ಕನ್ನಡದ ಕೋಟ್ಯಾಧಿಪತಿಯಲ್ಲಿ ಪವರ್ ಸ್ಟಾರ್ ನ್ನು ಬೆರಗುಗೊಳಿಸಿದ ಕರಾವಳಿಯ power boy ವೈಭವ ಶೆಟ್ಟಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರೂಪಣೆಯ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಷೋ ದೇಶಾದ್ಯಂತ ಮನೆಮಾತಾಗಿದೆ. ಮನೋರಂಜನೆಯ ಜತೆ ಜತೆಗೆ ಮನೋವಿಕಾಸ, ಸಾಮಾನ್ಯಜ್ಞಾನ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಪ್ರಸಿದ್ಧಿಪಡೆದಿದೆ. ಕನ್ನಡ ಕೋಟ್ಯಾಧಿಪತಿಯಲ್ಲಿ ಭಾಗವಹಿಸಿ ಪವರ್ ಸ್ಟಾರ್ ಎದುರು ಪವರ್ ಪುಲ್ ಹಾಟ್ ಸೀಟ್ ನಲ್ಲಿ ಕುಳಿತು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಸಾವಿರ- ಹತ್ತುಸಾವಿರ, ಲಕ್ಷ ಹೀಗೆ ಕಾಂಚಾನವನ್ನು ಜೇಬಿಗಿಳಿಸಿಕೊಳ್ಳಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ. ಆದರೆ ಈ ಅವಕಾಶ ಲಕ್ಷದಲ್ಲಿ ಒಬ್ಬರಿಗೆ ಸಿಗುವಂತದ್ದು. ಆದರೆ […]
ಇವರು ರಂಗು ರಂಗಿನ ರಂಗವಲ್ಲಿ ಅರಳಿಸ್ತಾರೆ: ರಂಗೋಲಿಯಲ್ಲೇ ಬದುಕು ಕಟ್ಟಿಕೊಂಡ ಮೂಡಬಿದ್ರೆಯ ಯುವ ಕಲಾವಿದ ಉಪೇಂದ್ರ ಭಟ್
ಆಧುನಿಕತೆಯ ನಾಗಾಲೋಟಕ್ಕೆ ಸಿಲುಕಿ ನಮ್ಮ ಸಂಪ್ರದಾಯಗಳು, ಸಂಸ್ಕೃತಿಗಳ ಆಚರಣೆ ಕಡಿಮೆಯಾಗುತ್ತ ಸಾಗುತ್ತಿವೆ. ಒಂದು ಕಾಲದಲ್ಲಿ ಮೆರೆಯುತ್ತಿದ್ದ ರಂಗೋಲಿ ಕಲೆ ಕೂಡ ತೆರೆಮರೆಗೆ ಸರಿಯುತ್ತಿರುವ ಕಾಲವಿದು. ವೈಟ್ ಕಾಲರ್‌ಗಳ ಉದ್ಯೋಗವೇ ಬೇಕು ಎನ್ನುವ ಇಂತಹ ಸಂದರ್ಭದಲ್ಲಿ ಇಲ್ಲೊಬ್ಬರು ಈ ಪೌರೋಹಿತ್ಯ ಹಾಗೂ ರಂಗೋಲಿಗಳಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.ಅವರೇ ಮೂಡಬಿದ್ರೆಯ ಉಪೇಂದ್ರ ಭಟ್. ತರಹೇವಾರಿ ರಂಗೋಲಿ ಬಿಡಿಸುವುದು ಇವರಿಗೆ ನೀರು ಕುಡಿದಷ್ಟೇ ಸಲೀಸು. ರಂಗೋಲಿಯಿಂದಲೇ ಇವರು ಫೇಮಸ್ಸು. ಭಟ್ಟರ ಕೈಯಲ್ಲಿ, ರಂಗಿನ ರಂಗವಲ್ಲಿ: ಬಾಲ್ಯದ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದ ಉಪೇಂದ್ರ ಭಟ್ಟರು […]
ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ: ಉಡುಪಿ ಮೂಲದ ಡಾ.ಪದ್ಮಾ ಗಡಿಯಾರ್ ಆಯ್ಕೆ
ಉಡುಪಿ ಮೂಲದ ಡಾ| ಪದ್ಮಾ ಗಡಿಯಾರ್. ಕನ್ನಡಿಗರು ಹೆಮ್ಮೆ ಪಡುವಂತಹ ಉಡುಪಿ ಮಂದಿ ಕೂಡ ಖುಷಿ ಪಡುವಂತಹ ಸಾಧನೆ ತೋರಿರುವುದು ಗಮನಾರ್ಹ ಸಂಗತಿ. ಡಾ.ಪದ್ಮಾ ಗಡಿಯಾರ್ ಬ್ರಿಸ್ಬೇನ್‌ನಲ್ಲಿ 2018 ಅಕ್ಟೋಬರ್ ನಲ್ಲಿ ಯು.ಎಸ್. ಮೂಲದ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ ಸೌತ್ ಇಂಡಿಯಾ ಯೂನಿವರ್ಸಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮುಂಬರುವ ಆಗಸ್ಟ್‌ನಲ್ಲಿ ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ ನಡೆಯಲಿದ್ದು, ಆ ಸ್ಪರ್ಧೆಯಲ್ಲಿಯೂ ಕಿರೀಟ ಮುಡಿಗೇರಿಸಿಕೊಂಡು ದೇಶಕ್ಕೆ, ನಮ್ಮ ಉಡುಪಿಗೆ ಇವರು ಕೀರ್ತಿ ತರುತ್ತಾರೆ […]
ಯಕ್ಷ ಲೋಕದ ಮಯೂರಿ, ಈ ಉಜಿರೆಯ ಕುವರಿ: ಯಕ್ಷಗಾನದ “ನವ್ಯ”ಕಾವ್ಯ
ಈಗೀಗ ಯುವತಿಯರು ಯಕ್ಷಗಾನ ಕ್ಷೇತ್ರದಲ್ಲಿ ಗಮನಸೆಳೆಯುವಂತಹ ಸಾಧನೆ ಮಾಡುತ್ತಿದ್ದಾರೆ. ಅದರಲ್ಲೂ ಕರಾವಳಿಯ ಹುಡುಗಿಯರು ಯಾರಿಗೇನೂ ಕಡಿಮೆ ಇಲ್ಲ ಎನ್ನುವಂತೆ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅಂತಹ ಕರಾವಳಿಯ ಸಾಧಕಿಯ ಪೈಕಿ ಉಜಿರೆ ನವ್ಯ ಕೂಡ ಯಕ್ಷಗಾನ ಕ್ಷೇತ್ರದಲ್ಲಿ ನವ್ಯ ಕಾವ್ಯ ಬರೆಯುತ್ತಿದ್ದಾರೆ. ಯಕ್ಷಗಾನ ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಕುಣಿದು ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ನವ್ಯ ಮಾರ್ಗ: ಬಹುಮುಖ ಪ್ರತಿಭೆ ನವ್ಯಹೊಳ್ಳ. ಯಕ್ಷಗಾನದ ಹಲವು ಪಾತ್ರಗಳಿಗೆ ಜೀವ ತುಂಬುತ್ತಿರುವ ಯುವ ಕಲಾವಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ […]
ಉಚಿತವಾಗಿ ಪೇಪರ್ ವಿತರಿಸ್ತಾರೆ, ಸ್ವಂತ ಹಣದಲ್ಲೇ ಬಡವರಿಗೆ ಚಿಕಿತ್ಸೆ ಕೊಡಿಸ್ತಾರೆ:ಇವರೇ ನಮ್ಮ ಕುಂದಾಪ್ರದ ಪೇಪರ್ ಆಚಾರ್ಯ:
ಸೆಲೆಬ್ರಿಟಿಗಳು ನಮ್ಮ ನಡುವೆಯೇ ಇರುತ್ತಾರೆ. ಆದರೆ ನಮಗೇ ಗೊತ್ತಿಲ್ಲದೇ ಸಮಾಜಕ್ಕೆ ಧ್ವನಿಯಾಗುತ್ತೇ ಇರುತ್ತಾರೆ. ಅಂತಹ ಸೆಲಿಬ್ರಿಟಿಯೊಬ್ಬರು ಇಲ್ಲಿದ್ದಾರೆ ನೋಡಿ. ಕುಂದಾಪುರದಲ್ಲಿ ಗಂಗೊಳ್ಳಿ ಶಂಕರ್ ಆಚಾರ್ಯರ ಹೆಸರು ಚಿರಪರಿಚಿತ. ಕುಂದಾಪುರದ ಜನರೆಲ್ಲಾ ಇವರನ್ನು ಪೇಪರ್ ಆಚಾರ್ಯ ಎಂದು ಕರೆಯುತ್ತಾರೆ. ಎಸೆಸ್ಸೆಲ್ಸಿ ಬಳಿಕ ಆಚಾರ್ಯರ ಕೈ ಹಿಡಿದದ್ದು ಪೇಪರ್ ಏಜೆನ್ಸಿ. ಅಂದಿನಿಂದ ಇಂದಿನವರೆಗೆ ಸಾಗಿ ಬಂದ ಹಾದಿ ಬರೋಬ್ಬರಿ ೩೪ ವರ್ಷ. ೧೯೮೫ರಲ್ಲಿ ಕುಂದಾಪುರದ ಮುಖ್ಯರಸ್ತೆಯಲ್ಲಿ ಆಚಾರ್ಯ ಪುಸ್ತಕ ಮಳಿಗೆ ಪ್ರಾರಂಭಿಸಿದ ಆಚಾರ್ಯರು ವಾರಪತ್ರಿಕೆ, ದಿನಪತ್ರಿಕೆಗಳು, ಹೆಸರಾಂತ ಲೇಖಕರ ಪುಸ್ತಕಗಳನ್ನು […]