ಬೆಂಗಳೂರಿನಲ್ಲಿ ಬೈಂದೂರು ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ: ಕಠಿಣ ಕ್ರಮಕ್ಕೆ ಒಕ್ಕೊರಲ ಆಗ್ರಹ

ಬೆಂಗಳೂರು: ಹೊಟ್ಟೆಪಾಡಿಗೆಂದು ಊರು ಬಿಟ್ಟು ಪರವೂರು ಸೇರಿ ನಿಯತ್ತಿನಿಂದ ದುಡಿಯುತ್ತಿದ್ದ ಯುವಕರ ಮೇಲೆ ಸಿಗರೇಟಿನ ಹಣ ಕೇಳಿದರೆನ್ನುವ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒಕ್ಕೊರಲ ಆಗ್ರಹ ಕೇಳಿ ಬರುತ್ತಿದೆ. ಬೆಂಗಳೂರಿನ ಕುಂದಲಹಳ್ಳಿ ಎಚ್.ಎ.ಎಲ್ ಸಮೀಪ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಂದಾಪುರ ಬೈಂದೂರು ಮೂಲದ ನವೀನ್ ಕುಮಾರ್, ಪ್ರಜ್ವಲ್ ಶೆಟ್ಟಿ, ನಿತಿನ್ ಶೆಟ್ಟಿ ಎಂಬುವರ ಮೇಲೆ  ಗುರುವಾರದಂದು ಬೆಂಗಳೂರಿನ ಪುಡಿ ರೌಡಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ದೃಶ್ಯಗಳ […]

ಸೈಕ್ಲೋನ್ ಮ್ಯಾಂಡಸ್ ಪರಿಣಾಮ: ಕರ್ನಾಟಕದ ಹಲವೆಡೆ ಮಳೆ ಸಾಧ್ಯತೆ

ಬೆಂಗಳೂರು: ಋತುವಿನ ಮೊದಲ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಪೂರ್ವ ಕರಾವಳಿಯ ತಮಿಳುನಾಡು, ಪುದುಚೇರಿ, ಮತ್ತು ಆಂಧ್ರಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸೈಕ್ಲೋನ್ ಪರಿಣಾಮಗಳನ್ನು ಎದುರಿಸಲು ಆಡಳಿತವು ಸರ್ವ ಸನ್ನದ್ದವಾಗಿದೆ. ಮ್ಯಾನ್-ಡೌಸ್ ಎಂದು ಕರೆಯಲಾಗುವ ಈ ಸೈಕ್ಲೋನ್ ಗೆ ಅರೇಬಿಕ್ ಭಾಷೆಯಲ್ಲಿ ‘ನಿಧಿ ಪೆಟ್ಟಿಗೆ’ ಎನ್ನುವ ಅರ್ಥವಿದೆ. ಈ ಸೈಕ್ಲೋನ್ ನ ಪರಿಣಾಮ ಕರ್ನಾಟಕದ ಬೆಂಗಳೂರಿನಲ್ಲಿಯೂ ಕಾಣಿಸಿಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಡಿಸೆಂಬರ್ 9 ರ ಮಧ್ಯರಾತ್ರಿ ವೇಳೆಗೆ ಈ ಸೈಕ್ಲೋನ್ ಗಂಟೆಗೆ […]

ಸಾವಯವ ನುಗ್ಗೆ ಕೃಷಿಕ ಬಸಯ್ಯ ಹಿರೇಮಠ ಇವರಿಗೆ ಶ್ರೇಷ್ಠ ಉದ್ಯಮಿ ಪ್ರಶಸ್ತಿ

ಕುಷ್ಟಗಿ: ಸಾವಯವ ಕೃಷಿ ಮೂಲಕ ಗಮನ ಸೆಳೆದು, ನಂದಿ ಆಗ್ರೋ ಫಾರ್ಮ್ ಸ್ಥಾಪಿಸಿ ಸರ್ವಜನಿಕರಿಗೆ ಉಚಿತ ಮತ್ತು ರಿಯಾಯತಿ ದರದಲ್ಲಿ ಉತ್ಪನ್ನ ಮಾರಾಟಮಾಡುತ್ತಿರುವ ಕೃಷಿಕ ಬಸಯ್ಯ ಹಿರೇಮಠ ಇವರಿಗೆ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ನೀಡಲಾಗುವ ‘ಶ್ರೇಷ್ಠ ಉದ್ಯಮಿ’ ಪ್ರಶಸ್ತಿ ಲಭ್ಯವಾಗಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬಸಯ್ಯನವರು ನುಗ್ಗೆ ಕೃಷಿಯ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಇವರು ಪ್ರಸ್ತುತ ಗಂಗಾವತಿಯಲ್ಲಿ ವಾಸವಾಗಿದ್ದಾರೆ. ನುಗ್ಗೆ ಕೃಷಿಯಲ್ಲಿ ಲಕ್ಷಾಂತರ ರೂ ವಹಿವಾಟು ಹೊಂದಿರುವ ಇವರು ನುಗ್ಗೆ ಎಣ್ಣೆ, […]

ಮುಸ್ಲಿಂ ಬಾಲಕಿಯರ ಪ್ರತ್ಯೇಕ ಶಾಲೆ ವಿಚಾರ ಚರ್ಚೆ ಆಗಿಲ್ಲ; ವಕ್ಫ್ ಬೋರ್ಡ್ ಅಧ್ಯಕ್ಷರ ಹೇಳಿಕೆ ವೈಯಕ್ತಿಕ: ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಮುಸ್ಲಿಂ ಬಾಲಕಿಯರಿಗಾಗಿಯೇ 10 ಹೊಸ ಕಾಲೇಜುಗಳನ್ನು ಸ್ಥಾಪಿಸುವ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ವ್ಯಾಪಕ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದರಿಂದ ವಿವಾದ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಈ ವಿಚಾರ ತನಗೆ ತಿಳಿದಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ 10 ಕಾಲೇಜುಗಳನ್ನು ತೆರೆಯಲು ಸರ್ಕಾರವು ಒಪ್ಪಿಗೆ ನೀಡಿದೆ ಎಂಬ ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಶಾಫ್ತಿ ಸಾದಿ ಅವರ ಹೇಳಿಕೆಯನ್ನು ಕರ್ನಾಟಕ […]

ಮಾ.9 ರಿಂದ 29 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಅಂತಿಮ ವೇಳಾಪಟ್ಟಿ ಹೀಗಿದೆ

ಬೆಂಗಳೂರು: ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಕಟಿಸಿದೆ. ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವ ಮಂಡಳಿಯ ನಿರ್ದೇಶಕರು, ಮಾರ್ಚ್ 2023 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ. 09 ರಿಂದ ಮಾ.‌ 29 ರವೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಪರೀಕ್ಷಾ ಅಂತಿಮ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣ www.sslc.karnataka.gov.in ನಲ್ಲಿ ಪ್ರಕಟಿಸಲಾಗಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ […]