ಇವರ ಕೈ ರುಚಿಯ ಸಕ್ಕರೆ ಮಿಠಾಯಿ, ಬತ್ತಾಸು ತಿಂದ್ರೆ ಆಹಾ ಅಂತೀರಾ! : ಇವರು ಪೆರ್ಡೂರಿನ ಸ್ವೀಟ್ ಸ್ಪೆಷಲಿಸ್ಟ್ !
“ಫೈವ್ star ತಿಂದರೆ ಕಳೆದೇ ಹೋಗ್ತೀರಿ” ಅನ್ನೋ ಚಾಕ್ಲೇಟ್ ಜಾಹೀರಾತನ್ನು ನೋಡಿ ನಾವೆಲ್ಲ ಬಾಯಲ್ಲಿ ನೀರು ಸುರಿಸಿರಬಹುದು. ಆದರೆ ಫೈವ್ star ಅನ್ನೇ ಮೀರಿದ ಸಹಜ ಸುಂಗಂಧದ, ಆಪ್ತ ರುಚಿಯ ಈ ಸಿಹಿತಿಂಡಿ ತಿಂದರೆ ಸಾಕು, ಬಾಯಿ “ಆಹಾ ಏನ್ ರುಚಿ” ಅನ್ನುತ್ತದೆ, ಈ ಮಧುರ ತಿಂಡಿಯ ಹಿತಾನುಭವವನ್ನು ವ್ಯಕ್ತಪಡಿಸಲು ಸಾಧ್ಯವಾಗದೇ, ಹಾಗೇ ಚಪ್ಪರಿಸುತ್ತ ಇನ್ನೊಂದು ಪೀಸನ್ನು ಕೈಗೆತ್ತಿಕೊಂಡು ತಿಂದು ಕರಗಿಸಿಯೇ ಬಿಡುತ್ತೀರಿ ! ಪೆರ್ಡೂರಿನ ಯುವಕ ಕೀರ್ತಿ ಶೇಟ್ ಅವರ ಕೈರುಚಿಯಲ್ಲಿ ತಯಾರಾದ ಈ ಸಿಹಿ […]
ಉಸೇನ್ ಬೋಲ್ಟ್ ಓಟ ಮೀರಿಸಿದ ಶ್ರೀನಿವಾಸ ಗೌಡ: ಕಂಬಳದ ಓಟಗಾರನಿಗೆ ಭಾರೀ ಪ್ರಶಂಸೆ
ಮಂಗಳೂರು: ಜಗತ್ತಿನಲ್ಲಿ ಅತ್ಯಂತ ವೇಗದ ಓಟಗಾರರ ಅಂದ್ರೆ ತಟ್ಟನೆ ನೆನಪಿಗೆ ಬರುವುದು ಉಸೇನ್ ಬೋಲ್ಟ್. ವೇಗದ ಓಟದಲ್ಲಿ ಈತನದ್ದು ವಿಶ್ವದಾಖಲೆ. ಆದ್ರೆ ಈತನನ್ನು ಮೀರಿಸಿದ ಓಟಗಾರ ಇದ್ದಾನೆ ಅದು ಕಡಲ ನಗರಿ ನಮ್ಮ ಮಂಗಳೂರಿನಲ್ಲಿ. ಅದು ಬರೀ ಕಾಲಿನಲ್ಲಿ. ಕೆಸರು ಗದ್ದೆಯಲ್ಲಿ. ಜನಪದ ಕ್ರೀಡೆ ಕಂಬಳ ಕೂಟದಲ್ಲಿ. ಹೌದು ಉಸೇನ್ ಬೋಲ್ಟ್ 2009ರಲ್ಲಿ 100 ಮೀಟರ್ ಓಟವನ್ನು ಕೇವಲ 9.58 ಕ್ರಮಿಸಿದ್ದು ವಿಶ್ವದಾಖಲೆ. ಆದರೆ ಈ ದಾಖಲೆ ಮೀರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಮಿಜಾರು ಶ್ರೀನಿವಾಸ […]
ಒಮ್ಮೆ ಬನ್ನಿ ಕೆಮ್ಮಣ್ಣುವಿಗೆ: ಮನಮೋಹಕ ಪರಿಸರದ ನಡುವೆ ಕಯಾಕಿಂಗ್ ಮಾಡಿ ,ಖುಷಿ ಪಡಿ
ಕಯಾಕಿಂಗ್ ಮಾಡಬೇಕೆಂಬ ಆಸೆಯಾಗಿದೆಯೇ ? ಬನ್ನಿ ಉಡುಪಿಯ ಕೆಮ್ಮಣ್ಣಿಗೆ. ಪ್ರಕೃತಿಯ ರಮಣೀಯತೆಯ ಮಡಿಲಿಗೆ. ಕೆಮ್ಮಣ್ಣು ಪರಿಸರದ ತಿಮ್ಮನ ಕುದುರು ದ್ವೀಪ ಸ್ವರ್ಣನದಿಯ ಮುಖಜಭೂಮಿ. ಹತ್ತಿರದಲ್ಲೆ ಡೆಲ್ಟಾ ಬೀಚ್ ನ ವಿಹಂಗಮ ದೃಶ್ಯ. ಇಲ್ಲಿಯ ಪರಿಸರದ ಅಪೂರ್ವ ನೋಟ ಪ್ರವಾಸಿಗರ ಕಣ್ಣಿಗೆ ಹಬ್ಬ. ಬನ್ನಿ ಕಯಾಕಿಂಗ್ ಮಾಡಿ: ಇಲ್ಲಿನ ನೀರಿನ ಮಟ್ಟ, ದೋಣಿ ವಿಹಾರ, ಮೀನುಗಾರಿಕೆ ಮತ್ತು ಇತರ ಚಟುವಟಿಕೆಗಳಿಗೆ ಸುರಕ್ಷಿತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತೂಗು ಸೇತುವೆ ನಿರ್ಮಿಸಿರುವುರಿಂದ ಪ್ರವಾಸಿಗರಿಗೆ ದ್ವೀಪಪ್ರದೇಶಕ್ಕೆ ಸಾಗಲು ಪ್ರಯೋಜನವಾಗಿದೆ. ಒಂದೆಡೆ ತಳುಕು […]
ಕಾಲಿಗೆ ಕೋಳ ಬಿಗಿದು ಪಂಚಗಂಗಾವಳಿ ನದಿಯಲ್ಲಿ ಈಜಿದ ಛಲಗಾರ: ದಾಖಲೆ ಬರೆದ್ರು ಖಾರ್ವಿಕೇರಿಯ ಸಂಪತ್
-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಇಲ್ಲಿನ ಖಾರ್ವಿಕೇರಿಯ ಈಜು ಪ್ರತಿಭೆ ಕುಂದಾಪುರ ಭಂಡಾರ್ಸ್‍ಕಾರ್ಸ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಸಂಪತ್ ಡಿ ಖಾರ್ವಿ ಕಾಲಿಗೆ ಸರಪಳಿ ಕಟ್ಟಿ 25ಕಿಮೀ ಈಜುವ ಮೂಲಕ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಭಾನುವಾರ ಮಧ್ಯಾಹ್ನ 2ಗಂಟೆಗೆ ಬಸ್ರೂರು ರೈಲು ಸೇತುವೆ ಬಳಿಯಿಂದ ನದಿಗೆ ಇಳಿದು ಈಜಲು ಆರಂಭಿಸಿದ ಸಂಪತ್ ಸಂಜೆ 5ಗಂಟೆ 5ನಿಮಿಷಕ್ಕೆ 25ಕಿ.ಮೀ ದೂರದ ಗಂಗೊಳ್ಳಿ ಬಂದರುವಿಗೆ ತಲುಪಿದ್ದಾರೆ. ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿಯವರು ಸಂಪತ್ ಅವರ ಕಾಲುಗಳಿಗೆ ಮಧ್ಯಾಹ್ನ […]
ಮಾಳದ ಈ ಯುವ ಕಲಾವಿದನ ಕುಂಚದಲ್ಲಿ ಅರಳೋ ಚಿತ್ರ ನೋಡಿದ್ರೆ ಹುಬ್ಬೇರಿಸ್ತೀರಿ !:
ಈ ಚಿತ್ರ ಕಲಾವಿದನ ಕುಂಚದಲ್ಲಿ ಅರಳಿದ ಚಿತ್ರಗಳನ್ನು ನೋಡ್ತಾ ಇದ್ರೆ ನೀವು ಮೈಮರೆತು ಬಿಡುತ್ತೀರಿ, ಈ ಕಲಾವಿದನ ಜಾಣ್ಮೆ ಯಿಂದ ಅರಳುವ ಚಿತ್ರ ಬಲು ಚಂದವೋ ಚಂದ. ಇಂತಹ ಬೆರಗಿನ ಚಿತ್ರ ಬಿಡಿಸುವ ದೇಶಿ ಕಲೆಯ ಅಪ್ಪಟ ಕಲಾಕಾರನೇ ಸಂತೋಷ್ ಮಾಳ. ಸಂತೋಷ್ ಮೂಲತಃ ಕಾರ್ಕಳ ತಾಲೂಕಿನ ಮಾಳ ಗ್ರಾಮದವರು. ವೃತ್ತಿಯ ಜೊತೆಗೆ ಇವರಿಗೆ ಚಿತ್ರವೂ ಒಂದು ಚಂದದ ಹವ್ಯಾಸ. ತುಳುನಾಡಿನ ಯಕ್ಷಗಾನ, ಜನಪದ, ಗ್ರಾಮೀಣ ಸೊಗಡಿನ ಚಿತ್ರಗಳು ಇವರ ಕುಂಚದಲ್ಲಿ ಅರಳಿದೆ. ಆ ಎಲ್ಲಾ ಚಿತ್ರಗಳು […]