ಮಲಾಡ್ ಕನ್ನಡ ಸಂಘದ ವತಿಯಿಂದ ಒಳಾಂಗಣ ಕ್ರೀಡಾ ಸ್ಪರ್ಧೆ

ಮಲಾಡ್: ಯುವಕರಲ್ಲಿ ಸಂಘದ ಕಾರ್ಯ ಚಟುವಟಿಕೆಯ ಜೊತೆಗೆ ಕ್ರೀಡಾಸಕ್ತಿ ಬೆಳೆಯಬೇಕೆಂಬ ಉದ್ದೇಶದಿಂದ ಮಲಾಡ್ ಕನ್ನಡ ಸಂಘವು ಪ್ರತಿವರ್ಷ ಸಂಘದ ಸದಸ್ಯರ ಮಕ್ಕಳಿಗೆ ಮತ್ತು ಯುವಕರಿಗೆ ಒಳಾಂಗಣ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಕ್ರೀಡೆ ಮನಸ್ಸನ್ನು ಕ್ರಿಯಾಶೀಲಗೊಳಿಸುವ ಮೂಲಕ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತದೆ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸ್ಫೂರ್ತಿಯಾಗಿದೆ ಎಂದು ಮಲಾಡ್ ಕನ್ನಡ ಸಂಘದ ಅಧ್ಯಕ್ಷ ನ್ಯಾಯವಾದಿ ಜಗದೀಶ್ ಎಸ್ ಹೆಗ್ಡೆ ಅಭಿಪ್ರಾಯಪಟ್ಟರು. ಡಿ. 10 ರಂದು ಮಲಾಡ್ ಮಾರ್ವೆ ರೋಡ್ ನ ಯುನಿಟಿ […]

ರಾಜ್ಯದಲ್ಲಿ ಹೆಚ್ಚುವರಿ 13,911 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸರ್ಕಾರದ ಅನುಮೋದನೆ

ಬೆಳಗಾವಿ: ರಾಜ್ಯದಲ್ಲಿ ಹೆಚ್ಚುವರಿಯಾಗಿ 13,911 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವ ಫಾಕ್ಸ್ಕಾನ್‌ ಪ್ರಸ್ತಾವನೆಯನ್ನು ಸರ್ಕಾರವು ಅನುಮೋದಿಸಿದೆ. ಸೆಮಿ ಕಂಡಕ್ಟರ್ ಕ್ಷೇತ್ರದ ದೈತ್ಯ ಸಂಸ್ಥೆಯಾಗಿರುವ ಫಾಕ್ಸ್ಕಾನ್, ಈಗಾಗಲೇ ರಾಜ್ಯದಲ್ಲಿ 8,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಅನುಮೋದನೆ ಪಡೆದಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜೆಎಸ್‌ಡಬ್ಲ್ಯು ರಿನ್ಯೂ ಎನರ್ಜಿ ಫೋರ್ ಲಿಮಿಟೆಡ್ (ರೂ 4,960 ಕೋಟಿ ), ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್ (ರೂ 3,804 ಕೋಟಿ ), ಟೊಯೊಟಾ ಕಿರ್ಲೋಸ್ಕರ್ ಮೋಟರ್ ಪ್ರೈವೇಟ್ […]

ಆಂಧ್ರ ಸರ್ಕಾರದ ಆದೇಶ ರದ್ದುಗೊಳಿಸಿದ ಜಿಲ್ಲಾ ಕೋರ್ಟ್​ : ಮಾರ್ಗದರ್ಶಿ ಚಿಟ್​ಫಂಡ್​ ಆಸ್ತಿ ಜಪ್ತಿ

ಹೈದರಾಬಾದ್​: ಮೇ 29ರ ಜಿಒ 104, ಜೂನ್ 15ರ ಜಿಒ 116 ಮತ್ತು ಜುಲೈ 27 ರ ಜಿಒ 134ರ ಪ್ರಕಾರ 1,050 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಿಐಡಿಗೆ ಸರ್ಕಾರ ಅನುಮತಿ ನೀಡಿತ್ತು. ಈ ಕುರಿತ ಅರ್ಜಿಗಳನ್ನು ಗುಂಟೂರು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ವೈ.ವಿ.ಎಸ್.ಬಿ.ಜಿ. ಪಾರ್ಥಸಾರಥಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಗ್ರಾಹಕರಿಗೆ ಪಾರದರ್ಶಕ ಸೇವೆ ನೀಡುತ್ತಿರುವ ಮಾರ್ಗದರ್ಶಿ ಚಿಟ್​ಫಂಡ್‌ನ 1,050 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲು ಕೋರಿ ಆಂಧ್ರಪ್ರದೇಶ ಸಿಐಡಿ ಸಲ್ಲಿಸಿದ್ದ […]

2023 ರಲ್ಲಿ ಗೂಗಲ್ ಅತಿ ಹೆಚ್ಚು ಸರ್ಚ್ ಆದ ಕ್ರಿಕೆಟಿಗ ಎಂಬ ಖ್ಯಾತಿಗೆ ಶುಭಮನ್ ಗಿಲ್

ಹೈದರಾಬಾದ್​: ‘ಗೂಗಲ್ ಇಂಡಿಯಾ’ ಸೋಮವಾರ ಈ ವರ್ಷ ಗೂಗಲ್‌ನಲ್ಲಿ ದೇಶದ ಟ್ರೆಂಡಿಂಗ್ ಪಟ್ಟಿಯನ್ನು ಬಹಿರಂಗಪಡಿಸಿದೆ. ಗಿಲ್ ನಂತರ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ, ಮೊಹಮ್ಮದ್ ಶಮಿ, ಗ್ಲೆನ್ ಮ್ಯಾಕ್ಸ್‌ವೆಲ್, ಸೂರ್ಯಕುಮಾರ್ ಯಾದವ್ ಮತ್ತು ಟ್ರಾವಿಸ್ ಹೆಡ್ ಇದ್ದಾರೆ. ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ 2023 ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಕ್ರೀಡಾಪಟು ಆಗಿದ್ದಾರೆ.2023 ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಕ್ರೀಡಾಪಟುಗಳಲ್ಲಿ ಶುಭಮನ್ ಗಿಲ್ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್ 2024 ರಲ್ಲಿ ಗುಜರಾತ್ […]

ಕೇಂದ್ರ ಸಚಿವ ಮಾಂಡವಿಯಾ : 300 ಬಿಲಿಯನ್​ ಡಾಲರ್​ ತಲುಪಲಿದೆ ಭಾರತದ ಜೈವಿಕ ತಂತ್ರಜ್ಞಾನ ಉದ್ಯಮ

ಅಹಮದಬಾದ್​: ಜೈವಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ವರ್ಚುಯಲ್​ ಆಗಿ ಮಾತನಾಡಿರುವ ಅವರು, 2025ರ ಹೊತ್ತಿಗೆ ಈ ಉದ್ಯಮದ ಮೌಲ್ಯ 150 ಬಿಲಿಯನ್​ ಡಾಲರ್​ ಆಗಲಿದ್ದು, 2030ರ ಹೊತ್ತಿಗೆ 300 ಬಿಲಿಯನ್​ ಡಾಲರ್​ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಆರೋಗ್ಯ ಚಿಕಿತ್ಸೆಯ ಮೂಲಾಧಾರವಾಗಿರುವ ಭಾರತದ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಾಜಿ) ಉದ್ಯಮವೂ ಕಳೆದ ಎಂಟು ವರ್ಷಗಳಿಂದ 80 ಬಿಲಿಯನ್​ ಡಾಲರ್​ಗೂ ಹೆಚ್ಚು ಬೆಳವಣಿಗೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.2025ರ ಹೊತ್ತಿಗೆ ಈ ಉದ್ಯಮದ ಮೌಲ್ಯ 150 ಬಿಲಿಯನ್​ […]