ಮನೆಗೆ ಬ್ರೆಡ್ ತಂದಿದ್ದೀರಾ? ಹಾಗಿದ್ರೆ ಒಮ್ಮೆ ಬ್ರೆಡ್ ಮಂಚೂರಿ ಮಾಡಿ ಸವೀರಿ

ಬ್ರೆಡ್ ,ಸಾಧಾರಣ ಎಲ್ಲರ ಮನೆಯಲ್ಲೂ ಉಪಯೋಗಿಸುವ ಸಾಮಾನ್ಯ ಖಾದ್ಯ. ಬ್ರೆಡ್ ಜಾಮ್, ಬ್ರೆಡ್ ಆಮ್ಲೇಟ್, ಬ್ರೆಡ್ ಬೋಂಡಾ ಮಾಡಿ ನೀವೆಲ್ಲಾ  ಸವಿದಿರಬಹುದು.ಆದರೆ ಇನ್ನೊಂದು ಬ್ರೆಡ್ ನಿಂದ ಮಾಡಬಹುದಾದ ಸಿಂಪಲ್ ರೆಸಿಪಿಯನ್ನು ನಾವ್ ಹೇಳ್ತೇವೆ ನೋಡಿ ಅದುವೇ ಬ್ರೆಡ್ ಮಂಚೂರಿ. ಮಂಚೂರಿ ಮಾಡೋಕೆ ಏನೇನ್ ಬೇಕು? ಜೋಳದ ಹಿಟ್ಟು– 2 ಚಮಚ , ಮೈದಾ ಹಿಟ್ಟು – 4 ಚಮಚ, ಕಾಳುಮೆಣಸಿನ ಪುಡಿ– ಅರ್ಧ ಚಮಚ, ಶುಂಠಿ, ಬೆಳ್ಳುಳ್ಳಿ ಪೇಸ್ಟ್– ಅರ್ಧ ಚಮಚ, ಶುಂಠಿ, ಬೆಳ್ಳುಳ್ಳಿ– ಸಣ್ಣಗೆ ಹೆಚ್ಚಿದ್ದು […]

ಟೊಮ್ಯಾಟೊ ಕುಚ್ ಕುಚ್ ಮೇಲೆ ಆಗ್ತದೆ “ಕುಚ್ ಕುಚ್”: ಮನೆಲೇ ಮಾಡಿ ನೋಡಿ ಈ ರುಚಿಕರ ಪಾಕ

ಟೊಮ್ಯಾಟೊ ಕುಚ್ ಕುಚ್ ಅನ್ನೋದು ಒಂದು ರುಚಿಕರ ಪಾಕ. ಬ್ಯಾಚುಲರ್ ಊಟಕ್ಕೆ ಈ ಕುಚ್ ಕುಚ್ ಮಾಡಿದರೆ ಸಾಕು ಹೊಟ್ಟೆಗೂ ಈ ರುಚಿಯ ಮೇಲೆ ಕುಚ್ ಕುಚ್ ಆಗಲು ಶುರು. ಕುಚ್ ಕುಚ್ ಮಾಡೋದು ಹೇಗೆ?  ಇಲ್ಲಿದೆ ಮಾಹಿತಿ. ಏನೇನ್ ಬೇಕು ಟೊಮ್ಯಾಟೊ 1, ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಒಗ್ಗರಣೆಗೆ ತಕ್ಕಷ್ಟು, ಅರಿಶಿನ, ಹಸಿಮೆಣಸಿನಕಾಯಿ, ಉಪ್ಪು ಮಾಡುವ ವಿಧಾನ: ಒಂದು ಟೊಮ್ಯಾಟೊವನ್ನು ಉದ್ದುದ್ದವಾಗಿ, ತೆಳ್ಳಗೆ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ […]

ಪೋಹಾ ಮಿಕ್ಚರ್ ತಿಂದಿದ್ದೀರಾ?: ಸಿಂಪಲ್ಲಾಗ್ ಮಾಡಿ ತಿನ್ನಿ ಟೇಸ್ಟಿ ಮಿಕ್ಚರ್

  ಹೊರಗೆ ಜಿಟಿ ಜಿಟಿ ಮಳೆ ಬೀಳೋವಾಗ ಈ ಪೋಹಾ ಮಿಕ್ಚರ್ ಮಾಡಿ ಚಪ್ಪರಿಸಿ ತಿನ್ನೋ ಸುಖವೇ ಬೇರೆ. ಸಿಂಪಲ್ಲಾಗ್ ಮಾಡಿ ಟೇಸ್ಟಿಯಾಗಿ ತಿನ್ನಬಹುದು. ಆಗಾಗ ಪಾಕಲೋಕದಲ್ಲಿ ವಿಭಿನ್ನ ಪ್ರಯೋಗ ಮಾಡುವ ಕಾರ್ಕಳದ ಡಾ.ಹರ್ಷಾ ಕಾಮತ್ ಪೋವಾ ಮಿಕ್ಚರ್ ಮಾಡುವ  ವಿಧಾನವನ್ನು ಉಡುಪಿ X ಪ್ರೆಸ್ ನ “ಸವಿಯೋಣ ಬಾರಾ”ವಿಭಾಗದಲ್ಲಿ  ಹೇಳಿಕೊಟ್ಟಿದ್ದಾರೆ.   ಏನೇನ್ ಬೇಕು? ದಪ್ಪ ಅವಲಕ್ಕಿ ಎರಡು ಕಪ್‌, ನೆಲಕಡ್ಲೆ 1/4 ಕಪ್‌ ರುಚಿಗೆ ತಕ್ಕಷ್ಟು ಉಪ್ಪು, ಹಳದಿ, ಅಚ್ಚಕಾರದ ಪುಡಿ, ಸಾಂಬಾರು ಹುಡಿ […]

ಹೊಟ್ಟೆ ತುಂಬಾ ತಿನ್ನಿ ಮೊಟ್ಟೆ ಪರೋಟ : ಭಾರೀ ಟೇಸ್ಟ್ ಉಂಟು, ಮಾಡೋ ಸುಲಭ ವಿಧಾನ ಇಲ್ಲುಂಟು

ಎಗ್ ಪರೋಟ ಹೇಗ್ ಮಾಡೋದು?ಮೊದಲು ಚಪಾತಿಯನ್ನು ಬೇಯಿಸಿ. ಸಜ್ವಾನ್ ಚಟ್ನಿಯನ್ನು ಚಪಾತಿಯ ಮೇಲೆ ಲೇಪಿಸಿ ನಾಲ್ಕು ಬದಿಯನ್ನು ಫೋಲ್ಡ್ ಮಾಡಿರಿ . ಇದನ್ನು ಕಾವಲಿಯ ಮೇಲೆ ಇಟ್ಟು ಒಂದು ಹಸಿ ಮೊಟ್ಟೆಯನ್ನು ಹಾಕಿರಿ. ಅದರ ಮೇಲೆ ಸ್ವಲ್ಪ ಈರುಳ್ಳಿ , ಸ್ವಲ್ಪ ಟೊಮೆಟೊ ,ಹಸಿ ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಈರುಳ್ಳಿ ಉಪ್ಪು ಪೆಪ್ಪರ್ ಪೌಡರ್ನ್ನು ಹಾಕಿ ಮುಚ್ಚಿರಿ. ಗ್ಯಾಸ್ಸ್ಟವ್ ಸಿಮ್ನಲ್ಲಿಟ್ಟು ಐದು ನಿಮಿಷ ಬೇಯಿಸಿರಿ.  ಎಗ್ ಪರೋಟ ಸವಿಯಲು ಸಿದ್ಧ   -ಡಾ.ಹರ್ಷಾ ಕಾಮತ್  

ಹುಳಿ ಹುಳಿ ಅಪ್ಪೇಹುಳಿ!: ಉತ್ತರ ಕನ್ನಡದ ಸ್ಪೆಷಲ್ ರುಚಿಯನ್ನು ಈ ಮಳೆಗಾಲದಲ್ಲಿ ಮಾಡಿ ಸವೀರಿ

ಮಾವಿನ ಹಣ್ಣು ತಿನ್ನಲು ತುಂಬಾ ರುಚಿ.‌ ಮಾವು ಮೆಚ್ಚದವರು ಯಾರಿದ್ದಾರೆ?! ಅಬಾಲ ವೃದ್ಧರಿಗೂ ಮಾವು ಪ್ರಿಯ. ಇಂಥ ಮಾವಿನ ಕಾಯಿಂದ ತಯಾರಿಸುವ ರುಚಿಯಾದ ರೆಸಿಪಿಯೊಂದರ ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಗುರುಗಣೇಶ್ ಭಟ್ ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಈ ಸ್ಪೆಷಲ್ ಅಪ್ಪೇಹುಳಿಯನ್ನು ಈ ಮಳೆಗಾಲದಲ್ಲಿ ಮಾಡಿ ತಿನ್ನಲು ಮರೆಯಬೇಡಿ. ಅಪ್ಪೇಹುಳಿ ಮಾಡೋದ್ ಹೇಗೆ? ಅಪ್ಪೇಹುಳಿ ತಯಾರಿಸಲು ಏನೂ ಬೇಡ ಅಂದರೂ ನಡೆಯುತ್ತೆ!ಮಾವಿನ ಕಾಯಿ, ನೀರು, ನಾಲ್ಕು ಮೆಣಸು, ಒಂದು ಒಗ್ಗರಣೆ-  ಇಷ್ಟಿದ್ದರೆ ಸಾಕು! ರುಚಿಯಾದ […]