ಭಾರತ XI ಮತ್ತು ವಿಶ್ವ XI ತಂಡದ ನಡುವೆ ಕ್ರಿಕೆಟ್ ಪಂದ್ಯವಾಡಿಸಲು ಸರಕಾರದಿಂದ ಬಿಸಿಸಿಐಗೆ ಮನವಿ

ನವದೆಹಲಿ: ಪಿಟಿಐ ವರದಿಗಳನ್ನು ನಂಬುವುದಾದರೆ, ಭಾರತದ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆ ಅಂಗವಾಗಿ ಆಗಸ್ಟ್ 22 ರಂದು ಭಾರತ XI ಮತ್ತು ವಿಶ್ವ XI ತಂಡದ ನಡುವೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವಂತೆ ಭಾರತ ಸರ್ಕಾರವು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಕೋರಿಕೆ ಸಲ್ಲಿಸಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನದ ಭಾಗವಾಗಿ ಭಾರತದ ಸಂಸ್ಕೃತಿ ಸಚಿವಾಲಯವು ಭಾರತದ ಅಗ್ರ ಆಟಗಾರರು ಮತ್ತು ವಿದೇಶದ ಜನಪ್ರಿಯ ಕ್ರಿಕೆಟಿಗರ ಮಧ್ಯೆ ಪಂದ್ಯವನ್ನು ಆಡಿಸಲು ಪ್ರಯತ್ನಿಸುವಂತೆ ಬಿಸಿಸಿಐ ಅಧಿಕಾರಿಗಳ […]
ಕೆ. ಎಲ್ ರಾಹುಲ್ ದಾಖಲೆ ಪುಡಿಗಟ್ಟಿದ ಸೂರ್ಯಕುಮಾರ್ ಯಾದವ್: ಟಿ20ಯಲ್ಲಿ ಶತಕ ಸಿಡಿಸಿದ ಐದನೇ ಭಾರತೀಯ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ ಇಂಗ್ಲೆಡ್ 215 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಭಾರತವು ಮೊದಲ ಐದು ಓವರ್‌ಗಳಲ್ಲಿ ರಿಷಬ್ ಪಂತ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್‌ಗಳನ್ನು ಕಳೆದುಕೊಂಡು 31-3ಕ್ಕೆ ಇಳಿದಾಗ, ತನ್ನ ಬ್ಯಾಂಟಿಂಗ್ ಕೌಶಲ್ಯವನ್ನು ಒರೆಗೆ ಹಚ್ಚಿದ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾವನ್ನು ಮತ್ತೆ ಹಳಿಗೆ ತಂದರು. ಭಾರತವು ಪಂದ್ಯವನ್ನು ಸೋತಿದ್ದರೂ ಕೂಡಾ ಸೂರ್ಯಕುಮಾರ್ ಶತಕದ ಬಗ್ಗೆ ಇಡೀ […]
ಮಾಹಿ 41ನೇ ಹುಟ್ಟು ಹಬ್ಬಕ್ಕೆ 41 ಫೀಟ್ ಕಟೌಟ್ ಹಾಕಿ ಸಂಭ್ರಮಿಸಿದ ವಿಜಯವಾಡಾ ಅಭಿಮಾನಿಗಳು

ವಿಜಯವಾಡಾ: ಭಾರತ ಕಂಡ ಅತ್ಯುತ್ತಮ ಕ್ರಿಕೆಟ್ ಕ್ಯಾಪ್ಟನ್ ಗಳಲ್ಲಿ ಒಬ್ಬರಾದ ಕೂಲ್ ಕ್ಯಾಪ್ಟನ್ ಥಲಾ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 41ನೇ ವರ್ಷದ ಹುಟ್ಟು ಹಬ್ಬವನ್ನಾಚರಿಸುತ್ತಿದ್ದಾರೆ. ಧೋನಿ ಹುಟ್ಟು ಹಬ್ಬಕ್ಕೆ ಇಡೀ ದೇಶವೆ ಅವರಿಗೆ ಶುಭಾಶಯಗಳ ಸುರಿಮಳೆಯನ್ನು ಸುರಿಸುತ್ತಿದೆ. ತಮ್ಮ ಧೋನಿ ಅಭಿಮಾನಕ್ಕೆ ಸಾಕ್ಷಿ ಎನ್ನುವಂತೆ, ವಿಜಯವಾಡದ ಜಿಲ್ಲೆಯೊಂದರಲ್ಲಿ ಅಭಿಮಾನಿಗಳು ಮಾಹಿಯ 41 ಅಡಿ ಕಟೌಟ್ ಹಾಕಿ ಮಾಜಿ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. ಕಟೌಟ್‌ನಲ್ಲಿ ಧೋನಿ ಬಹು ಪ್ರಖ್ಯಾತ ಹೆಲಿಕಾಪ್ಟರ್ ಶಾಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ […]
ಗುಣಮಟ್ಟದ ಸ್ಪಿನ್ನರ್ ಇಲ್ಲದ ಕೊರತೆಯೆ ಭಾರತದ ಟೆಸ್ಟ್ ಕ್ರಿಕೆಟ್ ಗೆಲುವಿನ ಕನಸಿಗೆ ತಣ್ಣೀರೆರಚಿತು: ಡೇವಿಡ್ ಲಾಯ್ಡ್

ಮಾಜಿ ಇಂಗ್ಲಿಷ್ ಕ್ರಿಕೆಟಿಗ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ಡೇವಿಡ್ ಲಾಯ್ಡ್ ಭಾರತದ 15 ವರ್ಷಗಳ ಟೆಸ್ಟ್ ಕ್ರಿಕೆಟ್ ಗೆಲುವಿನ ಕನಸು ಭಗ್ನವಾದ ಪ್ರಮುಖ ಅಂಶವನ್ನು ಎತ್ತಿ ತೋರಿಸಿದ್ದಾರೆ. ತಂಡದಲ್ಲಿ ನಾಲ್ವರು ವೇಗಿಗಳು ಮತ್ತು ಕೇವಲ ಒಬ್ಬ ಸ್ಪಿನ್ನರ್ ಅನ್ನು ಇಟ್ಟುಕೊಂಡದ್ದು ಭಾರತಕ್ಕೆ ವಿಪರೀತ ಪರಿಣಾಮವನ್ನು ನೀಡಿತು ಎನ್ನುವುದು ಲಾಯ್ಡ್ ಅವರ ಅಭಿಮತವಾಗಿದೆ. “ನಾನು ಇದನ್ನು ಹೇಳುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ, ಆದರೆ ಗುಣಮಟ್ಟದ ಸ್ಪಿನ್ನರ್ ಇಲ್ಲದ ಕಾರಣ ಭಾರತಕ್ಕೆ ತೊಂದರೆಯಾಯಿತು. ಭಾರತ ರವೀಂದ್ರ ಜಡೇಜಾ […]
ಎಲೋರ್ಡಾ ಕಪ್: ಚೊಚ್ಚಲ ಪಂದ್ಯದಲ್ಲೇ ಚಿನ್ನ ಗೆದ್ದ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಅಲ್ಫಿಯಾ ಪಠಾಣ್ ಮತ್ತು ಗಿತಿಕಾ

ನವದೆಹಲಿ: ಕಜಕಿಸ್ತಾನದ ನೂರ್-ಸುಲ್ತಾನ್‌ನಲ್ಲಿ ನಡೆಯುತ್ತಿರುವ ಎಲೋರ್ಡಾ ಕಪ್‌ನಲ್ಲಿ ಹಾಲಿ ಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಅಲ್ಫಿಯಾ ಪಠಾಣ್ ಮತ್ತು ಗಿತಿಕಾ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಇತರ ಇಬ್ಬರು ಮಹಿಳಾ ಬಾಕ್ಸರ್‌ಗಳಾದ ಕಲೈವಾಣಿ ಶ್ರೀನಿವಾಸನ್ ಮತ್ತು ಜಮುನಾ ಬೋರೊ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ 81-ಕಿಲೋಗ್ರಾಂ ಫೈನಲ್‌ನಲ್ಲಿ, ಅಲ್ಫಿಯಾ 2016 ರ ವಿಶ್ವ ಚಾಂಪಿಯನ್ ಮತ್ತು ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿ ಲಜ್ಜತ್ ಕುಂಗೆಬಾಯೆವಾ ಅವರನ್ನು 5-0 ಅಂತರದಿಂದ ಸೋಲಿಸಿದ್ದಾರೆ. ಅಖಿಲ ಭಾರತೀಯ ಮಹಿಳೆಯರ 48 ಕೆಜಿ ಫೈನಲ್‌ನಲ್ಲಿ […]