ರಾಜ್ಯದ ಪ್ರಮುಖ ನಗರಗಳ ನಡುವೆ ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ!

ಹುಬ್ಬಳ್ಳಿ: ಕರ್ನಾಟಕದ ಪ್ರಮುಖ ನಗರಗಳ ನಡುವೆ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಶೇಷ ರೈಲುಗಳ ನಿಯಮಿತ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.07339/ 07340 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ–ಕೆಎಸ್‌ಆರ್ ಬೆಂಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು 20687/ 20688 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ–ಕೆಎಸ್‌ಆರ್ ಬೆಂಗಳೂರು– ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಎಂದು ನಿಯಮಿತಗೊಳಿಸಲಾಗುತ್ತದೆ. 20687 ಸಂಖ್ಯೆಯ ರೈಲು ಡಿಸೆಂಬರ್ 8ರಿಂದ ರಾತ್ರಿ 11.15ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 6.50ಕ್ಕೆ […]

ಕೀನ್ಯಾ: ಲಘು ವಿಮಾನ ಪತನ; 12 ಮಂದಿ ಮೃತ್ಯು

ಕೀನ್ಯಾದಲ್ಲಿ ಲಘು ವಿಮಾನ ಪತನಗೊಂಡು ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ಪ್ರದೇಶವಾದ ಕ್ವಾಲೆ ಕೌಂಟಿಯ (Kenya’s Kwale County) ಸಿಂಬಾ ಗೋಲಿನಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ವಿಮಾನ ಪತನಗೊಂಡಿದೆ. ವಿಮಾನವು 0530Z ನಲ್ಲಿ ಡಯಾನಿಯಿಂದ ಹೊರಟು ಕಿಚ್ವಾ ಟೆಂಬೊಗೆ (Diani to Kichwa Tembo) ಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದಾಗ ದುರಂತ ಸಂಭವಿಸಿದೆ. ಇಂದು ಬೆಳಗ್ಗೆ 8:30 ರ ಸುಮಾರಿಗೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಡಯಾನಿ ವಾಯುನೆಲೆಯಿಂದ ಸುಮಾರು 40 ಕಿಲೋಮೀಟರ್ […]

ದೆಹಲಿಯ ವಿಮಾನ ನಿಲ್ದಾಣದಲ್ಲೇ ಹೊತ್ತಿ ಉರಿದ ಬಸ್

ನವದೆಹಲಿ: ದೆಹಲಿಯ ವಿಮಾನ ನಿಲ್ದಾಣದಲ್ಲೇ ಬಸ್ ಹೊತ್ತಿ ಉರಿದಿದೆ. ವಿಮಾನದ ಪಕ್ಕದಲ್ಲೇ ಬಸ್ ಹೊತ್ತಿ ಉರಿದಿದ್ದರಿಂದ ಕೆಲ ಕಾಲ ಆತಂಕಕ್ಕೂ ಕಾರಣವಾಗಿತ್ತು. ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3ನಲ್ಲಿ ಈ ಘಟನೆ ಸಂಭವಿಸಿದೆ. ಪ್ರಯಾಣಿಕರನ್ನು ಕರೆದೊಯ್ಯುವ ಬಸ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ಬಸ್ಸಿಗೆ ವ್ಯಾಪಿಸಿದ್ದರಿಂದ ಧಗಧಗಿಸಿ ಹೊತ್ತಿ ಉರಿದಿದೆ.

RSS ಪಥಸಂಚಲನ ನಿರ್ಬಂಧಿಸಲು ಮುಂದಾಗಿದ್ದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ: ಹೈಕೋರ್ಟ್ ಮಧ್ಯಂತರ ತಡೆ

ಆರ್‌ಎಸ್‌ಎಸ್‌ ಪಥಸಂಚಲನ ನಿರ್ಬಂಧಿಸಲು ಮುಂದಾಗಿದ್ದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಖಾಸಗಿ ಸಂಘಟನೆಗಳು ಸರ್ಕಾರಿ ಸ್ಥಳ ಬಳಕೆಗೆ ಅನುಮತಿ ಪಡೆಯಬೇಕು ಎಂಬ ಸರ್ಕಾರದ ನಿಯಮಕ್ಕೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಖಾಸಗಿ ಸಂಘಟನೆಯೊಂದು ಸರ್ಕಾರದ ನಿರ್ಬಂಧವನ್ನು ಪ್ರಶ್ನೆ ಮಾಡಿ ಹೈಕೋರ್ಟ್‌ ಮೊರೆ ಹೋಗಿತ್ತು. ಈ ಹಿನ್ನೆಲೆ ವಿಚಾರಣೆ ನಡೆಸಿದ ಧಾರವಾಡ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸರ್ಕಾರದ ನಿಯಮಕ್ಕೆ ತಡೆ ನೀಡಿದ್ದಾರೆ. ವಿಚಾರಣೆಯನ್ನು ನವೆಂಬರ್ 2 ನೇ ವಾರಕ್ಕೆ ಮುಂದೂಡಿದ್ದಾರೆ. “19(1)(A) ಮತ್ತು (B) ವಿಧಿಯ ಅಡಿಯಲ್ಲಿ […]

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಮೂವ್ವರು ಹೆಂಡತಿಯರ ಗಂಡ!

ಕಲಬುರಗಿ: ಚಿಂಚೊಳ್ಳಿ ತಾಲೂಕಿನ ಮಿರಿಯಾಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಲ್ಲು ಪರಸಿಯ ಪಾಲಿಶಿಂಗ್ ಮಾಲೀಕನೊಬ್ಬ ತನ್ನ ಪಾಲಿಸಿಂಗ್‌ಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಚಿಂಚೋಳಿ ಸಿಪಿಐ ಕಪಿಲದೇವ ತಿಳಿಸಿದ್ದಾರೆ. ಮಿರಿಯಾಣ ಗ್ರಾಮದಲ್ಲಿರುವ ಕಲ್ಲು ಪರಸಿ ಪಾಲಿಶಿಂಗ್‌ದಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ತಂದೆ ತಾಯಿ ಜೊತೆ ಮಗಳಿದ್ದಳು. ಕಾಮುಕ ಮಾಲೀಕ ಸದ್ಧಾಂ ಅಬ್ದುಲ್ ಹಮೀದ್ ಅಲಿಯಾಸ್ ಇಮ್ರಾನ್ (33) ಎಂಬಾತ […]