ದೇಶದ ಅತ್ಯಂತ ಕಿರಿಯ ಮಿಲಿಯನೇರ್!! ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
ಬೆಂಗಳೂರು: ಇನ್ಫೋಸಿಸ್ (Infosys) ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಲೇಖಕಿ ಸುಧಾ ಮೂರ್ತಿ ಅವರ ಮಗ ರೋಹನ್ ಮೂರ್ತಿ ಮತ್ತು ಸೊಸೆ ಅಪರ್ಣಾ ಕೃಷ್ಣನ್ ಅವರಿಗೆ ನವೆಂಬರ್ 10, 2023 ರಂದು ಜನಿಸಿದ ಏಕಾಗ್ರಹ ರೋಹನ್ ಮೂರ್ತಿ ದೇಶದ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾನೆ. ನಾಲ್ಕು ತಿಂಗಳ ಮಗುವೀಗ ಇನ್ಫೋಸಿಸ್‌ನಲ್ಲಿ 0.04 ರಷ್ಟು ಷೇರುಗಳ ಮಾಲೀಕನಾಗಿದ್ದಾನೆ. ಏಕೆಂದರೆ, 240 ಕೋಟಿ ಮೌಲ್ಯದ ಷೇರುಗಳನ್ನು ನಾರಾಯಣ ಮೂರ್ತಿ ಮೊಮ್ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ‘ಸಿಂಟಾಕ್ಸಿಯಾ’
ಬೆಂಗಳೂರು: ಸಂತ ಜೋಸೆಫ್ ಯೂನಿವರ್ಸಿಟಿಯ ವಾರ್ಷಿಕ ಕಾರ್ಯಕ್ರಮವಾದ ‘ಸಿಂಟಾಕ್ಸಿಯಾ’ ಮಾರ್ಚ್ 12 ಮತ್ತು 13ರಂದು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ನಡೆಯಿತು. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚಿನ ಈವೆಂಟ್ ಗಳು ನಡೆದವು. ಎಐ ನೆಕ್ಸಸ್ ಹೆಲ್ತ್ಕೇರ್‌ನ ಭಾರತ ಮತ್ತು ಉಪಖಂಡದ ವ್ಯವಸ್ಥಾಪಕ ಮತ್ತು ಸಂಸ್ಥಾಪಕ ಪೀಟರ್ ಪುಷ್ಪರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಐಟಿ ವಿದ್ಯಾರ್ಥಿಗಳ ಪರಿಶ್ರಮದ ಪ್ರಯತ್ನಗಳನ್ನು ಶ್ಲಾಘಿಸಿ ಅವರ ಸಾಧನೆಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸ್ಕೂಲ್ ಆಫ್ ಇನ್ಪರ್ಮೆಶನ್ ಟೆಕ್ನಾಲಜಿ, […]
ಆಟವಾಡುತ್ತಿದ್ದ ಮಕ್ಕಳಿಗೆ ದೊರೆಯಿತು ಚೋಳರ ಕಾಲದ 12 ನೇ ಶತಮಾನದ ಅಪರೂಪದ ಮುರುಗನ್ ವಿಗ್ರಹ!!
ಚೆನ್ನೈ: ತಮಿಳುನಾಡಿನ ತಿರುವಲಂಗಾಡು ಎಂಬ ಪ್ರದೇಶದ ಬಳಿ ಕೊಸಸ್ತಲೈಯಾರ್ ನದಿಪಾತ್ರದಲ್ಲಿ ಆಟವಾಡುತ್ತಿದ್ದ ಚಿಕ್ಕ ಹುಡುಗರ ಗುಂಪೊಂದಕ್ಕೆ 12 ನೇ ಶತಮಾನದ ಅಪರೂಪದ ಮುರುಗನ್ ಪ್ರತಿಮೆ ದೊರೆತಿದೆ. 150 ಕೆಜಿ ತೂಕ ಮತ್ತು 3.5 ಅಡಿ ಎತ್ತರದ ಮೂರ್ತಿ ವಿಶಿಷ್ಟ ಲಕ್ಷಣಗಳು ಮತ್ತು ಹತ್ತಿರದ ಕಲಾಕೃತಿಗಳೊಂದಿಗೆ ಮುರುಗನನ್ನು ‘ಬ್ರಹ್ಮಶಾಸ್ತ’ ಎಂದು ಚಿತ್ರಿಸುತ್ತದೆ. ಪುರಾತತ್ವ ಇಲಾಖೆಯು ವಿಗ್ರಹವನ್ನು ಸಂರಕ್ಷಿಸಿ ಸಾರ್ವಜನಿಕ ವೀಕ್ಷಣೆಗೆ ಇಟ್ಟಿದೆ. ಬ್ರಹ್ಮಶಾಸ್ತ ಎಂದು ಕರೆಯಲ್ಪಡುವ ದೇವತೆಯ ಅಪರೂಪವಾಗಿ ಕಾಣುವ ಅಭಿವ್ಯಕ್ತಿಯನ್ನು ಚಿತ್ರಿಸುವ ಜಪಮಾಲೆ ಮತ್ತು ಕಮಂಡಲದಿಂದ ಅಲಂಕರಿಸಲ್ಪಟ್ಟ […]
ರಾಜ್ಯಸಭೆ ಸದಸ್ಯೆಯಾಗಿ ಸುಧಾ ಮೂರ್ತಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ
ನವದೆಹಲಿ: ಲೇಖಕಿ, ಸಮಾಜ ಸೇವಕಿ, ಇನ್ಫೋಸಿಸ್ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ಇಂದು ಗುರುವಾರ ದೆಹಲಿಯಲ್ಲಿ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು ತಮ್ಮ ಮಾತೃಭಾಷಾ ಒಲವನ್ನು ವ್ಯಕ್ತಪಡಿಸಿದರು. ಮೂಲತಃ ಇಂಜಿನಿಯರ್ ಆಗಿರುವ ಸುಧಾ ಮೂರ್ತಿ ಅವರು ತಮ್ಮ ಪತಿ ಎನ್ ಆರ್ ನಾರಾಯಣ ಮೂರ್ತಿ ಅವರ ಸಮ್ಮುಖದಲ್ಲಿ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಸಂಸತ್ ಭವನದ ತಮ್ಮ ಕಚೇರಿಯಲ್ಲಿ ಪ್ರಮಾಣ […]
ದಶಕಗಳ ಬಳಿಕ ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ಲೈಮ್ ಡಿಸೀಸ್: ಬ್ಯಾಕ್ಟೀರಿಯಾದಿಂದ ಹರಡುವ ರೋಗದ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ
ತಿರುವನಂತಪುರ: ಬರೋಬ್ಬರಿ ಹತ್ತು ವರ್ಷದ ಬಳಿಕ ಕೇರಳ ರಾಜ್ಯದ ಎರ್ನಾಕುಳಂನಲ್ಲಿ ಲೈಮ್ ಡಿಸೀಸ್ (Lyme Disease) ಪತ್ತೆಯಾಗಿದೆ. ಅತ್ಯಂತ ಅಪರೂಪದ ಈ ಕಾಯಿಲೆ ಬೊರೆಲಿಯಾ ಬರ್ಗ್‌ಡೋರ್‍ಫೆರಿ ಎಂಬ ಬ್ಯಾಕ್ಟೀರಿಯಾ ಮೂಲಕ ಹರಡುತ್ತಿದ್ದು, ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ 56 ವರ್ಷದ ವ್ಯಕ್ತಿಯೊಬ್ಬರಲ್ಲಿ ಈ ರೋಗವನ್ನು ವೈದ್ಯರು ದೃಢಪಡಿಸಿದ್ದಾರೆ. ತೀವ್ರ ರೀತಿಯ ಜ್ವರ, ಮೊಣಕಾಲಿನ ಊತದಿಂದ ಡಿಸೆಂಬರ್ ತಿಂಗಳಿನಲ್ಲಿ ಈ ರೋಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕದ ದಿನಗಳಲ್ಲಿ ಅವರಿಗೆ ಅಪಸ್ಮಾರದ ಲಕ್ಷಣ ಕಾಣಿಸಿಕೊಂಡಿತ್ತು. ಬಹಳಷ್ಟು ಚಿಕಿತ್ಸೆ ಬಳಿಕವೂ ಗುಣಮುಖವಾಗದ […]