ಯೋತಿ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸಂಯುಕ್ತ ಮಿಶ್ರ ತಂಡದ ಫೈನಲ್‌ನಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನುಮ್ ಮತ್ತು ಅಭಿಷೇಕ್ ವರ್ಮಾ ಜೋಡಿ 152-149 ಅಂಕಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿತು. ಮಿಶ್ರ ಸಂಯುಕ್ತ […]
ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದ ಕ್ಷಣ: ಇಂದು 1983 ರ ವಿಶ್ವ ಕಪ್ ಗೆದ್ದ ದಿನ

ನವದೆಹಲಿ: ಬರೋಬ್ಬರಿ 39 ವರ್ಷಗಳ ಹಿಂದೆ ಅವಿಸ್ಮರಣೀಯ ದಾಖಲೆಯೊಂದು ನಡೆದ ದಿನವಿದು. ಮೂರು ದಶಕಗಳ ಹಿಂದೆ ವಿಶ್ವ ಛಾಂಪಿಯನ್ ವೆಸ್ಟ್ ಇಂಡೀಸಿನ ಧಾಂಡಿಗರನ್ನು ಸೋಲಿಸಿ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿ ಹಿಡಿದು ಸಮಸ್ತ ಭಾರತೀಯರು ಹೆಮ್ಮ ಪಡುವಂತೆ ಮಾಡಿದ ದಿನ ಜೂನ್ 25. 1983 ರಲ್ಲಿ ಈ ದಿನದಂದು, ಭಾರತೀಯ ಕ್ರಿಕೆಟ್ ತಂಡವು ಎಲ್ಲಾ ಅಡೆತಡೆ ಮತ್ತು ನಿರೀಕ್ಷೆಗಳನ್ನು ಮೀರಿ ಐತಿಹಾಸಿಕ ಲಾರ್ಡ್ಸ್ ಗ್ರೌಂಡ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್‌ನಲ್ಲಿ 43 ರನ್‌ಗಳಿಂದ ಸೋಲಿಸುವ ಮೂಲಕ […]
ಮೊಟ್ಟಮೊದಲ ಬಾರಿಗೆ ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್ ಆಯೋಜಿಸುತ್ತಿರುವ ಭಾರತ

ನವದೆಹಲಿ: ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶುಕ್ರವಾರದಂದು, ಭಾರತವು ತನ್ನ ಮೊಟ್ಟಮೊದಲ ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುತ್ತಿರುವುದು ಹೆಮ್ಮೆ ಮತ್ತು ಜವಾಬ್ದಾರಿಯ ವಿಷಯವಾಗಿದೆ ಎಂದಿದ್ದಾರೆ. ತಮ್ಮ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಠಾಕೂರ್, ವಿಶ್ವಕಪ್ ನ ಎಲ್ಲಾ 16 ತಂಡಗಳನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ. ಇದು ದೇಶದ ಮಹಿಳಾ ಕ್ರೀಡೆಗಾಗಿ ವಿಶೇಷ ಪಂದ್ಯಾವಳಿಯಾಗಿದೆ. ಕ್ರೀಡೆಯಲ್ಲಿ ಮಹಿಳೆಯರನ್ನು ಒಳಗೊಂಡ ಆಟ ಮೈದಾನವನ್ನಾಗಿ ಮಾಡಲು ಹೆಚ್ಚಿನ ಯುವತಿಯರನ್ನು ಈ ಕಾರ್ಯಕ್ರಮವು ಪ್ರೇರೇಪಿಸಲಿದೆ ಎಂದು ಅವರು […]
ರಾಷ್ಟ್ರೀಯ ಮುಕ್ತ ಮಾಸ್ಟರ್ಸ್ ಅಥ್ಲೆಟಿಕ್ಸ್: 100 ಮೀಟರ್ ರೇಸನ್ನು 45.40 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದ 105 ವರ್ಷದ ಸೂಪರ್ ಗ್ರ್ಯಾನಿ!!

ವಡೋದರಾ: ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ 105 ವರ್ಷದ ಸೂಪರ್ ಗ್ರ್ಯಾನಿ(ಅಜ್ಜಿ) 45.40 ಸೆಕೆಂಡುಗಳಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದು ಈ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಾಗಿದ್ದು, ಹರಿಯಾಣ ದಾದ್ರಿ ಜಿಲ್ಲೆಯ ರಾಮ್ ಬಾಯಿ ಎನ್ನುವ 105 ವರ್ಷ ವಯಸ್ಸಿನ ಅಜ್ಜಿಯೊಬ್ಬರು ಯಾರೂ ಊಹಿಸಲಾಗದ ದಾಖಲೆಯನ್ನು ನಿರ್ಮಿಸಿ ಸೂಪರ್ ಗ್ರ್ಯಾನಿ ಆಗಿ ಹೊರಹೊಮ್ಮಿದ್ದಾರೆ. ಒಂದು ದಾಖಲೆಯಿಂದ ತೃಪ್ತರಾಗದ ಸೂಪರ್ ಅಜ್ಜಿ ವಿದೇಶದಲ್ಲಿ ಸ್ಪರ್ಧಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. “ಇದು ತುಂಬಾ ಸಂತೋಷ […]